ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಬೈ ಸ್ಕೈ ವೀಕ್ಷಣೆಗೆ ಆಗಮಿಸಿದ್ದ 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉಚಿತವಾಗಿ ಹೆಲಿಕಾಪ್ಟರ್ ರೈಡ್ ಮಾಡಿಸಿ, ಮಕ್ಕಳ ಕನಸನ್ನು ನನಸು ಮಾಡಿದ್ದಾರೆ.
ಹೌದು. ಹಂಪಿ ಉತ್ಸವದ ಎರಡನೇ ದಿನವಾದ ಇಂದು ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಸ್ಕೈ ಹೆಲಿಕಾಪ್ಟರ್ ಸೇವೆಗೆ ಜಮೀರ್ ಅಹ್ಮದ್ ಖಾನ್ ಶನಿವಾರ ಚಾಲನೆ ನೀಡಿದರು.
ಈ ವೇಳೆ ಹೆಲಿಕಾಪ್ಟರ್ ನೋಡಲು ಬಂದಿದ್ದ ಸರ್ಕಾರಿ ಶಾಲೆ ಮಕ್ಕಳ ಆಸೆ ಕೇಳಿದ ಸಚಿವರು, ನೀವೂ ಹೆಲಿಕಾಪ್ಟರ್ನಲ್ಲಿ ಹೋಗಬೇಕಾ ಎಂದು ಕೇಳಿದ್ದಾರೆ. ಸಚಿವರ ಪ್ರಶ್ನೆಗೆ ಮಕ್ಕಳೆಲ್ಲರೂ ಹೌದು ಸರ್ ಎಂದಿದ್ದಾರೆ.
ತಕ್ಷಣವೇ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಿದ್ದಾರೆ. ಆಕಾಶಕ್ಕೆ ಹಾರಿದ ಮಕ್ಕಳ ಸಂಭ್ರಮ ಕಂಡು ಕೆಳಗಡೆ ನಿಂತಿದ್ದ ಪೋಷಕರು ಆನಂದ ಬಾಷ್ಪ ಸುರಿಸಿದರು. ಮಕ್ಕಳ ಜಾಲಿ ಕಂಡು ಪೋಷಕರೂ ಸಂಭ್ರಮಿಸಿದ್ದಾರೆ.
Inaugurated the “Hampi by Sky” helicopter service (from Feb 12 to 15) for aerial views on the occasion of #Hampiutsava2026 organized at the premises of Mayura Hotel in Kamalpur town of Hospet Taluk, Vijayanagara District and allowed the Students to fly free of cost pic.twitter.com/xhMpWbV5qo
— B Z Zameer Ahmed Khan (@BZZameerAhmedK) February 12, 2026
