Home Uncategorized WorldCup: ಪಾಕ್‌ ಪಂದ್ಯಕ್ಕೆ ಕೇಸರಿ ಜೆರ್ಸಿಯಲ್ಲಿಭಾರತ ಕಣಕ್ಕೆ ಇಳಿಯುತ್ತಾರಾ?: BCCI ಹೇಳಿದ್ದೇನು?

WorldCup: ಪಾಕ್‌ ಪಂದ್ಯಕ್ಕೆ ಕೇಸರಿ ಜೆರ್ಸಿಯಲ್ಲಿಭಾರತ ಕಣಕ್ಕೆ ಇಳಿಯುತ್ತಾರಾ?: BCCI ಹೇಳಿದ್ದೇನು?

19
0

ಮುಂಬೈ: ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಆಟಗಾರರು ಕೇಸರಿ ಜೆರ್ಸಿ (Orange Jersey) ಧರಿಸಿ ಕಣಕ್ಕೆ ಇಳಿಯುತ್ತಾರಾ? – ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಮಾಧ್ಯಮವೊಂದು ಅ.14 ಶನಿವಾರ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿಯಲಿದೆ ಎಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ.

ವರದಿ ಪ್ರಕಟವಾದ ಬೆನ್ನಲ್ಲೇ ಬಿಸಿಸಿಐ (BCCI) ಪ್ರತಿಕ್ರಿಯಿಸಿದೆ. ಟೀಂ ಇಂಡಿಯಾ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ನೀಲಿ ಬಣ್ಣದ ಜೆರ್ಸಿ ಧರಿಸಿ ಆಡಲಿದ್ದಾರೆ ಎಂದು ಬಿಸಿಸಿಐ ಖಜಾಂಚಿಯಾಗಿರುವ ಆಶಿಶ್ ಶೆಲಾರ್ ಸ್ಪಷ್ಟಪಡಿಸಿದ್ದಾರೆ.

2019ರಲ್ಲಿ ಕೇಸರಿ ಜೆರ್ಸಿ ಧರಿಸಿದ್ದ ಟೀಂ ಇಂಡಿಯಾ:
ಇಂಗ್ಲೆಂಡಿನಲ್ಲಿ ನಡೆದ 2019ರ ವಿಶ್ವಕಪ್‌ ಕ್ರಿಕೆಟ್‌ ವೇಳೆ ಭಾರತ ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿತ್ತು. ಫುಟ್‌ಬಾಲ್‌ ಆಡುವಾಗ ಎರಡು ತಂಡಗಳ ಒಂದೇ ಬಣ್ಣದ ಜರ್ಸಿ ಧರಿಸುವುದಿಲ್ಲ. ಈ ನಿಯಮವನ್ನೇ ಐಸಿಸಿ ಕ್ರಿಕೆಟಿಗೂ ಪರಿಚಯಿಸಿತ್ತು. ಇಂಗ್ಲೆಂಡ್ (England) ಮತ್ತು ಭಾರತ ನೀಲಿ ಜೆರ್ಸಿ ಹೊಂದಿತ್ತು. ಇಂಗ್ಲೆಂಡ್‌ ತವರು ತಂಡವಾಗಿದ್ದ ಕಾರಣ ಭಾರತ ನೀಲಿ ಮತ್ತು ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿತ್ತು.

The post WorldCup: ಪಾಕ್‌ ಪಂದ್ಯಕ್ಕೆ ಕೇಸರಿ ಜೆರ್ಸಿಯಲ್ಲಿಭಾರತ ಕಣಕ್ಕೆ ಇಳಿಯುತ್ತಾರಾ?: BCCI ಹೇಳಿದ್ದೇನು? appeared first on Ain Live News.

LEAVE A REPLY

Please enter your comment!
Please enter your name here