ಒತ್ತುವರಿ ತೆರವಿಗೆ ಬಿಬಿಂಪಿ ಆದೇಶ ಹೊರಡಿಸಿದ ಬಳಿಕವೂ ವಿಭೂತಿಪುರ ಕೆರೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ ಮುಂದುವರೆದಿದೆ. ಬೆಂಗಳೂರು: ಒತ್ತುವರಿ ತೆರವಿಗೆ ಬಿಬಿಂಪಿ ಆದೇಶ ಹೊರಡಿಸಿದ ಬಳಿಕವೂ ವಿಭೂತಿಪುರ ಕೆರೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ ಮುಂದುವರೆದಿದೆ.
ವಿಭೂತಿಪುರ ಕೆರೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಬಿಎಂಪಿ ಅಧಿಕಾರಿಗಳು. ಒತ್ತುವರಿ ತೆರವು ಮಾಡುವ ಭರವಸೆ ನೀಡಿ ನೀಡಿದ್ದರು. ಆದರೂ, ಸ್ಥಳದಲ್ಲಿ ಕಾಮಗಾರಿ ಕೆಲಸಗಳು ಮುಂದವರೆಯುತ್ತಿರುವುದು ಕಂಡು ಬಂದಿದೆ.
ಮೇಲ್ಛಾವಣಿಯ ಕೆಲಸಕ್ಕೆ ಸೆಂಟ್ರಿಂಗ್ ಶೀಟ್‌ಗಳನ್ನು ಹಾಕಲು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಶೀಟ್‌ಗಳಿಗೆ ಮರದ ಹಲಗೆಗಳನ್ನು ಕತ್ತರಿಸಲು ಅಕ್ರಮ ವಿದ್ಯುತ್ ಸಂಪರ್ಕವನ್ನು ಬಳಕೆ ಮಾಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಈನಡುವೆ ಒತ್ತುವರಿ ತೆರವು ಆಗಿರುವ ಕೆರೆಯನ್ನು ಉಳಿಸುವಂತೆ ಹೋರಾಟ ನಡೆಸುತ್ತಿರುವ ಕಾರ್ಯಕರ್ತರು ಹಾಗೂ ನಿವಾಸಿಗಳು, ಅಧಿಕಾರಿಗಳು ತೀವ್ರವಾಗಿ ಕಿಡಿಕಾರಿದ್ದಾರೆ.
ತಲಕಾವೇರಿ ಲೇಔಟ್ ನಿವಾಸಿ ಸತ್ಯವಾಣಿ ಶ್ರೀಧರ್ ಮಾತನಾಡಿ, ಈ ಬಗ್ಗೆ ವಾರ್ಡ್ ಮತ್ತು ಕೆರೆಯ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಲಾಗಿದೆ. ಆದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. . ಗೃಹರಕ್ಷಕರು ಹೆಸರಿಗೆ ಮಾತ್ರ ಇರುವಂತಿದೆ ಎಂದು ಕಿಡಿಕಾರಿದ್ದಾರೆ.
ಕಟ್ಟಡದ ಮಾಲೀಕರಾಗಿರುವ ಸುನೀತಾ ಹಾಗೂ ಆಕೆಯ ಪತಿ ಅಲೆಕ್ಸ್ ಅವರು, ಒತ್ತಡ ಹೇರಿ ಕಾರ್ಮಿಕರಿಂದ ನಿರ್ಮಾಣ ಕಾರ್ಯ ಮಾಡಿಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಸ್ಥಳದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರನ್ನು ನೋಡಿದ ಗೃಹ ರಕ್ಷಕರು ಕೆಲಸವನ್ನು ನಿಲ್ಲಿಸುವಂತೆ ಕಾರ್ಮಿಕರಿಗೆ ಎಚ್ಚರಿಕೆ ನೀಡಿದರು.
ಇದೀಗ ಅಕ್ರಮ ನಿರ್ಮಾಣದ ಮೇಲೆ ನಿಗಾ ಇಡಲು ಹಾಗೂ ಇನ್ನು ಮುಂದೆ ನಿರ್ಮಾಣವಾಗದಂತೆ ತಡೆಯಲು ಇತ್ತಿಬ್ಬರು ಗೃಹರಕ್ಷಕರನ್ನು ನಿಯೋಜಿಸಲಾಗಿದೆ ಎಂದು ವಾರ್ಡ್ ಎಂಜಿನಿಯರ್ ಕೃಷ್ಣಮೂರ್ತಿ ತಿಳಿಸಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಅಕ್ರಮ ಕಟ್ಟಡವನ್ನು ನೆಲಸಮ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ.