ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಕುರಿತು ಸಾಕಷ್ಟು ಸುದ್ದಿಗಳು ಕಳೆದ ಒಂದು ತಿಂಗಳಿನಿಂದ ಹರಿದಾಡುತ್ತಿದೆ. ಈ ತಿಂಗಳಾಂತ್ಯಕ್ಕೆ ರಾಜಸ್ಥಾನದಲ್ಲಿ ಜೋಡಿ ಅದ್ದೂರಿಯಾಗಿ ವಿವಾಹವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
ಇವರ ಮದುವೆ ವಿಡಿಯೋ ಹಕ್ಕುಗಳನ್ನು ಖರೀದಿಸಲು ಪ್ರಮುಖ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ ಸುಮಾರು 60 ಕೋಟಿ ರೂಪಾಯಿ ಮೊತ್ತದ ಆಫರ್ ನೀಡಿದೆ ಎನ್ನಲಾಗಿದೆ. ಆದರೆ ಆಫರ್ ನ್ನು ತಿರಸ್ಕರಿಸಿದ್ದು, ತಮ್ಮ ಮದುವೆಯ ನೆನಪುಗಳು ಅಮೂಲ್ಯವಾಗಿದ್ದು ಅವನ್ನು ಖಾಸಗಿಯಾಗಿ ಉಳಿಸಿಕೊಳ್ಳಲು ಇಬ್ಬರೂ ಬಯಸಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಮದುವೆಯನ್ನು ಕೇವಲ ಆಪ್ತ ಕುಟುಂಬ ಸದಸ್ಯರ ನಡುವೆ ಸರಳ ಹಾಗೂ ಖಾಸಗಿ ಕಾರ್ಯಕ್ರಮವಾಗಿ ನಡೆಸಿಕೊಳ್ಳಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ನೆಟ್ಫ್ಲಿಕ್ಸ್ ಈ ಹಿಂದೆ ನಟಿ ನಯನತಾರಾ ಅವರ ಮದುವೆ ಹಕ್ಕುಗಳನ್ನು ಸುಮಾರು 25 ಕೋಟಿ ರೂಪಾಯಿಗೆ ಖರೀದಿಸಿತ್ತು. ಆ ನಂತರ ಸಾಕಷ್ಟು ಕಾನೂನು ತೊಡಕುಗಳು ಉಂಟಾಗಿತ್ತು. ನಯನತಾರಾ–ಧನುಷ್ ವಿವಾದದ ನಂತರ, ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
