ಯಾದಗಿರಿ: ಕಳೆದ ತಿಂಗಳು ಆಂಧ್ರ ಪ್ರದೇಶದಲ್ಲಿ ಮೂರು ತಿಂಗಳು ಮಗು(Son) ಅತ್ತಿದ್ದಕ್ಕೆ ಪಾಪಿ, ಕ್ರೂರಿ ತಂದೆ (Father) ಕೊಂದಿದ್ದ. ಇದೇ ತರಹದ ಮನಕಲಕುವ ಘಟನೆ ಕರ್ನಾಟಕದ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ(Yadagir) ತಾಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ತಂದೆಯೊಬ್ಬ ಕುಡಿದ ಮತ್ತಿನಲ್ಲಿ ತನ್ನ 9 ತಿಂಗಳ ಮಗಳನ್ನ ಕೊಂದಿದ್ದಾನೆ.
ತಾನು ಮದ್ಯ ಕುಡಿಯುತ್ತಿದ್ದಾಗ ಮಗಳು ಅಳುತ್ತಿದ್ದಕ್ಕೆ ಕೋಪಗೊಂಡಿದ್ದಾನೆ. ಬಳಿಕ ಸಿಟ್ಟಿನಲ್ಲಿ ಮಗಳ ಕುತ್ತಿಗೆಯಲ್ಲಿದ್ದ ದಾರ ಹಿಡಿದು ಮೇಲೆತ್ತಿದ್ದಾನೆ. ಹೀಗಾಗಿ ಹುಸಿರು ಗಟ್ಟಿ ಮಗು ಸಾವನ್ನಪ್ಪಿದೆ. ಪತ್ನಿ ಹಾಗೂ ತಾಯಿ ಕೂಲಿ ಕೆಲಸಕ್ಕೆ ಹೋದಾಗ ನಡೆದ ಘಟನೆ ನಡೆದಿದೆ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪ ರಾಮು (30) ಪೊಲೀಸರು ಬಂಧಿಸಿದ್ದಾರೆ.
ಆಂಧ್ರದಲ್ಲೂ ನಡೆದಿತ್ತು ಇದೇ ತಹರದ ಘಟನೆ
ಪಾಪಿ ತಂದೆ ಮಗು ಅಳುತ್ತಿದ್ದನ್ನು ನೋಡಿ ಕೋಪಗೊಂಡ ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ ತಿರುಪತಿಯ ಶ್ರೀಕಾಳಹಸ್ತಿ ಶುಕಬ್ರಹ್ಮ ಆಶ್ರಮದ ಬಳಿಯ ವಾಟರ್ ಹೌಸ್ ಕಾಲೋನಿಯಲ್ಲಿ ನವೆಂಬರ್ 26ರಂದು ನಡೆದಿತ್ತು.
ಅನಿಲ್ ತನ್ನ 3 ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪಿ. ಈತನಿಗೆ ಹಾಗೂ ಈತನ ಪತ್ನಿ ಸ್ವಾತಿ ಜಗಳ ನಡೆದಿತ್ತು. ಅದೇ ವೇಳೆ ಮಗುವಿಗೂ ಜ್ವರ ಬಂದಿದ್ದರಿಂದ ಒಂದೇ ಸಮನೆ ಅಳುತ್ತಿತ್ತು. ಇದರಿಂದಾಗಿ ಕೋಪಗೊಂಡ ಅನಿಲ್ ಮಗುವನ್ನು ನೆಲಕ್ಕೆ ಎಸೆದಿದ್ದಾನೆ. ಇದರಿಂದ ಮಗುವಿನ ತಲೆಗೆ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದಿತ್ತು. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ