ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾ (Sri Lanka) ವಿಶ್ವಕಪ್ ಪಂದ್ಯದ (World Cup 2023) ವೇಳೆ ಪಾಕ್ ತಂಡ ಅಭಿಮಾನಿಗಳಿಂದ ಭಾರೀ ಬೆಂಬಲವನ್ನು ಪಡೆದುಕೊಂಡಿತು. ಆಟಗಾರರು ಈ ವೇಳೆ ತಾಯ್ನಾಡಿನಲ್ಲೇ ಆಡಿದಷ್ಟು ಸಂಭ್ರಮಿಸಿದ್ದಾರೆ. ಪ್ರೇಕ್ಷಕರ ಪ್ರೀತಿಯಿಂದ ನನಗೆ ರಾವಲ್ಪಿಂಡಿಯಲ್ಲಿಯೇ ಪಂದ್ಯವನ್ನು ಆಡುತ್ತಿರುವಂತೆ ಭಾಸವಾಯಿತು. ಇಡೀ ತಂಡಕ್ಕೂ ಈ ಪ್ರೀತಿ ಸಿಕ್ಕಿದೆ ಎಂದು ಪಾಕ್ ಆಟಗಾರ ರಿಜ್ವಾನ್ ಹೇಳಿದ್ದಾರೆ.
ಆಟದ ವೇಳೆ `ಜೀತೇಗಾ ಭಾಯಿ ಜೀತೇಗಾ ಪಾಕಿಸ್ತಾನ್ ಜೀತೇಗಾ’ ಎಂಬ ಘೋಷಣೆಗಳು ಆಟಗಾರರನ್ನು ಹುರಿದುಂಬಿಸಿದವು. ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಅವರು ಶ್ರೀಲಂಕಾ ವಿರುದ್ಧದ ವಿಶ್ವಕಪ್ 2023 ಪಂದ್ಯದಲ್ಲಿ ತಮ್ಮ ದಾಖಲೆಯ 345 ರನ್ ಚೇಸ್‍ನಲ್ಲಿ 34 ನೇ ಓವರ್‍ನ ಅಂತ್ಯದ ನಂತರ ಈ ಧ್ವನಿ ಕೇಳಿ ಬಂದಿದೆ. ಈ ಬೆಂಬಲ ಆಟಗಾರರಿಗೆ ತಾವು ಪಾಕ್‍ನ ಹೊರಗಿದ್ದೇವೆ ಎಂಬ ಭಾವವನ್ನು ಅಳಿಸಿ ಹಾಕಿದೆ ಎಂದು ಆಟಗಾರರು ಹೇಳಿಕೊಂಡಿದ್ದಾರೆ.
ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ..! ‘ತಾಯ್ತನಕ್ಕೆ ಕಳಂಕ’ ಎಂದ ಹೈಕೋರ್ಟ್
ಶ್ರೀಲಂಕಾ ಕೂಡ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದೆ. ವಿಶೇಷವಾಗಿ ಕುಸಾಲ್ ಮೆಂಡಿಸ್ ಮತ್ತು ಸಮರವಿಕ್ರಮ ಅವರ ಬ್ಯಾಟಿಂಗ್ ವೇಳೆ ಅಭಿಮಾನಿಗಳಿಂದ ಭಾರೀ ಬೆಂಬಲ ಪಡೆದುಕೊಂಡರು. ಟೂರ್ನಿಯಲ್ಲಿ ವಿಶ್ವದಾಖಲೆಯ ರನ್ ಚೇಸ್ ಮಾಡಿದ ಪಾಕಿಸ್ತಾನ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಜಯ ಸಾಧಿಸಿತು. ಗೆಲ್ಲಲು 345 ರನ್‍ಗಳ ಕಠಿಣ ಸವಾಲು ಪಡೆದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅಜೇಯ ಶತಕ ಮತ್ತು ಅಬ್ದುಲ್ಲಾ ಶಫೀಕ್ ಅವರ ಶತಕದ ಆಟದಿಂದ 48.2 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 345 ರನ್ ದಾಖಲಿಸುವ ಮೂಲಕ ಸತತ ಎರಡನೇ ಜಯ ಸಾಧಿಸಿತು.
The post World Cup 2023: ಶ್ರೀಲಂಕಾ ವಿರುದ್ಧದ ಗೆಲುವನ್ನು ‘ಗಾಜಾ ಜನರಿಗೆ ಅರ್ಪಿಸಿದ ರಿಜ್ವಾನ್ appeared first on Ain Live News.