Home Uncategorized Zainab Abbas: ಹಾಟೆಸ್ಟ್ ಪಾಕ್ ಸ್ಪೋರ್ಟ್ಸ್ ಆ್ಯಂಕರ್ ಭಾರತದಿಂದ ಗಡಿಪಾರಾಗಿದ್ಯಾಕೆ ಗೊತ್ತಾ..?

Zainab Abbas: ಹಾಟೆಸ್ಟ್ ಪಾಕ್ ಸ್ಪೋರ್ಟ್ಸ್ ಆ್ಯಂಕರ್ ಭಾರತದಿಂದ ಗಡಿಪಾರಾಗಿದ್ಯಾಕೆ ಗೊತ್ತಾ..?

24
0

ಭಾರತ (India) ಮತ್ತು ಹಿಂದೂ ವಿರೋಧಿ (Anti Hindu) ಟ್ವೀಟ್‌ ಮಾಡಿದ್ದಕ್ಕೆ ಪಾಕಿಸ್ತಾನ (Pakistan) ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್‌ಳನ್ನು (Zainab Abbas) ಪಾಕಿಸ್ತಾನಕ್ಕೆ ಗಡೀಪಾರು ಮಾಡಿದೆ. ವಕೀಲ ವಿನೀತ್‌ ಜಿಂದಾಲ್‌ (Vineet Jindal) ಅವರು ದೆಹಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಆರೋಪ ಹೊರಿಸಿ ಜೈನಾಬ್ ಅಬ್ಬಾಸ್‌ ವಿರುದ್ಧ ದೂರು ನೀಡಿದ್ದರು.

ಅಷ್ಟೇ ಅಲ್ಲದೇ ಐಸಿಸಿ ವಿಶ್ವಕಪ್‌ (ICC World Cup) ನಿರೂಪಕಿ ಸ್ಥಾನದಿಂದ ಕೂಡಲೇ ತೆಗೆದುಹಾಕಬೇಕೆಂದು ಐಸಿಸಿ ಮತ್ತು ಬಿಸಿಸಿಐಗೆ ದೂರು ನೀಡಿದ್ದರು. ಈ ದೂರಿನ ಬೆನ್ನಲ್ಲೇ ಜೈನಾಬ್‌ಳನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿದೆ. ಈ ಸಂಬಂಧ ಸಮಾ ಟಿವಿ ಟ್ವೀಟ್‌ ಮಾಡಿದ್ದು,

 ಪಾಕಿಸ್ತಾನಿ ಕ್ರೀಡಾ ನಿರೂಪಕಿ ಝೈನಾಬ್ ಅಬ್ಬಾಸ್ ಅವರು ಸುರಕ್ಷತಾ ಕಾಳಜಿಯಿಂದ ಭಾರತದಿಂದ ನಿರ್ಗಮಿಸಿದ್ದಾರೆ. ಸದ್ಯ ಅವರು ದುಬೈನಲ್ಲಿದ್ದಾರೆ ಎಂದು ಹೇಳಿದೆ. ನಮ್ಮ ದೇಶ ಮತ್ತು ಹಿಂದೂ ಧರ್ಮವನ್ನು ಗೌರವಿಸುವವರಿಗೆ ಮಾತ್ರ ಅತಿಥಿ ದೇವೋ ಭವ. ಆದರೆ ನಮ್ಮ ಭೂಮಿಯಲ್ಲಿ ಭಾರತೀಯ ವಿರೋಧಿಗಳು ಸ್ವಾಗತಿಸುವುದಿಲ್ಲ ವಿನೀತ್‌ ಜಿಂದಾಲ್‌ ಬರೆದುಕೊಂಡಿದ್ದಾರೆ.

 

The post Zainab Abbas: ಹಾಟೆಸ್ಟ್ ಪಾಕ್ ಸ್ಪೋರ್ಟ್ಸ್ ಆ್ಯಂಕರ್ ಭಾರತದಿಂದ ಗಡಿಪಾರಾಗಿದ್ಯಾಕೆ ಗೊತ್ತಾ..? appeared first on Ain Live News.

LEAVE A REPLY

Please enter your comment!
Please enter your name here