ಟೆಹ್ರಾನ್: ಇರಾನ್ ಸರ್ವಾಧಿಕಾರಿ ಆಯತೊಲ್ಲಾ ಅಲಿ ಖಮೆನಿ ಸಾವಿಗೆ ದುಃಖ ವ್ಯಕ್ತಪಡಿಸುತ್ತಿರುವ ಭಾರತೀಯ ಮುಸ್ಲಿಂ ಮಹಿಳೆಯರನ್ನು ಇರಾನ್ ಮಹಿಳೆಯರು ವಿಚಿತ್ರ ಡ್ಯಾನ್ಸ್ ಮೂಲಕ ಲೇವಡಿ ಮಾಡುತ್ತಿದ್ದಾರೆ.
ಹೌದು.. ಅಮೆರಿಕ ಮತ್ತು ಇಸ್ರೇಲ್ ನ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್ ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೆನಿ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಭಾರತ ಮತ್ತು ಇರಾನ್ ಮಹಿಳೆಯರ ನಡುವೆ ಇದೀಗ ‘Digital war’ ಆರಂಭವಾಗಿದೆ.
ಖಮೆನಿ ಸಾವಿಗೆ ಕಣ್ಣೀರು ಹಾಕಿದ್ದ ಭಾರತೀಯ ಮುಸ್ಲಿಂ ಮಹಿಳೆಯರನ್ನು ಇರಾನ್ ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇರಾನ್ ನಲ್ಲಿ ಸಂಭ್ರಮ
ಖಮೆನಿ ಹತ್ಯೆ ಬೆನ್ನಲ್ಲೇ ಇರಾನ್ ನಲ್ಲಿ ಲಕ್ಷಾಂತರ ಮಹಿಳೆಯರು ಬೀದಿಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇರಾನಿಗೆ ಈಗ ಸ್ವಾತಂತ್ರ್ಯ ಸಿಕ್ಕಿತು ಎಂಬಂತೆ ಜಯಘೋಷ ಮೊಳಗಿಸಿದ್ದಾರೆ. ಬೀದಿಗಳಲ್ಲಿ ಖಮೇನಿ ಚಿತ್ರಗಳನ್ನು ಸುಟ್ಟು ತಮ್ಮ ದಶಕಗಳ ಅಜ್ಞಾತವಾಸಕ್ಕೆ ಬಿಡುಗಡೆ ಎಂಬಂತೆ ಜೋರು ದನಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.
The happiest nation at the moment is Iranians.
Thank you big Man for standing on your word! pic.twitter.com/Z8x8Y533Hh— Mooné Rahimi (@hiitsmemooneh) March 1, 2026
ದಶಕಗಳ ನರಕ
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಇರಾನ್ ಮಹಿಳೆಯರು ಖಮೆನಿ ಆಡಳಿತದ ಸಂದರ್ಭದಲ್ಲಿ ತಾವು ಅನುಭವಿಸಿದ ನೋವುಗಳನ್ನು ತೋಡಿಕೊಂಡಿದ್ದಾರೆ. ‘ನಾವು ದಶಕಗಳ ದಮನ ಅನುಭವಿಸಿದ್ದೇವೆ.
ಪ್ರಜಾಪ್ರಭುತ್ವ ದೇಶದಲ್ಲಿ ಕುಳಿತು ನಮ್ಮ ನೋವನ್ನು ತಳ್ಳಿಹಾಕಬೇಡಿ. ನೀವು ಇರಾನಿಯನ್ನರಲ್ಲ ಅಂದ್ರೆ ಬಾಯಿ ಮುಚ್ಚಿಕೊಂಡಿರಿ.. ನಾವು ಅನುಭವಿಸಿದ ನೋವನ್ನು ತಮಾಷೆ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಅಂತೆಯೇ ಇರಾನ್ ನಲ್ಲಿ ಸರ್ವೋಚ್ಛ ನಾಯಕ ಖಮೆನಿ ಸಾವನ್ನು ಇರಾನ್ ನ ಒಂದು ಭಾಗ ಸಂಭ್ರಮಿಸುತ್ತಿದ್ದು ಪ್ರಮುಖವಾಗಿ ಬಹುತೇಕ ಇರಾನ್ ಮಹಿಳೆಯರು ಸಂಭ್ರಮಿಸುತ್ತಿದ್ದಾರೆ. ಮಹಿಳೆಯರು ಹಿಜಾಬ್ ಸುಟ್ಟು ಸಂಭ್ರಮಿಸುವ ವಿಡಿಯೋಗಳು ವೈರಲ್ ಆಗುತ್ತಿದ್ದು, ಭಾರತೀಯ ಪತ್ರಕರ್ತೆಯರ ಪೋಸ್ಟ್ಗಳಿಗೆ ಈ ವಿಡಿಯೋಗಳನ್ನು ಟ್ಯಾಗ್ ಮಾಡಲಾಗುತ್ತಿದೆ.
ಇರಾನ್ ಮಹಿಳೆಯರು ಖಮೇನಿ ಸಾವನ್ನು ಸಂಭ್ರಮಿಸುತ್ತಿದ್ದರೆ, ಭಾರತದ ಕೆಲವು ಮುಸ್ಲಿಂ ಮಹಿಳೆಯರು ಮತ್ತು ಪತ್ರಕರ್ತೆಯರ ಮೃದು ಪ್ರತಿಕ್ರಿಯೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಭಾರತದ ಅರ್ಫಾ ಖಾನುಮ್ ಶೇರ್ವಾನಿ, ರಾಣಾ ಅಯೂಬ್ ಹಾಗೂ ಫಾತಿಮಾ ಖಾನ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಇರಾನ್ ಮೂಲದ ಮಹಿಳೆಯರು ಕಿಡಿಕಾರಿದ್ದಾರೆ.
ಭಾರತದಲ್ಲಿ ವ್ಯಾಪಕ ಪ್ರತಿಭಟನೆ
ಇನ್ನು ಖಮೆನಿ ಹತ್ಯೆ ವಿರೋಧಿಸಿ ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಪ್ರಮುಖವಾಗಿ ಮುಸ್ಲಿಂ ಮಹಿಳೆಯರು ಬೀದಿಗಿಳಿದು ಖಮೆನಿ ಹತ್ಯೆ ಖಂಡಿಸಿ ದುಃಖ ತೋರ್ಪಡಿಸಿದ್ದರು. ಕರ್ನಾಟಕದ ಚಿಕ್ಕಬಳ್ಳಾಪುರದ ಅಲಿಪುರದಲ್ಲೂ ಮುಸ್ಲಿಮರು ವ್ಯಾಪಕ ಪ್ರತಿಭಟನೆ ನಡೆಸಿದ್ದರು.
ಭಾರತದ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನಿಯನ್ನರು
ಇನ್ನು ಭಾರತದಲ್ಲಿ ಖಮೆನಿ ಹತ್ಯೆ ಖಂಡಿಸಿ ನಡೆದ ಮುಸ್ಲಿಂ ಮಹಿಳೆಯರ ಪ್ರತಿಭಟನಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಇದಕ್ಕೆ ತಿರುಗೇಟು ನೀಡಿರುವ ಇರಾನ್ ಮಹಿಳೆಯರು ಭಾರತದ ಮುಸ್ಲಿಂ ಮಹಿಳೆಯರ ಅಳುವನ್ನೇ ಲೇವಡಿ ಮಾಡಿ ವಿಡಿಯೋ ಮಾಡುತ್ತಿದ್ದಾರೆ.
