ಬೆಂಗಳೂರು: ಪ್ರತಿಷ್ಟಿತ ಸಾಫ್ಟ್‌ವೇರ್ ವಿಪ್ರೋ ಕಂಪನಿಯ ಉದ್ಯೋಗಿ ಆತ್ನಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಜರುಗಿದೆ.
ಹಾಸನ ಜಿಲ್ಲೆ ಸಕಲೇಶಪುರ ಮೂಲದ 22 ವರ್ಷದ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ. ಆಗಸ್ಟ್ 16 ರಂದು ಹೋಟೆಲ್ ನಲ್ಲಿ ರೂಂ ಬಾಡಿಗೆಗೆ ಯಾಗ್ನಿಕ್ ಪಡೆದಿದ್ದ ಬಲೂನ್ ತುಂಬಲು ಬಳಸುವ ಇಲಿಯಂ ಗ್ಯಾಸ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ಯಾಸ್ ಸಿಲಿಂಡರ್ ತಂದು ಬೃಹದಾಕಾರದ ಕವರ್ ನಿಂದ ಇಡೀ ದೇಹಕ್ಕೆ ಸುತ್ತಿಕೊಂಡ , ಗ್ಯಾಸ್ ಪೈಪ್ ಬಾಯೊಳಗೆ ಹಾಕಿ , ಗ್ಯಾಸ್ ಆನ್ ಮಾಡಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.