Home Uncategorized WPL ಸೀಸನ್‌-2ನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿ ಗುಜರಾತ್‌ ಜೈಂಟ್ಸ್‌

WPL ಸೀಸನ್‌-2ನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿ ಗುಜರಾತ್‌ ಜೈಂಟ್ಸ್‌

31
0

ಬೆಂಗಳೂರು: ವುಮೆನ್ಸ್‌ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನ 2ನೇ ಸೀಸನ್‌ ಆರಂಭವಾಗಿದೆ. ಲೀಗ್‌ನ ಅತ್ಯಂತ ನೆಚ್ಚಿನ ತಂಡಗಳಲ್ಲಿ ಒಂದಾದ ಅದಾನಿ ಸ್ಪೋರ್ಟ್ಸ್‌ಲೈನ್‌ ಮಾಲೀಕತ್ವದ ಗುಜರಾತ್‌ ಜೈಂಟ್ಸ್‌ ತಂಡ ಆಸ್ಟ್ರೇಲಿಯಾದ ರನ್‌ ಮಷಿನ್‌ ಬೆಥ್‌ ಮೂನಿ ನಾಯಕತ್ವದಲ್ಲಿ ಈ ವರ್ಷ ಅಬ್ಬರದ ಆಟವಾಡಲು ಸಿದ್ಧವಾಗಿದೆ.

ಮೊದಲ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ತಂಡದ ಪ್ರಧಾನ ಕೋಚ್‌ ಮೈಕೆಲ್ ಕ್ಲಿಂಗರ್, ಮೆಂಟರ್‌-ಸಲಹೆಗಾರ್ತಿ ಮಿಥಾಲಿ ರಾಜ್‌, ನಾಯಕಿ ಬೆಥ್‌ ಮೂನಿ ಹಾಗೂ ಉಪನಾಯಕಿ ಸ್ನೇಹ್‌ ರಾಣಾ, ಈ ಸೀಸನ್‌ಗಾಗಿ ತಮ್ಮ ತಯಾರಿಯ ಕುರಿತು ಸುದೀರ್ಘವಾಗಿ ಮಾತನಾಡಿದ್ದರು.

‘ನಮ್ಮ ತಂಡದಲ್ಲಿ ನಿಜವಾಗಿಯೂ ಉತ್ತಮ ರೀತಿಯ ಸಮ್ಮಿಳಿತ ಕಾಣುತ್ತಿದೆ. ಯಾಕೆಂದರೆ, ಕಳೆದ ಕೆಲ ಸಮಯದವರೆಗೂ ನಾವು ಜೊತೆಯಲ್ಲೇ ಇದ್ದೇವೆ. ಕಳೆದ ವಾರ ಕೆಲವು ವಿಚಾರಗಳಲ್ಲಿ ಕೆಲಸ ಮಾಡಿದ್ದು, ಅವುಗಳು ಈಗಾಗಲೇ ಕಾರ್ಯರೂಪಕ್ಕೂ ಬಂದಿವೆ. ಹಾಗಾಗಿ ಮೊದಲ ಪಂದ್ಯಕ್ಕಾಗಿ ನಾವು ತೀವ್ರ ನಿರೀಕ್ಷೆ ಇಟ್ಟಿದ್ದೇವೆ. ನಾಳೆ ರಾತ್ರಿ ಮೈದಾನಕ್ಕೆ ಕಾಲಿಡಲಿರುವ 11 ಮಂದಿ ಆಟಗಾರ್ತಿಯರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಅತ್ಯುತ್ತಮ ನಿರ್ವಹಣೆಯನ್ನು ತಂಡಕ್ಕಾಗಿ ನೀಡುತ್ತಾರೆ ಎನ್ನುವುದು ನನಗೆ ತಿಳಿದಿದೆ’ ಎಂದು ಬೆಥ್‌ ಮೂನಿ ಹೇಳಿದ್ದರು.

LEAVE A REPLY

Please enter your comment!
Please enter your name here