Home Uncategorized ಅಡೆನೊವೈರಸ್, ಇನ್‌ಫ್ಲುಯೆಂಜಾ ಪತ್ತೆಗೆ ಕಡಿಮೆ ದರದಲ್ಲಿ ಪರೀಕ್ಷಾ ಕಿಟ್‌ಗಳ ವಿತರಿಸಲು ಸರ್ಕಾರ ಚಿಂತನೆ

ಅಡೆನೊವೈರಸ್, ಇನ್‌ಫ್ಲುಯೆಂಜಾ ಪತ್ತೆಗೆ ಕಡಿಮೆ ದರದಲ್ಲಿ ಪರೀಕ್ಷಾ ಕಿಟ್‌ಗಳ ವಿತರಿಸಲು ಸರ್ಕಾರ ಚಿಂತನೆ

21
0

ನಗರದಲ್ಲಿ ಅಡೆನೊವೈರಸ್, ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆಯನ್ನು ಪತ್ತೆ ಹಚ್ಚಲು ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಪರೀಕ್ಷಾ ಕಿಟ್‌ಗಳ ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ನಗರದಲ್ಲಿ ಅಡೆನೊವೈರಸ್, ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆಯನ್ನು ಪತ್ತೆ ಹಚ್ಚಲು ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಪರೀಕ್ಷಾ ಕಿಟ್‌ಗಳ ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯ ಮತ್ತು ಸಕ್ರಾ ವರ್ಲ್ಡ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥ ಡಾ ರಜತ್ ಆತ್ರೇಯ ಅವರು ಮಾತನಾಡಿ, ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಪರೀಕ್ಷಾ ಕಿಟ್‌ಗಳನ್ನು ಒದಗಿಸುವ ಕುರಿತು ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಭೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಹೇಳಿದ್ದಾರೆ.

“ಪ್ರಸ್ತುತ, ಎಲ್ಲಾ ಆಸ್ಪತ್ರೆಗಳು ರೋಗಿಗಳ ಮಾದರಿಗಳನ್ನು ಪರೀಕ್ಷೆ ನಡೆಸುತ್ತಿಲ್ಲ. ಎಲ್ಲರಿಗೂ ಪರೀಕ್ಷೆ ನಡೆಸಿದ್ದೇ ಆದರೆ, ಹೆಚ್ಚಿನ ಮಾದರಿಗಳನ್ನು ಪರೀಕ್ಷೆಗೆ ರವಾನಿಸಬೇಕಾಗುತ್ತದೆ. ಇದು ಆಸ್ಪತ್ರೆಗೆ ಸಂಕಷ್ಟವನ್ನು ಎದುರು ಮಾಡುತ್ತದೆ. ಹೀಗಾಗಿ ತೀವ್ರ ಆರೋಗ್ಯ ಸಮಸ್ಯೆ ಇರುವ ಒಳರೋಗಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಇದೂವರೆಗೆ 21 ಮಾದರಿಗಳಲ್ಲಿ ಅಡೆನೊವೈರಸ್‌ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಕೆಸಿ ಜನರಲ್ ಆಸ್ಪತ್ರೆಯ ಡಾ.ಲಕ್ಷ್ಮೀಪತಿ ಅವರು ಮಾತನಾಡಿ, ಯಾವುದೇ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುತ್ತಿಲ್ಲ. ರೋಗಿಗಳ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಇನ್‌ಫ್ಲುಯೆಂಜಾ ಮಾದರಿಗಳನ್ನು ಪರೀಕ್ಷಿಸುತ್ತಿದೆ ನಡೆಸುತ್ತಿದ್ದು, ಅಡೆನೊವೈರಸ್ ಪತ್ತೆಗೆ ಇಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ. 2023ರ ಫೆಬ್ರವರಿರವರೆಗೂ ಒಟ್ಟು 9 ಮಾದರಿಗಳಲ್ಲಿ H3N2 ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ವೈರಸ್‌ಗಳು SARS-COV-2 ವೈರಸ್‌ನ ಲಕ್ಷಣಗಳನ್ನು ಹೊಂದಿಲ್ಲ. ಕೋವಿಡ್‌ನಂತೆ ಏಕಾಏಕಿ ಲಕ್ಷಣಗಳು ಕಾಣಿಸುವುದಿಲ್ಲ. ಸೋಂಕಿತರಲ್ಲಿ ವಿವಿಧ ವೈರಸ್‌ಗಳ ಹರಡುವಿಕೆಯನ್ನು ಅಧ್ಯಯನ ಮಾಡಲು ಪರೀಕ್ಷೆಗಳು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕಳೆದ 2-3 ವಾರಗಳಲ್ಲಿ ಅಡೆನೊವೈರಸ್ ಮತ್ತು ಇನ್ಫ್ಲುಯೆನ್ಸ ಪ್ರಕರಣಗಳು ಸಾಕಷ್ಟು ಕಂಡು ಬರುತ್ತಿವೆ ಎಂದು ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ.ಆದಿತ್ಯ ಎಸ್ ಚೌಟಿ ಹೇಳಿದ್ದಾರೆ.

ಸೋಂಕು ಪ್ರಕಱಣಗಳು ಹೆಚ್ಚಾಗುತ್ತಿವೆ. ಆದರೆ, ಆತಂಕ ಪಡಬೇಕಿಲ್ಲ. ಸೋಂಕು ಅಷ್ಟೊಂದು ಪ್ರಭಾವಕಾರಿಯಾಗಿರುವುದಿಲ್ಲ. ಜ್ವರ, ಶೀತ, ಗಂಟಲು ನೋವು, ದೇಹದ ನೋವು, ವಾಂತಿ ಮತ್ತು ಅತಿಸಾವು ಅಡೆನೊವೈರಸ್‌ನ ಲಕ್ಷಣಗಳಾಗಿವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here