Home Uncategorized Whatsapp New video Record: ವಾಟ್ಸಾಪ್‌’ನಲ್ಲಿ ಹೊಸ ವಿಡಿಯೋ ರೆಕಾರ್ಡ್‌ ಫೀಚರ್ಸ್ ಗೊತ್ತಾ?

Whatsapp New video Record: ವಾಟ್ಸಾಪ್‌’ನಲ್ಲಿ ಹೊಸ ವಿಡಿಯೋ ರೆಕಾರ್ಡ್‌ ಫೀಚರ್ಸ್ ಗೊತ್ತಾ?

22
0

ವಾಟ್ಸಾಪ್‌ ಸಾಕಷ್ಟು ಬಳಕೆದಾರರಿಗೆ ನೆರವಾಗುವ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌. ತನ್ನ ಬಳಕೆದಾರರಿಗೆ ನೆರವಾಗುವ ಸಲುವಾಗಿ ಮೆಟಾ ಒಡೆತನದ ಈ ಮೆಸೇಜಿಂಗ್ ಆಪ್ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಹೊಸ ವಿಡಿಯೋ ಫೀಚರ್ ಏನೆಂದರೆ, ವಾಟ್ಸಾಪ್ ಬಳಕೆದಾರರು ಈಗ ನೇರವಾಗಿಯೇ ಚಾಟ್‌ನಲ್ಲಿಯೇ ವಿಡಿಯೋ ರೆಕಾರ್ಡ್‌ ಮಾಡಿ ಅದನ್ನು ಹಂಚಿಕೊಳ್ಳಬಹುದು.

ವಿಡಿಯೋ ಸಂದೇಶ ಕಳುಹಿಸುವುದು ಹೇಗೆ…?
ತಕ್ಷಣ ಸಂದೇಶವನ್ನು ಕಳುಹಿಸುವುದಕ್ಕೆ ಇದೂ ಉತ್ತಮ ಮಾರ್ಗಗಳಲ್ಲಿ ಒಂದು. ನೀವು ಕೂಡಾ ಈ ವೈಶಿಷ್ಟ್ಯವನ್ನು ಪ್ರಯತ್ನಿಸಲು ಬಯಸಿದರೆ, ನಿಮ್ಮ ಕುಟುಂಬದವರು ಅಥವಾ ಸ್ನೇಹಿತರಿಗೆ ವಿಡಿಯೋ ಮೂಲಕ ಮೆಸೇಜ್ ಕಳುಹಿಸುವ ಪ್ಲ್ಯಾನ್ ಮಾಡುತ್ತಿದ್ದರೆ ಏನು ಮಾಡಬೇಕು ಎಂಬುದನ್ನು ಇಲ್ಲಿ ಹಂತ ಹಂತವಾಗಿ ನೀಡಲಾಗಿದೆ.

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ
ನೀವು ಯಾರಿಗೆ ಅಥವಾ ಯಾವ ಗ್ರೂಪ್‌ಗೆ ವಿಡಿಯೋ ಸಂದೇಶ ಕಳುಹಿಸಲು ಬಯಸುತ್ತೀರೋ ಆ ವಾಟ್ಸಾಪ್ ಚಾಟ್‌ ತೆರೆಯಿರಿ
ಅಲ್ಲಿ ನಿಮಗೆ ವಿಡಿಯೋ ಕ್ಯಾಮೆರಾ ಐಕಾನ್ ಕಾಣಿಸುತ್ತದೆ
ಈ ವಿಡಿಯೋ ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ. ಇದಾದ ಬಳಿಕ ವಾಟ್ಸಾಪ್ ನಿಮಗೆ ಮೂರು ಎಣಿಕೆಗಳ ಕೌಂಟ್‌ಡೌನ್ ನೀಡುತ್ತದೆ. ಆ ಬಳಿಕ ನೀವು ವಿಡಿಯೋ ಸಂದೇಶವನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ.
ವಿಡಿಯೋ ರೆಕಾರ್ಡ್ ಪೂರ್ಣಗೊಂಡ ನಂತರ ಇದು ಮೆಸೇಜ್ ಸ್ವೀಕರಿಸುವವರಿಗೆ ತಲುಪುತ್ತದೆ

 

The post Whatsapp New video Record: ವಾಟ್ಸಾಪ್‌’ನಲ್ಲಿ ಹೊಸ ವಿಡಿಯೋ ರೆಕಾರ್ಡ್‌ ಫೀಚರ್ಸ್ ಗೊತ್ತಾ? appeared first on Ain Live News.

LEAVE A REPLY

Please enter your comment!
Please enter your name here