ಬೆಂಗಳೂರು;- ಕ್ರಿಕೆಟ್ ಅಭಿಮಾನಿಗಳಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ವಿಶ್ವಕಪ್ ಕ್ರಿಕೆಟ್ನ 5 ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಆತಿಥ್ಯವಹಿಸುತ್ತಿದೆ.
ಹೀಗಾಗಿ ವೀಕ್ಷಣೆಗೆ ತೆರಳುವ ಅಭಿಮಾನಿಗಳಿಗೆ ಬಿಎಂಆರ್ಸಿಎಲ್ ಸಿಹಿಸುದ್ದಿ ನೀಡಿದೆ. ಪಂದ್ಯ ವೀಕ್ಷಿಸಿ ವಾಪಸಾಗುವಾಗ ಮೆಟ್ರೋ ಬಳಸುವವರಿಗೆ ರಿಟರ್ನ್ ಟಿಕೆಟ್ ಬೆಲೆಯನ್ನು 50 ರೂ. ನಿಗದಿಪಡಿಸಲಾಗಿದೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ, ಅಕ್ಟೋಬರ್ 26 ರಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ, ನವೆಂಬರ್ 4 ರಂದು ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ, ನವೆಂಬರ್ 9 ರಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಹಾಗು ಕೊನೆಯ ನವೆಂಬರ್ 12 ರಂದು ಭಾರತ ಮತ್ತು ನೆದರ್ಲೆಂಡ್ಸ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.
ಪೇಪರ್ ಟಿಕೆಟ್ಗಳನ್ನು ಆಯಾ ದಿನಗಳಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿಯೂ ಬೆಳಿಗ್ಗೆ 7 ಗಂಟೆಯಿಂದ ವಿತರಣೆ ಮಾಡಲಾಗುತ್ತದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆಯ ನಂತರ ಒಂದು ಪ್ರಯಾಣಕ್ಕೆ ಮಾತ್ರ ರಿಟರ್ನ್ ಟಿಕೆಟ್ ಮಾನ್ಯವಾಗಿರಲಿದೆ.
ಕಾಗದದ ಟಿಕೆಟ್ ಬೆಲೆ 50 ರೂ. ನಿಗದಿಯಾಗಿದ್ದು, ಕ್ಯೂ ಆರ್ ಕೋಡ್ ಟಿಕೆಟಿಗೆ ಶೇ.5 ರಷ್ಟು ರಿಯಾಯಿತಿಯನ್ನು ಪಂದ್ಯಗಳು ನಡೆಯುವ ದಿನಗಳಲ್ಲಿ ನೀಡಲಾಗಿದೆ. ಕ್ಯೂ ಆರ್ ಟಿಕೆಟ್ಗಳನ್ನು ವಾಟ್ಸ್ಆಯಪ್, ನಮ್ಮ ಮೆಟ್ರೋ ಆಯಪ್ ಅಥವಾ ಪೇಟಿಎಂ ಮೂಲಕ ಮುಂಗಡವಾಗಿ ಖರೀದಿಸಬಹುದು. ಇದಲ್ಲದೇ ಸ್ಮಾರ್ಟ್ ಕಾರ್ಡ್ ಮತ್ತು ಎನ್ಸಿಎಂಸಿ ಕಾರ್ಡ್ಗಳನ್ನು ಎಂದಿನಂತೆ ಉಪಯೋಗಿಸಬಹುದು. ಕಬ್ಬನ್ ಪಾರ್ಕ್ ಮತ್ತು ಎಂ.ಜಿ.ರಸ್ತೆಯ ಮೆಟ್ರೋ ಟಿಕೆಟ್ ಕೌಂಟರ್ಗಳಲ್ಲಿ ಜನದಟ್ಟಣೆ ತಗ್ಗಿಸಲು ಈ ವ್ಯವಸ್ಥೆ ಕೈಗೊಳ್ಳಲಾಗಿದೆ.
The post World Cup: ಕ್ರಿಕೆಟ್ ಅಭಿಮಾನಿಗಳಿಗೆ ನಮ್ಮ ಮೆಟ್ರೋದಿಂದ ವಿಶೇಷ ವ್ಯವಸ್ಥೆ appeared first on Ain Live News.
