Home Uncategorized ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿಸಿಎಂ ಡಿಕೆಶಿ ವಿರುದ್ಧ ಎಫ್​ಐಆರ್​ ದಾಖಲಿಸಿದ ಲೋಕಾಯುಕ್ತ

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿಸಿಎಂ ಡಿಕೆಶಿ ವಿರುದ್ಧ ಎಫ್​ಐಆರ್​ ದಾಖಲಿಸಿದ ಲೋಕಾಯುಕ್ತ

9
0

ಬೆಂಗಳೂರು:  ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ವಿರುದ್ಧ ಕರ್ನಾಟಕ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಲೋಕಾಯುಕ್ತ ಪತ್ರ ಬರೆದಿದ್ದು,  ಸಿಬಿಐ ಈವರೆಗೂ ಲೋಕಾಯುಕ್ತಕ್ಕೆ ಸಂಬಂಧಿಸಿದ ದಾಖಲೆ ಒದಗಿಸಿಲ್ಲ ಎಂದು ತಿಳಿದು ಬಂದಿದೆ.

 ಇತ್ತೀಚೆಗಷ್ಟೇ ಸಿಬಿಐ ತನಿಖೆ ವಾಪಸ್ ಪಡೆಯುವ ಬಗ್ಗೆ ಸಂಪುಟದಲ್ಲಿ ಸರ್ಕಾರ ತೀರ್ಮಾನ ತೆಗದುಕೊಂಡಿದ್ದು, ಸಿಬಿಐ ಬದಲು ಲೋಕಾಯುಕ್ತಗೆ ತನಿಖೆ ವರ್ಗಾವಣೆ ಮಾಡಲಾಗಿತ್ತು.

ಒಂದು ಕಡೆ ಸಿಬಿಐ ನಿಂದ ಡಿ ಕೆ ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗಿದ್ದು, ಮತ್ತೊಂದು ಕಡೆ ಲೋಕಾಯುಕ್ತ ಎಫ್ ಐ ಆರ್ ದಾಖಲು ಮಾಡಿದೆ.

 

 

LEAVE A REPLY

Please enter your comment!
Please enter your name here