Home Uncategorized ಅನಾರೋಗ್ಯಕ್ಕೀಡಾದ ಮನುಷ್ಯರ ಸಾಗಿಸಲು ಜಾನುವಾರುಗಳ ಆ್ಯಂಬುಲೆನ್ಸ್ ಬಳಕೆ?: ಟೆಂಡರ್ ಪ್ರಕ್ರಿಯೆಯಲ್ಲಿ ದೋಷವಿದೆ ಎಂದ ಜಿವಿಕೆ-ಇಎಂಆರ್‌ಐ ಸಂಸ್ಥೆ

ಅನಾರೋಗ್ಯಕ್ಕೀಡಾದ ಮನುಷ್ಯರ ಸಾಗಿಸಲು ಜಾನುವಾರುಗಳ ಆ್ಯಂಬುಲೆನ್ಸ್ ಬಳಕೆ?: ಟೆಂಡರ್ ಪ್ರಕ್ರಿಯೆಯಲ್ಲಿ ದೋಷವಿದೆ ಎಂದ ಜಿವಿಕೆ-ಇಎಂಆರ್‌ಐ ಸಂಸ್ಥೆ

16
0
bengaluru

ಕರ್ನಾಟಕದಲ್ಲಿ 14 ವರ್ಷಗಳಿಂದ 108 ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯು ಜಾನುವಾರುಗಳ ಆ್ಯಂಬುಲೆನ್ಸ್ ಸೇವೆಗಳನ್ನು ಒದಗಿಸುವ ಕಂಪನಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ದೋಷಗಳಿವೆ ಎಂದು ಆರೋಪಿಸಿದೆ. ಬೆಂಗಳೂರು: ಕರ್ನಾಟಕದಲ್ಲಿ 14 ವರ್ಷಗಳಿಂದ 108 ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯು ಜಾನುವಾರುಗಳ ಆ್ಯಂಬುಲೆನ್ಸ್ ಸೇವೆಗಳನ್ನು ಒದಗಿಸುವ ಕಂಪನಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ದೋಷಗಳಿವೆ ಎಂದು ಆರೋಪಿಸಿದೆ.

2020 ರಲ್ಲಿ ಕೇಂದ್ರ ಸರ್ಕಾರವು ‘ಪಶು ಸಂಜೀವಿನಿ’ ಯೋಜನೆಯಡಿ ಪ್ರಾಣಿಗಳಿಗಾಗಿ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿತ್ತು. ಹೊರಗುತ್ತಿಗೆ ಸೇವೆಗಳಿಗೆ ಕಳೆದ ವರ್ಷ ಮೇ ತಿಂಗಳಲ್ಲಿ ಟೆಂಡರ್‌ಗಳನ್ನು ಕರೆಯಲಾಗಿತ್ತು.

ಮೇ ತಿಂಗಳಿನಲ್ಲಿ ಒಂದು ಟೆಂಡರ್ ಹಾಗೂ ಡಿಸೆಂಬರ್ 2022ರಲ್ಲಿ ಮತ್ತೊಂದು ಟೆಂಡರ್ ಕರೆಯಾಗಿತ್ತು. ಈ ಟೆಂಡರ್ ನಲ್ಲಿ ಕಂಪನಿಗಳನ್ನು ಆಯ್ಕೆ ಮಾಡುವ ಮಾನದಂಡಗಳು ಬದಲಾಗಿದ್ದು, ಸಾಮಾನ್ಯ ಆಂಬ್ಯುಲೆನ್ಸ್‌ಗಳನ್ನು (ಮಾನವರಿಗೆ) ಚಾಲನೆ ಮಾಡುವ ಸೇವಾ ಪೂರೈಕೆದಾರರು ಕೂಡ ಟೆಂಡರ್ ನಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ ಎಂದು ಜಿವಿಕೆ-ಇಎಂಆರ್‌ಐ ಸಂಸ್ಥೆಯ ಮೂಲಗಳು ಮಾಹಿತಿ ನೀಡಿದೆ.

ಕಂಪನಿಗಳು ಭಾಗವಹಿಸುವ ಮಾನದಂಡದಲ್ಲಿನ ಈ ಬದಲಾವಣೆಯು ಕಂಪನಿಗಳು ಒದಗಿಸುವ ಸೇವೆಯ ಗುಣಮಟ್ಟದಲ್ಲಿ ರಾಜಿಯಾಗುವಂತೆ ಮಾಡಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಟೆಂಡರ್ ನಲ್ಲಿ ನ್ಯಾಯಯುತ ನಡೆಗಳನ್ನು ಅನುಸರಿಸಲಾಗಿಲ್ಲ  ಎಂಬ ಆರೋಪವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

“ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಈ ಮಾಹಿತಿಯನ್ನು ಯಾರೂ ಬೇಕಾದರೂ ತಿಳಿದುಕೊಳ್ಳಬಹುದು. ಮೇ ತಿಂಗಳಿನಲ್ಲಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ಬಿಡ್ ದಾರ ಭಾಗವಹಿಸಿದ್ದ. ಹೀಗಾಗಿ ಡಿಸೆಂಬರ್ ತಿಂಗಳಿನಲ್ಲಿ ಮತ್ತೊಂದು ಟೆಂಡರ್ ಕರೆಯಲಾಗಿತ್ತು. ಮಾರ್ಚ್ ವೇಳೆಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುವ ನಿರೀಕ್ಷೆಗಳಿವೆ ಎಂದು ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here