ಭಾರತದ ಸ್ಟಾರ್ ಓಪನರ್ ಸಂಜು ಸ್ಯಾಮ್ಸನ್ ತಮ್ಮ ಆರಂಭಿಕ ಪಾಲುದಾರ ಅಭಿಷೇಕ್ ಶರ್ಮಾ ಅವರನ್ನು ಶ್ಲಾಘಿಸಿದ್ದಾರೆ. ಅವರ ಜೊತೆಯಾಟ ಶ್ರಮರಹಿತ ಮತ್ತು ಸಮತೋಲಿತವಾಗಿರುತ್ತದೆ ಎಂದಿದ್ದಾರೆ.
ಇಬ್ಬರು ಆಕ್ರಣಕಾರಿ ಹೊಡೆತ ಹಾಗೂ ರನ್ ಗಳಿಸುವುದರೊಂದಿಗೆ ತಮ್ಮಿಬ್ಬರ ಕಾಂಬಿನೇಷನ್ ನ್ನು ‘ಫೈರ್ ಅಂಡ್ ಫೈರ್ ‘ ಅಂತಾ ಬಣ್ಣಿಸಿದ್ದಾರೆ. ಅಭಿಷೇಕ್ ಅವರ ಧೈರ್ಯ ಮತ್ತು ಮನೋ ಸ್ಥೈರ್ಯವನ್ನು ಸ್ಯಾಮ್ಸನ್ ಮೆಚ್ಚಿರುವ ಸ್ಯಾಮ್ಸನ್, ಮೈದಾನ ಹಾಗೂ ಹೊರಗೆ ಅವರೊಂದಿಗೆ ಉತ್ತಮ ಒಡನಾಟವಿದೆ ಎಂದು ಹೇಳಿದ್ದಾರೆ.
“ನಾವು ಮಂಜುಗಡ್ಡೆ ಮತ್ತು ಬೆಂಕಿಯಲ್ಲ, ನಾವು ಬೆಂಕಿ. ಕೆಲವೊಮ್ಮೆ ಆತ ಬೆಂಕಿಯಿಡುತ್ತಾನೆ, ಕೆಲವೊಮ್ಮೆ ನಾನು ಮಾಡುತ್ತೇನೆ. ನಮ್ಮಲ್ಲಿ ಅಂತಹ ಕಾಂಬಿನೇಷನ್ ಇದೆ. 2024 ರಿಂದ ಇದನ್ನು ಮಾಡಿದ್ದೇವೆ. ಮಧ್ಯದಲ್ಲಿ ನಮಗೆ ಕೇರಳ-ಪಂಜಾಬಿ ಸ್ನೇಹವಿದೆ. ನಮಗೆ ಎಲ್ಲವೂ ನೈಸರ್ಗಿಕವಾಗಿ ಬರುತ್ತದೆ. ಆದ್ದರಿಂದ ನಾವು ಅದನ್ನು ಸಂಕೀರ್ಣಗೊಳಿಸುವುದಿಲ್ಲ ಎಂದಿದ್ದಾರೆ.
ಬಾಲ್ ಹೇಗೆ ಬರುತ್ತಿದೆ? ಎಂದು ಅವರು ಕೇಳುತ್ತಾರೆ. ಬಾಲ್ ಸಾಮಾನ್ಯವಾಗಿ ಬರುತ್ತಿದ್ದು, ಸಿಕ್ಸರ್ ಎತ್ತು ಎಂದು ನಾನು ಹೇಳುತ್ತೇನೆ ಮತ್ತು ಅಭಿಷೇಕ್ ತುಂಬಾ ಧೈರ್ಯಶಾಲಿಯಾಗಿದ್ದು, ಅವರ ನಡತೆಯನ್ನು ಇಷ್ಟಪಡುತ್ತೇನೆ ಮೈದಾನದಲ್ಲಿ ಮತ್ತು ಹೊರಗೆ ಅವರ ಜೊತೆಗಿನ ಪಾರ್ಟನರ್ ಶಿಪ್ ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಎಂದು ಸ್ಯಾಮ್ಯನ್ ಹೇಳಿದ್ದಾರೆ.
ಅಭಿಷೇಕ್ ಅವರ ಆರಂಭಿಕ ಸ್ಟಾರ್ಡಮ್ನಿಂದಾಗಿ ಭಾರತೀಯ ಆಟಗಾರರು ‘ಅಸೂಯೆ’ ಹೊಂದಿದ್ದರು ಎಂದು ಸ್ಯಾಮ್ಸನ್ ಬಹಿರಂಗಪಡಿಸಿದರು. ಮೊದಲು ಅಭಿಷೇಕ್ ಕ್ರೇಜ್ ಕಂಡು ಟೀಂ ಇಂಡಿಯಾ ಆಟಗಾರರು ಅಸೂಯೆ ಪಡುತ್ತಿದ್ದರು. ಎಲ್ಲೆಲ್ಲೂ ಅಭಿಷೇಕ್, ಅಭಿಷೇಕ್ ಎಂಬ ಕೂಗು ಹೆಚ್ಚಾಗಿತ್ತು. ನಾವು ಹಾಗೆ ಮಾಡಿದ್ದರೂ ಜನ ಮಾತ್ರ ಅಭಿಷೇಕ್ ಮಾತ್ರ ಇಷ್ಟಪಡುತ್ತಾರೆ ಯಾಕೆ ಅಂತಾ ಹೊಟ್ಟೆ ಉರಿ ಪಡುತ್ತಿದ್ದರು. ಆದರೆ, ಹೌದು. ಈಗ ಅವರು ಟೀಂ ಇಂಡಿಯಾದ ಸೂಪರ್ ಸ್ಟಾರ್ ಆಗಿದ್ದು, ಶೀಘ್ರದಲ್ಲಿಯೇ ಮದುವೆಯಾಗಲಿ ಎಂದು ಸಂಜು ಸ್ಯಾಮ್ಸನ್ ಶುಭ ಕೋರಿದರು.
ಸ್ಯಾಮ್ಸನ್ ಮತ್ತು ಅಭಿಷೇಕ್ ICC ಪುರುಷರ T20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ಬೌಲರ್ಗಳನ್ನು ಬೆಂಡತ್ತಿ, ಆರಂಭಿಕ ಜೋಡಿ 98 ರನ್ ಕಲೆಹಾಕಿತ್ತು. ಪವರ್ಪ್ಲೇನಲ್ಲಿ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಅವರ ಅದ್ಭುತ ಆರಂಭವು ಫೈನಲ್ನಲ್ಲಿ ಭಾರತವನ್ನು 255 ರನ್ಗಳಿಗೆ ಮುನ್ನಡೆಸಿತು.
