ಅಹ್ಮದಾಬಾದ್: ಗುಜರಾತ್ನ ವಲ್ಸಾದ್ನಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ಲಿಫ್ಟ್ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಲಿಫ್ಟ್ ಬಾಗಿಲು ತೆರೆದಿರುವಾಗ ಅದರೊಳಗಿದ್ದ ವ್ಯಕ್ತಿ ಹೊರ ಹೋಗಲು ಯತ್ನಿಸುತ್ತಿದ್ದಾಗ ಲಿಫ್ಟ್ ದಿಢೀರನೇ ಮೇಲಕ್ಕೆ ಹೋಗಿದೆ.
ಆದರೆ ವ್ಯಕ್ತಿ ಕೂಡಲೇ ಹೊರಕ್ಕೆ ಹೋಗಿದ್ದರಿಂದ ಅವರು ಕೆಳಗೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ. ಲಿಫ್ಟ್ ನಲ್ಲಿದ್ದ ವ್ಯಕ್ತಿ ಹೊರಗೆ ಹೆಜ್ಜೆ ಇಟ್ಟ ಕೇವಲ ಒಂದು ಸೆಕೆಂಡಿನ ಅಂತರದಲ್ಲಿ ಈ ಘಟನೆ ನಡೆದಿದ್ದು, ಅವರ ತಲೆ ಲಿಫ್ಟ್ ಬಾಗಿಲಿಗೆ ಹೊಡೆದುಕೊಂಡಿದೆ.
ಬಳಿಕ ಅವರು ನೇರವಾಗಿ ಕೆಳಕ್ಕೆ ಬಿದ್ದು, ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆಯ ಸಂಪೂರ್ಣ ವಿಡಿಯೋ ಲಿಫ್ಟ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಅಲ್ಲದೆ ಸೊಸೈಟಿಯ ಲಿಫ್ಟ್ ನಿರ್ವಹಣೆ ಕುರಿತು ವ್ಯಾಪಕ ಟೀಕೆಗಳೂ ವ್ಯಕ್ತವಾಗುತ್ತಿದೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಸೊಸೈಟಿ ಆಡಳಿತ ಮಂಡಳಿ ಲಿಫ್ಟ್ ಅನ್ನುದುರಸ್ತಿಗೊಳಿಸಲು ಲಿಫ್ಟ್ ಸೇವೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.
A shocking incident unfolded at a #Gujarat Housing Board complex in #valsad when the lift suddenly shot upward — even as its doors were still open.
A Man had a terrible escape, surviving by just a fraction of a second while stepping out.️ pic.twitter.com/Kg2tflMosg
— Deva (@deva_fc_) March 4, 2026
