Home Uncategorized Zika virus: ಏನಿದು ಝಿಕಾ ವೈರಸ್? ಭಾರತದಲ್ಲಿ ಇದರ ತೀವ್ರತೆ ಎಷ್ಟಿದೆ?

Zika virus: ಏನಿದು ಝಿಕಾ ವೈರಸ್? ಭಾರತದಲ್ಲಿ ಇದರ ತೀವ್ರತೆ ಎಷ್ಟಿದೆ?

19
0

ಈಗಾಗಲೇ ಕೊರೊನಾ ವೈರಸ್ (Coronavirus)ವಿಶ್ವದ್ಯಾಂತ ಜನರನ್ನು ಕಂಗೆಡಿಸುವಂತೆ ಮಾಡಿದೆ. ಆದ್ದರಿಂದ ಯಾವುದೇ ರೋಗ ಲಕ್ಷಣಗಳು ಕಂಡುಬಂದರೂ ಕೂಡ ನಿರ್ಲಕ್ಷ್ಯಿಸದಿರಿ. ಆರೋಗ್ಯದ ಮೇಲೆ ಕಾಳಜಿವಹಿಸುವುದು ಅತ್ಯಂತ ಅಗತ್ಯವಾಗಿದೆ. ಈಗಾಗಲೇ ಝಿಕಾ ವೈರಸ್ ರೋಗ ಲಕ್ಷಣಗಳು ಭಾರತದಲ್ಲಿ ಕಂಡು ಬಂದಿದ್ದು, ಕೆಲವರಲ್ಲಿ ಈ ರೋಗ ಇರುವುದು ದೃಢಪಟ್ಟಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬವ್‌ಧಾನ್ ಪ್ರದೇಶದಲ್ಲಿ 67 ವರ್ಷದ ವ್ಯಕ್ತಿಯೊಬ್ಬರಿಗೆ ಝಿಕಾ ವೈರಸ್ (Zika virus) ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ. ಸೋಂಕಿತ ವ್ಯಕ್ತಿ ನಾಸಿಕ್ ನಿವಾಸಿಯಾಗಿದ್ದು, ನವೆಂಬರ್ 6 ರಂದು ಪುಣೆಗೆ ಬಂದಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿವೆ.

ಇದು ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ನ ಮೂರನೇ ಪ್ರಕರಣವಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಸೊಳ್ಳೆ ಕಡಿತದಿಂದ ಈ ವೈರಸ್ ಸೋಂಕು ತಗುಲಿತ್ತು ಹಾಗೂ ಅದಕ್ಕಿಂತಲೂ ಮೊದಲು, ಕಳೆದ ವರ್ಷ ಜುಲೈನಲ್ಲಿ ಪುಣೆಯಲ್ಲಿ ಮೊದಲ ಬಾರಿಗೆ ಈ ರೋಗ ಲಕ್ಷಣ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿತ್ತು.
2007ರಲ್ಲಿ ಮೊದಲ ಬಾರಿಗೆ ಮೈಕ್ರೋನೇಷಿಯಾದಲ್ಲಿ ಸಾಂಕ್ರಾಮಿಕ ರೋಗವನ್ನು ಉಂಟು ಮಾಡಿತು ಎಂದು ತಿಳಿದು ಬಂದಿದೆ. ಇದು ಈಡಿಸ್ ಸೊಳ್ಳೆಯಿಂದ ಹರಡುವ ರೋಗವಾಗಿದೆ.

ಝಿಕಾ ವೈರಸ್ ಸಾಮಾನ್ಯ ಲಕ್ಷಣಗಳು:

ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿ ಜ್ವರ, ತಲೆನೋವು, ಕೀಲು ನೋವು, ಕಣ್ಣು ಕೆಂಪಾಗುವುದು ಮತ್ತು ಸ್ನಾಯು ನೋವುಗಳು ಕಂಡುಬರುತ್ತದೆ. ಇದು ಸೊಳ್ಳೆ ಕಡಿತದಿಂದ ಉಂಟಾಗುವ ರೋಗವಾಗಿದೆ. ಗರ್ಭಿಣಿಯರು ಹೆಚ್ಚಾಗಿ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಇದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಇದನ್ನು ಓದಿ: ಈ ವಿಷಕಾರಿ ಕೀಟಗಳು ನಿಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ಎಚ್ಚರ

ಝಿಕಾ ವೈರಸ್ ನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ಸೊಳ್ಳೆ ಕಡಿತದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಈ ರೋಗದಿಂದ ತಡೆಗಟ್ಟಲು ಉತ್ತಮ ಮಾರ್ಗವಾಗಿದೆ. ಪ್ರಮುಖವಾಗಿ ಗರ್ಭಿಣಿಯರು, ಬಾಣಂತಿಯರು ಸೊಳ್ಳೆಗಳ ಹೆಚ್ಚಿನ ಗಮನಹರಿಸುವುದು ಅತ್ಯಂತ ಅಗತ್ಯವಾಗಿದೆ. ಇದಕ್ಕಾಗಿ EPA-ನೋಂದಾಯಿತ ಕೀಟ ನಿವಾರಕಗಳು ಬಳಸಿವುದು ಸೂಕ್ತ ಎಂದು ಸಂಶೋಧನೆ ತಿಳಿಸಿದೆ. ಆದ್ದರಿಂದ ನಿಮ್ಮ ಮನೆಯ ಸುತ್ತಮುತ್ತ ಸ್ವಚ್ಚಗೊಳಿಸುವುದು ಅಗತ್ಯವಾಗಿದೆ. ಆದಷ್ಟು ಮನೆಯ ಸುತ್ತಮುತ್ತ ಅಲಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

LEAVE A REPLY

Please enter your comment!
Please enter your name here