ಯಶವಂತಪುರ ರೈಲು ನಿಲ್ದಾಣದಲ್ಲಿ 125 ನಾಲ್ಕು ಚಕ್ರಗಳು ಮತ್ತು 90 ದ್ವಿಚಕ್ರ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸುವ ಬಹು ಹಂತದ ಕಾರ್ ಪಾರ್ಕಿಂಗ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಹೆಚ್ಚುವರಿಯಾಗಿ 40 ಆಟೋಗಳು ಅಥವಾ ಕ್ಯಾಬ್ಗಳು ಮತ್ತು 50 ದ್ವಿಚಕ್ರ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕೂಡ ಸ್ಥಳಾವಕಾಶ ಲಭ್ಯವಿರುತ್ತದೆ. ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ 125 ನಾಲ್ಕು ಚಕ್ರಗಳು ಮತ್ತು 90 ದ್ವಿಚಕ್ರ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸುವ ಬಹು ಹಂತದ ಕಾರ್ ಪಾರ್ಕಿಂಗ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಹೆಚ್ಚುವರಿಯಾಗಿ 40 ಆಟೋಗಳು ಅಥವಾ ಕ್ಯಾಬ್ಗಳು ಮತ್ತು 50 ದ್ವಿಚಕ್ರ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕೂಡ ಸ್ಥಳಾವಕಾಶ ಲಭ್ಯವಿರುತ್ತದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಈ ಸೌಲಭ್ಯಗಳು ಯಶವಂತಪುರ ರೈಲು ನಿಲ್ದಾಣದ ನವೀಕರಣದ ಭಾಗವಾಗಿದೆ. ಪಾರ್ಕಿಂಗ್ಗಾಗಿ 6,000 ಚದರ ಮೀಟರ್ ಜಾಗದ ಜೊತೆಗೆ ಪಶ್ಚಿಮ ಭಾಗದಲ್ಲಿ (ಮೆಟ್ರೋ ಬದಿ ಅಥವಾ ಫ್ಲಾಟ್ಫಾರ್ಮ್ 6 ಕಡೆಯಲ್ಲಿ) ತೆರೆದ ನೆಲಮಾಳಿಗೆಯಲ್ಲಿ 1200 ಚದರ ಮೀಟರ್ ಜಾಗ ಪಾರ್ಕಿಂಗ್ಗೆ ಲಭ್ಯವಿರುತ್ತದೆ.
2023ರ ಫೆಬ್ರುವರಿಯಲ್ಲಿ ಪ್ರಾರಂಭವಾದ ಪುನರಾಭಿವೃದ್ಧಿ ಯೋಜನೆಯನ್ನು 380 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಜುಲೈ 2025 ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
‘ಹಂತ-1ರ ಭಾಗವಾಗಿ, ಪೂರ್ವ ಭಾಗದಲ್ಲಿ (ಫ್ಲಾಟ್ಫಾರ್ಮ್ 1) ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಬಹು ಹಂತದ ಕಾರ್ ಪಾರ್ಕಿಂಗ್ (G+5) ಮತ್ತು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಮತ್ತು ಬರಲು ಅನುಕೂಲವಾಗುವ ಎಲಿವೇಟೆಡ್ ರಸ್ತೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಪ್ರಯಾಣಿಕರ ದಟ್ಟಣೆ ತಡೆಗೆ ನಿಲ್ದಾಣದ ಆಗಮನ-ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅದು ಹೇಳಿದೆ.
ಪೂರ್ವ ಭಾಗದ ಕಾಮಗಾರಿ ಪೂರ್ಣಗೊಂಡ ನಂತರ, ಪಶ್ಚಿಮ ಭಾಗದ (ಮೆಟ್ರೋ ಕಡೆಗೆ) ಕೆಲಸ ಪ್ರಾರಂಭವಾಗಲಿದೆ. ವಾಹನಗಳಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ಕೇಂದ್ರಗಳಿರುತ್ತವೆ.
