ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲ ಆಗಿದ್ದು ಕಾಂಗ್ರೆಸ್ ಸರಕಾರ ತಮ್ಮ ಹಿತಾಸಕ್ತಿಗೆ ರಾಜ್ಯವನ್ನ ಬಲಿ ಕೊಟ್ಟಿದೆ ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಗಂಭೀರ ಸ್ವರೂಪದ ಆರೋಪ ಮಾಡಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೊಬೆ ಕುರಿಸುವ ಕೆಲಸ ಮಾಡಲಾಗುತ್ತಿದೆ.
ವಿದ್ಯುತ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಗಳಿಗೆ ಬಜೆಟ್ ನಲ್ಲಿ ಎಷ್ಟು ಹಣ ಇಟ್ಟಿರಿ ಐದು ಗ್ಯಾರಂಟಿ ಅಂತಾ ಹೊರಟಿರಿ ಈ ಗ್ಯಾರಂಟಿಗಳ ಮೇಲೆ ೨೯ ಪಕ್ಷ ಕಟ್ಟಿಕೊಂಡು ಲೋಕಸಭಾ ಚುನಾವಣೆಗೆ ಹೊರಟಿರಿ ಒಂದೇ ಒಂದು ಗುರಿ ಲೋಕಸಭಾ ಚುನಾವಣೆಯಯ 20 ಸ್ಥಾನ ಪಡೆಯಲು ಉದ್ದೇಶ ನಿಮ್ಮದು ಅನ್ನಭಾಗ್ಯ ಯೋಜನೆಯಲ್ಲಿ ಒಂದು ಕಾಳು ಕೊಡಲಿಲ್ಲಪ್ರಧಾನಿ ನರೇಂದ್ರ ಮೋದಿ ಅವರು ಐದು ಕೇಜಿ ಕೊಡತಾ ಇದ್ದಾರೆ ಎಂದರು.
ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರ
ರಾಜ್ಯ ಸರ್ಕಾರವೇ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದೆ ಈ ವಿಷಯದಲ್ಲಿತಮಿಳುನಾಡು, ಕಾವೇರಿ ಪ್ರಾಧಿಕಾರ, ಸುಪ್ರೀಂ ಕೋರ್ಟ್ ನೀರು ಬಿಡು ಅಂತಾ ಹೇಳಲಿಲ್ಲ ಇವರೇ ಒಳೊಳಗೆ ಸ್ಟಾಲಿನ್ ಜೊತೆಗೆ ಕೊಡಿಕೊಂಡು ನೀರು ಬಿಟ್ಟಿರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಮುಗಿದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಜಲಸಂಪನ್ಮೂಲ ಸಚಿವ ಶೇಖಾವತ್ ಅವರನ್ನು ಭೇಟಿ ಆಗತಾರೆಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಇಬ್ಬರೇ ಹೋಗತಾರೆ ಶೇಖಾವತ್ ಅವರನ್ನು ಭೇಟಿ ಬಳಿಕ ಮತ್ತೇ ತಮಿಳುನಾಡಿಗೆ ಐದು ಟಿಎಂಸಿ ನೀರು ಬಿಟ್ಟರು ಈಗ ಅವರ ಮೇಲೆ ಇವರ ಮೇಲೆ ಹಾಕತಾರೆ ಇದನ್ನು ಬಿಟ್ಟು ಯಾಕೆ ಸಂಕಷ್ಟ ಸೋತ್ರ ಕಂಡುಕೊಳ್ಳಲಿಲ್ಲ.
ಕೃಷ್ಣ, ಆಲಮಟ್ಟಿ ಸೇರಿದಂತೆ ಇನ್ನುಳಿದಂತೆ ಜಲ ವಿವಾದ ಹೇಗೆ ಬಗೆ ಹರಿಸಿದರು ಗೊತ್ತಲ್ಲ ಅದರಂತೆ ಮಾಡಬೇಕಿತ್ತು ಎಂದರು.
ಕಾವೇರಿ ಹಾಗೂ ಬರದ ವಿಚಾರದಲ್ಲಿ ಸರ್ಕಾರ ಬಳಿ ಸುಳ್ಳು ಹೇಳತಾ ಇದೆ ರಾಜ್ಯ ಸರ್ಕಾರದವರು ಎಲ್ಲಿ ಫೇಲಾದರು ಗೊತ್ತಾ ಬೀಕರವಾರ ಬರಗಾಲ ಇದ್ದು, ಈಗ ನವೆಂಬರ್ ಬಂದಿದೆ ಏನು ಕೆಲಸ ಮಾಡಿಲ್ಲ ಯಾವುದೇ ಬರ ಕಾಮಗಾರಿ ಆಗಿಲ್ಲ.
ಈಗ ಹೇಳತಾ ಇದ್ದಾರೆ 40 ಲಕ್ಷ ಕೋಟಿ ಬೆಳೆ ಹಾಗೂ 48000 ಕೋಟಿ ಬೆಳೆ ಹಾನಿಯಾಗಿದೆ ಅಂತಾರೆ ಇದುವರೆಗೆ ಒಂದು ರೂಪಾಯಿ ಸಹ ಕೊಟ್ಟಿಲ್ಲ. ಯಾವುದೇ ಬರ ಕಾಮಗಾರಿ ಮಾಡಿಲ್ಲ ರೈತರ ಪರಿಸ್ಥಿತಿ ಏನಾಗಬಾರದು ಜಾನುವಾರುಗಳ ಸ್ಥಿತಿ ಏನಾಗಬಾರದು. ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲ, ನಾವು ದಿನಕ್ಕೆ ಏಳು ಗಂಟೆಗಳ ಕಾಲ ಸತತವಾಗಿ ವಿದ್ಯುತ್ ಸರಬರಾಜು ಮಾಡಿದವು ಈಗಿನ ಸರಕಾರ ಮೂರು ಅಲ್ಲ ಒಂದು ತಾಸು ಮಾಡಲಾ ಇಲ್ಲ ಎಂದು ಆರೋಪಿಸಿದರು.
The post ತಮ್ಮ ಹಿತಾಸಕ್ತಿಗೆ ರಾಜ್ಯವನ್ನ ರಾಜ್ಯ ಸರಕಾರ ಬಲಿ ಕೊಟ್ಟಿದೆ: ಮಾಜಿ ಸಚಿವ ದೇವೇಗೌಡ appeared first on Ain Live News.
