ಬಂಟ್ವಾಳ: ಕಲಾ ಬಾಗಿಲು, ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಚಿತ್ರದುರ್ಗದ ಚಿಂತನಾ ಪ್ರಕಾಶನದವರು ಸಂಘಟಿಸಿದ ರಾಷ್ಟ್ರ ಮಟ್ಟದ ಚಿಂತನಾ ಡ್ರಾಯಿಂಗ್ ಸ್ಪರ್ಧೆಯಲ್ಲಿ ರಾಪ್ಟ್ರಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ.
ಬುರೂಜ್ ಶಾಲೆ “ಉತ್ತಮ ರಾಜ್ಯ ಶಾಲೆ ” ಎಂಬ ಮನ್ನಣೆಗೆ ಪಾತ್ರವಾಗಿದೆ. ಎಂಟನೇ ತರಗತಿಯ ಗಗನ್ ರಾಜ್ ಕುಲಾಲ್ ರಾಷ್ಟ್ರ ಮಟ್ಟದಲ್ಲಿ ಪ್ರಥಮ , ಎರಡನೇ ತರಗತಿಯ ಅಬ್ದುಲ್ ಸಲಾಂ ರಾಜ್ಯ ಮಟ್ಟದಲ್ಲಿ ಪ್ರಥಮ, ಆರನೇ ತರಗತಿಯ ಅಫ್ರಾರಿಂಷಾ , ನಾಲ್ಕನೇ ತರಗತಿಯ ರೇಶ್ಮಾ ಆರ್, ಮೂರನೇ ತರಗತಿಯ ದೃತಿ ಎಸ್, ಎಲ್.ಕೆ.ಜಿ. ಯ ಝೈಫಾ ಫಾತಿಮ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
