Home Uncategorized WhatsApp New Features: ಡೆಸ್ಕ್​ಟಾಪ್ ಬಳಕೆದಾರರಿಗೆ ಎರಡು ಹೊಸ ಫೀಚರ್: ವಾಟ್ಸ್​ಆ್ಯಪ್​ನಿಂದ ವಿಭಿನ್ನ ಪ್ರಯತ್ನ

WhatsApp New Features: ಡೆಸ್ಕ್​ಟಾಪ್ ಬಳಕೆದಾರರಿಗೆ ಎರಡು ಹೊಸ ಫೀಚರ್: ವಾಟ್ಸ್​ಆ್ಯಪ್​ನಿಂದ ವಿಭಿನ್ನ ಪ್ರಯತ್ನ

29
0

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಈ ವರ್ಷ ಪರಿಚಯಿಸಿರುವ ಫೀಚರ್​ಗಳಿಗೆ ಲೆಕ್ಕವಿಲ್ಲ. 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡ ವಾಟ್ಸ್​ಆ್ಯಪ್ ಅನ್ನು ಇಂದು ವಿಶ್ವದಲ್ಲಿ ಬಳಸುವವರ ಸಂಖ್ಯೆ 2 ಬಿಲಿಯನ್​ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾರಕ್ಕೆ ಒಂದು ಹೊಸ ಫೀಚರ್​ಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್​ಆ್ಯಪ್​ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್​ಗಳು ಬರಲಿಕ್ಕಿದ್ದು ಪರೀಕ್ಷಾ ಹಂತದಲ್ಲಿದೆ. ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುತ್ತಿದ್ದ ವಾಟ್ಸ್​ಆ್ಯಪ್ (WhatsApp) ಈಗೀಗ ವೆಬ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆನ್ನು ನೀಡುತ್ತಿದೆ. ಇದೀಗ ಡೆಸ್ಕ್​ಟಾಪ್‌ನಲ್ಲಿ (Desktop) ವಾಟ್ಸ್‌ಆ್ಯಪ್‌ ಬಳಸುವವರಿಗೆ ಎರಡು ಹೊಸ ಆಯ್ಕೆಯನ್ನು ನೀಡಲು ಕಂಪನಿ ಮುಂದಾಗಿದೆ.

ವಾಟ್ಸ್​ಆ್ಯಪ್ ತನ್ನ ವೆಬ್ ಬಳಕೆದಾರರಿಗೆ ಶೇರ್ ಕಾಂಟೆಕ್ಟ್ (Share Contact) ಮತ್ತು ಮ್ಯೂಟ್ ಶಾರ್ಟ್​ಕಟ್ ಎಂಬ ಎರಡು ಹೊಸ ಫೀಚರ್​​ಗಳನ್ನು ಪರಿಚಯಿಸುತ್ತಿದೆ. ಶೇರ್ ಕಾಂಟೆಕ್ಟ್ ಆಯ್ಕೆಯ ಮೂಲಕ ಬಳಕೆದಾರರು ಒಂದು ನಂಬರ್ ಅನ್ನು ಬೇರೆ ಅವರಿಗೆ ಹಂಚಿಕೊಳ್ಳಲು ವಿಶೇಷ ಆಯ್ಕೆ ಸಿಗಲಿದೆ. ಇದರ ಮೂಲಕ ನೀವು ಫ್ಯಾಮಿಲಿ ಸ್ಹೇಹಿತರಿಗೆ ಒಮ್ಮೆಲೆ ಕಾಂಟೆಕ್ಟ್ ಅನ್ನು ಕಳುಹಿಸಬಹುದು. ಅಂತೆಯೆ ಮ್ಯೂಟ್ ಶಾರ್ಟ್​ಕಟ್ ಎಂಬ ಆಯ್ಕೆ, ಇದು ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಒಂದು ಗ್ರೂಪ್ ಅನ್ನು ತೆರೆದಾಗ ಕಾಣಿಸುತ್ತದೆ. ಗ್ರೂಪ್​ನ ಮೇಲ್ಬಾಗದಲ್ಲಿ ಮ್ಯೂಟ್ ಮಾಡುವ ಡೈರೆಕ್ಟ್ ಶಾರ್ಟ್​ಕಟ್ ಆಯ್ಕೆ ನೀಡಲಾಗುತ್ತಿದೆ. ಇದನ್ನು ಆ್ಯಕ್ಟಿವ್ ಮಾಡಿದಲ್ಲಿ ಆ ಗ್ರೂಪ್​ಗೆ ಬಂದ ಯಾವುದೇ ಮೆಸೇಜ್ ಬಗ್ಗೆ ನಿಮಗೆ ವಾಟ್ಸ್​ಆ್ಯಪ್​ ಅಲರ್ಟ್ ಮಾಡುವುದಿಲ್ಲ. ಈ ಎರಡೂ ಆಯ್ಕೆ ಸದ್ಯ ವಾಟ್ಸ್​ಆ್ಯಪ್ ಡೆಸ್ಕ್​ಟಾಪ್ ಬೇಟಾ ಬಳಕೆದಾರರಿಗೆ ಲಭ್ಯವಿದೆ.

ಸ್ಕ್ರೀನ್‌ ಲಾಕ್‌ ಫೀಚರ್:

ಇನ್ನು ಡೆಸ್ಕ್​ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸುವವರಿಗೆ ಸದ್ಯದಲ್ಲೇ ಸ್ಕ್ರೀನ್‌ ಲಾಕ್‌ ಎಂಬ ಹೊಸ ಆಯ್ಕೆ ಸಿಗಲಿದೆ. ವಾಟ್ಸ್​ಆ್ಯಪ್ ಹಿಂದಿನಿಂದಲೂ ಬಳಕೆದಾರರ ಪ್ರೈವಸಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. ಇದೀಗ ಭದ್ರತೆಯನ್ನು ಮತ್ತಷ್ಟು ಗಟ್ಟಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ವಾಟ್ಸ್‌ಆ್ಯಪ್‌ ವೆಬ್​ನಲ್ಲಿ ಬರುವ ಸ್ಕ್ರೀನ್‌ ಲಾಕ್‌ ಎಂಬ ಹೊಸ ಫೀಚರ್​ನಲ್ಲಿ ವಾಟ್ಸ್​ಆ್ಯಪ್ ಓಪನ್‌ ಮಾಡಿದ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್‌ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್​​ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಹಾಗಂತ ಇದು ಕಡ್ಡಾಯವಲ್ಲ. ಬಳಕೆದಾರರು ಈ ಸ್ಕ್ರೀನ್‌ ಲಾಕ್‌ ಫೀಚರ್‌ ಅನ್ನು ಬೇಕಾದಾಗ ಮಾತ್ರ ಉಪಯೋಗಿಸಬಹುದು.

ಸ್ಟೇಟಸ್​ನಲ್ಲಿ ವಾಯ್ಸ್ ನೋಟ್:

ಸದ್ಯದಲ್ಲೇ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದಂತೆ. ವಾಯ್ಸ್ ನೋಟ್ ಅನ್ನು ಸ್ಟೇಟಸ್​ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಐಒಎಸ್ ಬಳಕೆದಾರರಿಗೆ ಸಿಗಲಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದು. ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಂದರೆ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್​ಗಳ ಕಾಲ ಇದು ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್​ಕ್ರಿಪ್ಟೆಡ್ ಆಗಿದೆ. ಸದ್ಯಕ್ಕೆ ಈ ಆಯ್ಕೆ ಐಒಎಸ್ ಬೇಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.

LEAVE A REPLY

Please enter your comment!
Please enter your name here