We will decide on alliance only after results are announced - JDS State President CM Ibrahim
ಬೆಂಗಳೂರು:
ಕರ್ನಾಟಕ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಮೈತ್ರಿ ಬಗ್ಗೆ ನಿರ್ಧಾರಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ಜಾರೆ.
ಇಬ್ರಾಹಿಂ ಮಾತನಾಡಿ ‘ರಾಷ್ಟ್ರೀಯ ಪಕ್ಷಗಳ ಬಳಿ ದುಡ್ಡು ಇದೆ, ನಮ್ಮ ಬಳಿ ಏನೂ ಇಲ್ಲ. ಹಣ ಇರುವುದರಿಂದ ಎರಡೂ ಪಕ್ಷಗಳು ಸರ್ವೆ ಮಾಡಿಸಿಕೊಂಡಿವೆ. ಜೆಡಿಎಸ್ ರಾಜ್ಯದಲ್ಲಿ ಕಿಂಗ್ ಮೇಕರ್ ಆಗಲಿದೆ. ಸರ್ಕಾರ ರಚಿಸುವ ವಿಶ್ವಾಸವನ್ನು ಹೊರ ಹಾಕಿದ್ದಾರೆ. ರಾಷ್ಟ್ರೀಯ ಪಕ್ಷಗಳ ಬಳಿ ದುಡ್ಡು ಇದೆ, ನಮ್ಮ ಬಳಿ ಏನೂ ಇಲ್ಲ.
ಹಣ ಇರುವುದರಿಂದ ಎರಡೂ ಪಕ್ಷಗಳು ಸರ್ವೆ ಮಾಡಿಸಿಕೊಂಡಿವೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸ ರಾಷ್ಟ್ರೀಯ ಪಕ್ಷಗಳು ಮಾಡಿವೆ. ಜೆಡಿಎಸ್ ಪಕ್ಷ ಯಾವುದಕ್ಕೂ ಹಿಗ್ಗುವುದಿಲ್ಲ, ಕುಗ್ಗುವುದೂ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತೆ. ಈ ಚುನಾವಣೆ ದುಡ್ಡಿನಲ್ಲಿ ನಡೆದಿದೆ. ನಮ್ಮ ಅಭ್ಯರ್ಥಿಗಳು ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ ಎಂದರು.
