ಗೋರುಕನ ಹಾಡು ನಮ್ಮ ಚಿತ್ರದ ಮೊದಲ ಹಾಡು ಎಂದು ಮಾತು ಅರಂಭಿಸಿದ ನಾಯಕ ಹಾಗೂ ನಿರ್ದೇಶಕ ವಿಕ್ಕಿ ವರುಣ್, ಈ ಹಾಡಿನ ಮೂಲಕ ಮಂಗಳಮುಖಿಯರು ನಮ್ಮ ಚಿತ್ರದ ಕಥೆ ಹೇಳುತ್ತಾರೆ. ಇದು ಚಿತ್ರದ ಕಥೆ ಹೇಳುವ ಗೀತೆಯಾಗಿರುವುದರಿಂದ ಇಂದು ಲಿರಿಕಲ್ ಸಾಂಗ್ ಮಾತ್ರ ರಿಲೀಸ್ ಮಾಡಿದ್ದೇವೆ.
ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಶಿವಾನಿ ಈ ಹಾಡನ್ನು ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಹಾಡು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ತಾರಾ ಅವರಿಗೆ ಧನ್ಯವಾದಗಳು ಎಂದರು
The post ‘ಕಾಲಾಪತ್ಥರ್’ ಚಿತ್ರದ ‘ಗೋರುಕನ ಗಾನ’ ಸಾಂಗ್ ರಿಲೀಸ್ ಮಾಡಿದ ಪುನೀತ್ ರಾಜ್ ಕುಮಾರ್! appeared first on Ain Live News.
