ಇತ್ತೀಚೆಗೆ ಮದುವೆಯಾದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಾಕಷ್ಟು ಸುದ್ದಿ ಮಾಡಿದ್ದಾರೆ. ಈ ಮಧ್ಯೆ ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿ ಹುಡುಕಿಕೊಳ್ಳಿ’ ಎಂದು ಅವರು ಹೇಳಿದ್ದಾರೆ.
ಧಾಮಿನಿ ಎಂಬುವವರು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಬರೆದಿರುವ ಬರಹವನ್ನು ರಶ್ಮಿಕಾ ರಿಟ್ವೀಟ್ ಮಾಡಿ, ಇಷ್ಟು ದಿನ ನನ್ನ ಬಗ್ಗೆ ಬರೆದದ್ದನ್ನು ಓದಿ ನಾನು ಇಷ್ಟೊಂದು ಭಾವನಾತ್ಮಕವಾಗಿ ವರ್ತಿಸಿಲ್ಲ. ಹೇಳಬೇಕಾದದ್ದು ತುಂಬಾ ಇದೆ, ಆದರೆ ಹೇಳಲು ಸಾಧ್ಯವಾಗುವುದೇ ತುಂಬಾ ಕಡಿಮೆ. ನನ್ನದೇ ಆದ ಒಂದು ಜಾಗವನ್ನು ನಾನು ಹುಡುಕುತ್ತಿರುವೆ, ಆ ಪ್ರಯಾಣಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ.
I have never become so emotional reading something written about me this much in a long long time..
There is so much I want to say but so little I can say.I am finding my own room and that’s a journey I am so grateful for..
Thankyou for recognising it..❤️About love all I… https://t.co/f7W5vv0UJ5
— Rashmika Mandanna (@iamRashmika) March 8, 2026
ಅದನ್ನು ಗುರುತಿಸಿದಕ್ಕಾಗಿ ಧನ್ಯವಾದಗಳು, ಪ್ರೀತಿಯ ಬಗ್ಗೆ ನಾನು ಹೇಳುವುದು ಇಷ್ಟೇ, ‘ನಿಮ್ಮನ್ನು ಮುಕ್ತಗೊಳಿಸುವ ಅಥವಾ ಸ್ವತಂತ್ರಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನೀವು ಯಾರು ಎಂದು ಪ್ರಪಂಚಕ್ಕೆ ಗೊತ್ತಿಲ್ಲದ ಸಮಯದಲ್ಲಿ ನಿಮ್ಮನ್ನು ಮುಖ್ಯವಾಹಿನಿಗೆ ಕರೆತಂದು, ನಿಮ್ಮನ್ನು ಜನಪ್ರಿಯ ಗೊಳಿಸಿದವರನ್ನು ಮರೆಯಬಾರದಿತ್ತು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
