ಚೆನ್ನೈ: ಏಕದಿನ ಕ್ರಿಕೆಟ್ ವಿಶ್ವಕಪ್ (World Cup 2023) ಟೂರ್ನಿಯಲ್ಲಿ ಭಾರತ ಆಸೀಸ್ ತಂಡವನ್ನು ಮಣಿಸಿ ಶುಭಾರಂಭ ಕಂಡಿದೆ. ಆದ್ರೆ ಡೆಂಗ್ಯೂ ಜ್ವರದಿಂದ ಆಸ್ಪತ್ರೆ ಸೇರಿರುವ ಟೀಂ ಇಂಡಿಯಾ ಸ್ಟಾರ್ ಆಟಗಾರ ಶುಭಮನ್ ಗಿಲ್ (Shubman Gill) ಸದ್ಯ ಚೆನ್ನೈನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಅಕ್ಟೋಬರ್ 14ರಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೂ ಹಾಜರಾಗುವ ಸಾಧ್ಯತೆಗಳು ಕಡಿಮೆಯಿದೆ ಎಂದು ಹೇಳಲಾಗುತ್ತಿದೆ.
ಶುಭಮನ್ ಗಿಲ್ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದು ಪ್ಲೇಟ್‌ಲೇಟ್ಸ್‌ಗಳು ಕಡಿಮೆಯಾಗಿದ್ದು, ಅವರಿಗೆ ಇನ್ನಷ್ಟು ವಿಶ್ರಾಂತಿ ನೀಡಲು ಸೆ.11 ರಂದು ಅಫ್ಘಾನಿಸ್ತಾನ ವಿರುದ್ಧ ನಡೆಯುವ ಪಂದ್ಯಕ್ಕೂ ವಿಶ್ರಾಂತಿ ನೀಡಲಾಗಿದೆ. ಈ ನಡುವೆ ಗಿಲ್ ಪಾಕ್ (Pakistan) ಪಂದ್ಯಕ್ಕೂ ಗೈರಾಗಲಿದ್ದಾರೆ. ಆದರೇ ಇದೇ ಅಧಿಕೃತವೆಂದು ಹೇಳಲಾಗುವುದಿಲ್ಲ, ಅವರು ಸಂಪೂರ್ಣ ಚೇತರಿಕೆ ಕಂಡರೆ ತಂಡಕ್ಕೆ ಮರಳಬಹುದು. ಸದ್ಯ ವೈದ್ಯಕೀಯ ತಂಡದ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ
ಪ್ರಸಕ್ತ ವರ್ಷದಲ್ಲೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 1,200ಕ್ಕೂ ಹೆಚ್ಚು ರನ್ ಬಾರಿಸಿ ಫುಲ್ ಫಾರ್ಮ್‌ನಲ್ಲಿದ್ದ ಶುಭಮನ್ ಗಿಲ್, ಡೆಂಗ್ಯೂ ಜ್ವರದ ಕಾರಣ ಅಕ್ಟೋಬರ್ 8ರಂದು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ (Australia) ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಿದ್ದರು. ಇದರಿಂದ ಗಿಲ್ ಸ್ಥಾನದಲ್ಲಿ ಎಡಗೈ ಬ್ಯಾಟರ್ ಇಶಾನ್ ಕಿಶನ್ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು.
The post World Cup 2023: ಅಕ್ಟೋಬರ್ 14ಕ್ಕೆ ಪಾಕ್ ವಿರುದ್ಧ ಹೈವೋಲ್ಟೇಜ್ ಪಂದ್ಯ: ಗಿಲ್ ಪಾಕ್ ಪಂದ್ಯಕ್ಕೂ ಗೈರು! appeared first on Ain Live News.