Home Uncategorized Zameer Vs HDK: ಸರ್ಕಾರ ಪತನ ಗ್ಯಾರಂಟಿ: ಕುಮಾರಸ್ವಾಮಿ ಹೇಳಿಕೆಗೆ ಜಮೀರ್‌ ಉತ್ತರ ಹೇಗಿತ್ತು ಗೊತ್ತಾ?

Zameer Vs HDK: ಸರ್ಕಾರ ಪತನ ಗ್ಯಾರಂಟಿ: ಕುಮಾರಸ್ವಾಮಿ ಹೇಳಿಕೆಗೆ ಜಮೀರ್‌ ಉತ್ತರ ಹೇಗಿತ್ತು ಗೊತ್ತಾ?

27
0

ಬೆಂಗಳೂರು: ಸರ್ಕಾರ ಪತನ ಗ್ಯಾರಂಟಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ‘ನಾನು ಕುಮಾರಸ್ವಾಮಿ ಜೊತೆಗೆ ಇದ್ದವನು ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಎಂದು ಹೇಳಿದ್ದಾರಾ?, ಯಡಿಯೂರಪ್ಪ , ಬೊಮ್ಮಾಯಿ ಸರ್ಕಾರ ಬಿಳುತ್ತೆ ಅಂದ್ರು, ಅಮೇಲೆ ಇವರದ್ದೇ ಸರ್ಕಾರ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೇಗೆ ಸರ್ಕಾರ ಬೀಳಲು ಸಾಧ್ಯ, ಎನ್ನುವ ಮೂಲಕ ಹೆಚ್ಡಿಕೆ ಹೇಳಿಕೆಗೆ ಸಚಿವ ಜಮೀರ್ ತಿರುಗೇಟು ನೀಡಿದ್ದಾರೆ. ‘ಬಿಜೆಪಿ 104 ಶಾಸಕರು ಇದ್ದುಕೊಂಡು ಅಪರೇಷನ್ ಕಮಲ ಮಾಡಿ 4 ವರ್ಷ ಸರ್ಕಾರ ನಡೆಸಿದ್ರು, ನಾವು 137 + 3 ಒಟ್ಟು 140 ಇದ್ದೇವೆ. ಸರ್ಕಾರ ಹೇಗೆ ಬಿಳುತ್ತೆ, ಕುಮಾರಸ್ವಾಮಿ ಅವರದ್ದು ರಾತ್ರಿ ಕನಸು ಹಗಲು ಕಾಣ್ತಿದ್ದಾರೆ. ಸರ್ಕಾರ ಹೇಗೆ ಪತನಾವಾಗುತ್ತೆ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದರು.

Bigg Breaking: ಅತ್ತಿಬೆಲೆ ಪಟಾಕಿ ದುರಂತ: ರಾಜಕೀಯ, ಗಣೇಶ, ಮದುವೆಗಳಲ್ಲಿ ಪಟಾಕಿ ಬ್ಯಾನ್‌ : ಸಿಎಂ ಸೂಚನೆ

ಸರ್ಕಾರ ಹೆಂಗ್ ಪತನಾವಾಗುತ್ತೆ ಅಂತ ಕುಮಾರಸ್ವಾಮಿ ಅವರೇ ಹೇಳಬೇಕು ‌ನಾವು ಗ್ಯಾರಂಟಿಗಳನ್ನ ಕೊಡ್ತಿದ್ದೇವೆ ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ ಸರ್ ಏನೋ ಒಂದು ನಿರೀಕ್ಷೆ ಇಟ್ಟುಕೊಂಡಿದ್ದರು.. ನಮ್ಮನ್ನ ಬಿಟ್ಟು ಸರ್ಕಾರ ರಚನೆ ಮಾಡೋಕೆ ಆಗಲ್ಲ ಅಂತ ಅಂದಿಕೊಂಡಿದ್ದರು ಸಮ್ಮಿಶ್ರ ಸರ್ಕಾರ ಬರುತ್ತೆ ಅಂತಎಂದು ಹೇಳಿದರು.

ಬಿಜೆಪಿ – ಜೆಡಿಎಸ್ ಮೈತ್ರಿ ಯಿಂದ ಕಾಂಗ್ರೆಸ್ ಒಂದು ಸ್ಥಾನವೂ ಗೆಲ್ಲಲ್ಲ ಎಂಬ ಬಿಜೆಪಿ ಹೇಳಿಕೆ ವಿಚಾರ ಬಗ್ಗೆಯೂ ಮಾತನಾಡಿದ ಅವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನಾವು ಒಂದು ಸ್ಥಾನಕ್ಕೆ ಬಂದಿದ್ವಿ ಈಗ ಅದೇ ಪರಿಸ್ಥಿತಿ ಬಿಜೆಪಿ ಬರುತ್ತೆ ನಾವು ಏನು ಅನುಭವಿಸಿದ್ವೋ ಅದೇ ಪರಿಸ್ಥಿತಿ ಬಿಜೆಪಿ ಬರಲಿದೆ ಇಬ್ರಾಹಿಂ ಪಕ್ಷಕ್ಕೆ ಬಂದ್ರೆ ನಿಮ್ಗೆ ಒಪ್ಪಿಗೆ ನಾ ಎಂಬ ಪ್ರಶ್ನೆ ಗೆ  ಪಕ್ಷದ ಸಿದ್ದಾಂತ ಒಪ್ಪಿಕೊಂಡು ಯಾರುಬೇಕಾದ್ರು ಬರಬಹುದು…ನನ್ನ ಸಂಪರ್ಕದಲ್ಲಿ ಯಾರ್ ಇದ್ದಾರೆ ಎಂಬುದನ್ನ ನಾನು ಮಾಧ್ಯಮಗಳ ಮುಂದೆ ಹೇಳಲ್ಲ ಎಂದ ಜಮೀರ್

ಡಿಕೆಶಿ ಜೈಲಿಗೆ ಹೋಗ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೈ ಪ್ರತಿಕ್ರಿಯೆ ನೀಡಿದ ಅವರು, ಯಾವುದಕ್ಕೆ ಅಂತ ಕ್ಲಿಯರ್ ಆಗಿ ಹೇಳಬೇಕು ಅಲ್ವಾ ಯಾವ ಕಾರಣಕ್ಕೆ ಜೈಲಿಗೆ ಹೋಗ್ತಾರೆ ನನ್ನ ಅನಿಸಿಕೆ ಇವರು ಕಂಡಿಷನ್ ಹಾಕಿಕೊಂಡು ಅಲೈಯನ್ಸ್ ಮಾಡಿಕೊಂಡಿರಬೇಕು ಅಷ್ಟು ಕಂಫರ್ಟಬೆಲ್ ಆಗಿ ಹೇಳ್ತಿದ್ದಾರೆ ಅಂದ್ರೆ ಅಮಿತ್ ಶಾ ಜೊತೆ ಮೀಟಿಂಗ್ ಆಗಿ ಕಂಡಿಷನ್ ಹಾಕಿ ಹೇಳಿರಬಹುದು ಎಂದು ಹೇಳಿದರು.

The post Zameer Vs HDK: ಸರ್ಕಾರ ಪತನ ಗ್ಯಾರಂಟಿ: ಕುಮಾರಸ್ವಾಮಿ ಹೇಳಿಕೆಗೆ ಜಮೀರ್‌ ಉತ್ತರ ಹೇಗಿತ್ತು ಗೊತ್ತಾ? appeared first on Ain Live News.

LEAVE A REPLY

Please enter your comment!
Please enter your name here