ಲಂಡನ್: ಪ್ರಖ್ಯಾತ ವಯೋಲಿನ್ ಕಲಾವಿದೆ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರಿಗೆ ದೊರೆ ಚಾರ್ಲ್ಸ್ III ಪ್ರತಿಷ್ಠಿತ ಎಂಬಿಇ (ಮೆಂಬರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್) ಗೌರವವನ್ನು ಪ್ರದಾನ ಮಾಡಿದರು. ಗ್ರೇಟ್ ಬ್ರಿಟನ್ ನ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಎಂಬಿಇಯನ್ನು ಅಂತಾರಾಷ್ಟ್ರೀಯ ಸಂಗೀತಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ತಮ್ಮ ಜನ್ಮ ದಿನವಾದ ಡಿಸೆಂಬರ್ 12, 2023ರಂದು ಗ್ರೇಟ್ ಬ್ರಿಟನ್ ನ ವಿಂಡ್ಸರ್ ಕ್ಯಾಸಲ್ ನಲ್ಲಿ ದೊರೆ ಚಾರ್ಲ್ಸ್ III ಪ್ರದಾನ ಮಾಡಿದರು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಜ್ಯೋತ್ಸ್ನಾ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವ ಪ್ರಪ್ರಥಮ ಕರ್ನಾಟಕ ಸಂಗೀತಗಾರ್ತಿಯಾಗಿದ್ದಾರೆ.
ಇದಕ್ಕೂ ಮುನ್ನ ಪ್ರತಿಷ್ಠಿತ ಎಂಬಿಇ ಪ್ರಶಸ್ತಿಗೆ ಪಾತ್ರರಾಗಿರುವ ಅಂತಾರಾಷ್ಟ್ರೀಯ ತಾರೆಯರ ಪೈಕಿ ಅಡೀಲ್, ಎಡ್ ಶೀರನ್ ಹಾಗೂ ಮಾರ್ಕಸ್ ರ್ಯಾಶ್ ಫೋರ್ಡ್ ಸೇರಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಜ್ಯೋತ್ಸ್ನಾ, “ಈ ಪ್ರತಿಷ್ಠಿತ ಪ್ರಶಸ್ತಿಯಿಂದ ನಾನು ಸಮ್ಮಾನಿತಳಾಗಿದ್ದೇನೆ. ಈ ಪ್ರಶಸ್ತಿಯನ್ನು ನನ್ನ ವೃತ್ತಿ ಜೀವನಕ್ಕೆ ಭಾರಿ ಪ್ರೋತ್ಸಾಹ ನೀಡಿದ ನನ್ನ ಗುರುಗಳಿಗೆ ಹಾಗೂ ಕುಟುಂಬಕ್ಕೆ ಅರ್ಪಿಸುತ್ತೇನೆ. ಸಂಗೀತ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲು ಇನ್ನಷ್ಟು ಪರಿಶ್ರಮ ಪಡುತ್ತೇನೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
By the blessings of my parents & gurus, I was awarded the MBE (Member of the Order of British Empire), the third highest civilian award in the UK for my contribution to music at the Windsor Castle by his Majesty KIng Charles.#MBE #kingcharles @DhruvArts @DhruvLIAF pic.twitter.com/BORRffYJFH
— Jyotsna Srikanth (@violinjyotsna) January 3, 2024
