Home ಬೆಂಗಳೂರು ನಗರ ನಿಮ್ಮದೇ ಮನೆ ಮುಂದೆ ಕಾರ್‌ ನಿಲ್ಲಿಸಿಕೊಂಡರು ಶುಲ್ಕ ಕಟ್ಟಬೇಕು!

ನಿಮ್ಮದೇ ಮನೆ ಮುಂದೆ ಕಾರ್‌ ನಿಲ್ಲಿಸಿಕೊಂಡರು ಶುಲ್ಕ ಕಟ್ಟಬೇಕು!

88
0

ಕಾರುಗಳಿಗೆ ವಾರ್ಷಿಕ ಒಂದು ಸಾವಿರ ರೂಪಾಯಿಂದ 5000 ರೂಪಾಯಿ ವರೆಗೂ ಶುಲ್ಕ ವಿಧಿಸಲು ಬಿಬಿಎಂಪಿ ಚಿಂತನೆ

ಬೆಂಗಳೂರು:

ನಿಮ್ಮದೇ ಮನೆ ಮುಂದೆ ನಿಮ್ಮದೇ ಕಾರ್‌ ನಿಲ್ಲಿಸಿಕೊಂಡರು ಬಿಬಿಎಂಪಿಗೆ ಶುಲ್ಕ ಕಟ್ಟಬೇಕು.

ಕೋವಿಡ್ -19 ಸಾಂಕ್ರಾಮಿಕ ರೋಗದ ಕುಸಿತದಿಂದ ಇನ್ನೂ ಬಳಲುತ್ತಿರುವ ಬೆಂಗಳೂರಿಗರಿಗೆ ಬಿಜೆಪಿ ಸರ್ಕಾರ ಇನ್ನೂ ಒಂದು ಆರ್ಥಿಕ ಹೊರೆ ವಿಧಿಸಿದೆ. ಅರೇ ಇದೇನಪ್ಪ ಎಂದು ಗಾಬರಿಯಾಗಬೇಡಿ, ಫೆಬ್ರವರಿ 2 ರ ಆದೇಶದ ಪ್ರಕಾರ, ಬೆಂಗಳೂರಿಗೆ ‘ಪಾರ್ಕಿಂಗ್ ಪಾಲಿಸಿ 2.0’ ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ರಸ್ತೆ ಮೇಲೆ ಕಾರು ನಿಲ್ಲಿಸುವುದರಿಂದ ಶುಲ್ಕ ವಸೂಲಿ‌ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು ಸಣ್ಣ ಕಾರುಗಳಿಗೆ ವಾರ್ಷಿಕ ಒಂದು ಸಾವಿರ ರೂಪಾಯಿಂದ ದೊಡ್ಡ ಕಾರುಗಳಿಗೆ 5000 ರೂಪಾಯಿ ವರೆಗೂ ಶುಲ್ಕ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಆರು ತಿಂಗಳಲ್ಲಿ ಹೊಸ ಪಾರ್ಕಿಂಗ್ ಶುಲ್ಕ ಪದ್ಧತಿ ಸಿದ್ದವಾಗಲಿದ್ದು ಇನ್ನುಮುಂದೆ ಕಾರ್‌ ಹೊಂದಿರುವವರಿಗೆ ಹೆಚ್ಚುವರಿ ಹೊರೆ ಬೀಳುವುದು ಗ್ಯಾರಂಟಿ ಎನ್ನಲಾಗುತ್ತಿದೆ.

Parking_Policy_2_Bengaluru_Final

WhatsApp Image 2021 02 10 at 23.58.38
WhatsApp Image 2021 02 10 at 23.58.38 1

LEAVE A REPLY

Please enter your comment!
Please enter your name here