ಬೆಂಗಳೂರು:
ರೈತರ ಕಾಳಜಿಗಾಗಿ ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಆರಂಭಿಸುವಂತೆ ನಾನು ಸರ್ಕಾರಕ್ಕೆ ಒತ್ತಾಯಿಸಿದ್ದೆ.ಅಂತಹದರಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ನಾನು ಒತ್ತಾಯಿಸಿದ್ದೇನೆ ಎಂದು ಆರೋಪಿಸುತ್ತಿರುವುದು ಸರಿಯಲ್ಲ. 400 ಕೋ.ರೂ.ನಷ್ಟು ಅದರಲ್ಲಿ ಭ್ರಷ್ಟಾಚಾರವಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಹಿಂದೆ ಸಿಎಂ ಆಗಿದ್ದಾಗ ಏಕೆ ಈ ಬಗ್ಗೆ ಮಾತನಾಡಲಿಲ್ಲ. ಈಗ ಏಕೆ ಆರೋಪ ಮಾಡುತ್ತಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಮಂಡ್ಯದಲ್ಲಿ ಕಾರ್ಖಾನೆಯನ್ನು ಯಾವುದೇ ಮಾಡೆಲ್ ನಲ್ಲಿ ಬೇಕಾದರೂ ತೆರೆಯಲಿ. ಅದರ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು, ಸರ್ಕಾರವೇ ಅದನ್ನು ಪ್ರಾರಂಭ ಮಾಡಲೆಂದು ನಾನು ಒತ್ತಾಯ ಮಾಡುತ್ತಲೇ ಇದ್ದೇನೆ.ನಾನು ಖಾಸಗಿಕರಣದಲ್ಲೇ ಆಗಬೇಕೆಂದು ಹೇಳಿಲ್ಲ.ನನಗೆ ಯಾವುದೇ ವಿರೋಧವಿಲ್ಲ.ಮೈಶುಗರ್ ಅಧಿಕಾರಿಗಳು ಇದನ್ನು ಸರ್ಕಾರ ನಡೆಸಲು ಕಷ್ಟ ಎಂದಿದ್ದಾರೆ.ನಾನು ಖಾಸಗಿಯವರಿಗೆ ಕೊಡಿ ಎಂದು ಒತ್ತಾಯಿಸಿಲ್ಲ.ನಾನು ಪ್ರತಿನಿತ್ಯ ಒತ್ತಾಯಿಸುತ್ತಲೇ ಇದ್ದೇನೆ.ನಾನು ಖಾಸಗಿಕರಣದಲ್ಲೇ ಆಗಬೇಕಿಂದಿಲ್ಲ ಮಾಜಿ ಸಿಎಂ ಹೆಚ್ಡಿಕೆಗೆ ಸುಮಲತಾ ಟಾಂಗ್ ನೀಡಿದರು.
ಮುಂದೆ ಸಂಸದೆ ಆಗಲ್ಲವೆಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಜನ ಯಾರು ಆಗಬೇಕೆಂಬುದನ್ನು ಆರಿಸಿಕಳಿಸಿದ್ದಾರೆ. ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲ ಗೊತ್ತು. ದೊಡ್ಡ ಹಗರಣ ನಡೆಯುತ್ತಿದೆ. ಇದು ಗೊತ್ತಿದ್ದೂ ಕುಮಾರಸ್ವಾಮಿ ಏಕೆ ಸುಮ್ಮನಿದ್ದರು ಎನ್ನುವುದು ಗೊತ್ತಾಗುತ್ತಿದೆ. ಎಲ್ಲಾ ಕಡೆ ಜನರಿಗೆ ಗೊತ್ತಾಗುತ್ತಿದೆ.ಎಲ್ಲಾ ಕಡೆ ಹಗರಣ ಹೊರಬರುತ್ತಿದೆ. ಕುಮಾರಸ್ವಾಮಿಯವರಿಗೆ ಜನ ಯಾರನ್ನು ಆರಿಸಿ ಕಳುಹಿಸಿದ್ದಾರೆಂಬುದಿನ್ನೂ ಅರ್ಥವಾದಂತಿಲ್ಲ.ಮಾಧ್ಯಮದವರ ಮುಂದೆ ಮಹಿಳೆಯರ ಬಗ್ಗೆ ಯಾವ ರೀತಿ ಮಾತನಾಡಬೇಕೆಂಬುದು ಮಾಜಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರಿಗೆ ಇನ್ನೂ ಕನಿಷ್ಠ ಜ್ಞಾನದ ಕೊರತೆಯೂ ಇದ್ದಂತಿದೆ.ನಾನೆಂದಿಗೂ ಇಂತಹ ಮಾತುಗಳಿಗೆ ತಲೆಕೆಡಿಸಿಕೊಂಡಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ.ಅವರ ಈ ಮಾತುಗಳಿಂದಲೇ ಅವರ ಸಂಸ್ಕಾರ ಎಂತಹದು ಎನ್ನುವುದು ಗೊತ್ತಾಗುತ್ತಿದೆ.ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದನ್ನ ಬಿಚ್ಚಿಟ್ಟುಕೊಳ್ಳುತ್ತಿದ್ದಾರೆ ಎಂದು ಸುಮಲತಾ ತಿರುಗೇಟು ನೀಡಿದರು.
ಕೆ.ಆರ್.ಎಸ್. ಬಗ್ಗೆ ನಾನು ಸಂಸದೆಯಾಗಿ ಕಾಳಜಿವಹಿಸುತ್ತಿದ್ದೇನೆ.ಈ ಬಗ್ಗೆ ಕುಮಾರಸ್ವಾಮಿ ಅವರಿಗೇಕೆ ತೊಂದರೆಯಾಗುತ್ತಿದೆ.ಕೆಆರ್ ಎಸ್ನ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ಅಲ್ಲಿನರೈತರು ನನ್ನ ಮುಂದೆ ಹೇಳಿದ್ದಾರೆ.ನಾನು ಕೆಆರ್ ಎಸ್ ಬಗ್ಗೆ ಸಂಸತ್ ನಲ್ಲಿ ಮಾತನಾಡಿ ಅಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿಯೆತ್ತಿದ್ದೇನೆ. ಇದನ್ನು ಗಣಿಸಚಿವ ಮುರುಗೇಶ್ ನಿರಾಣಿ ಅವರಿಗೆ ತೋರಿಸಿದ್ದೇನೆ.ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಿದರೆ ಸಾವಿರಾರು ಕೋಟಿ ರೂ. ಸರ್ಕಾರಕ್ಕೆ ಆದಾಯ ಬರುತ್ತದೆ.ಈ ಆದಾಯ ಸರ್ಕಾರಕ್ಕೆ ತಾನೇ ಬರುವುದು.ಈಗ ಏಕೆ ಇವರು ಮುತುವರ್ಜಿ ವಹಿಸಿ ಬರುತ್ತಿದ್ದಾರೋ ಗೊತ್ತಿಲ್ಲ.ಇವತ್ತು ದಿಶಾ ಸಭೆ ಕರೆದಿದ್ದಾದರೂ ಕೆಲವು ಕಾರಣದಿಂದ ಅದನ್ನು ಸಿಎಂ ಮಾಡಲಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದರು.