Home Uncategorized ಅಪ್ರಾಪ್ತನಿಗೆ ಸುಫಾರಿ; ಆಂಧ್ರದಲ್ಲಿ ಕೊಲೆ ಮಾಡಿ ರಾಜ್ಯದಲ್ಲಿ ಮೃತದೇಹ ಎಸೆದಿದ್ದ ವಕೀಲ ಸೇರಿ ಮೂವರ ಬಂಧನ

ಅಪ್ರಾಪ್ತನಿಗೆ ಸುಫಾರಿ; ಆಂಧ್ರದಲ್ಲಿ ಕೊಲೆ ಮಾಡಿ ರಾಜ್ಯದಲ್ಲಿ ಮೃತದೇಹ ಎಸೆದಿದ್ದ ವಕೀಲ ಸೇರಿ ಮೂವರ ಬಂಧನ

21
0

ದೊಡ್ಡಬಳ್ಳಾಪುರ ಉಪವಿಭಾಗದ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಯಲಿನಲ್ಲಿ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧದ ಕೊಲೆ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು: ದೊಡ್ಡಬಳ್ಳಾಪುರ ಉಪವಿಭಾಗದ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಯಲಿನಲ್ಲಿ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧದ ಕೊಲೆ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಮೃತದೇಹದ ಮುಖ ವಿರೂಪಗೊಂಡಿದ್ದು, ಬೆರಳುಗಳು ತುಂಡಾಗಿದ್ದವು.

ಆಂಧ್ರಪ್ರದೇಶದ ಅನಂತಪುರದ ಕಲ್ಯಾಣದುರ್ಗದಲ್ಲಿ ಕೊಲೆ ಮಾಡಿದ ನಂತರ ಆರೋಪಿಗಳು ಶವವನ್ನು ಕಾರಿನಲ್ಲಿ ತಂದು 190 ಕಿಮೀ ದೂರದ ಕರ್ನಾಟಕದಲ್ಲಿ ಎಸೆದಿದ್ದರು. ಜನವರಿ 2 ರಂದು ಘಟನೆ ಬೆಳಕಿಗೆ ಬಂದಿದ್ದು, ಫಿಂಗರ್‌ಪ್ರಿಂಟ್ ಆಧರಿಸಿ ಕೊಲೆಯಾದ ವ್ಯಕ್ತಿಯನ್ನು ಕಲ್ಯಾಣದುರ್ಗದ ಕಂಬದೂರಿನ ವಿ ಮುತ್ಯಾಲಪ್ಪ (37) ಎಂದು ಗುರುತಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ 20 ದಿನಗಳ ನಂತರ, ಪೊಲೀಸರು ಮೂವರು ಆರೋಪಿಗಳನ್ನು ಕಲ್ಯಾಣದುರ್ಗದಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಇ ನಾಗೇಶ್ (27), ವಕೀಲ ಇ ಸೋಮಶೇಖರ್ ಅಲಿಯಾಸ್ ಶೇಖರ್ (32) ಮತ್ತು ದಿನಗೂಲಿ ಕಾರ್ಮಿಕನಾಗಿದ್ದ ಅಪ್ರಾಪ್ತ ಎಂದು ಗುರುತಿಸಲಾಗಿದೆ. ಈ ಮೂವರೂ ಅನಂತಪುರದವರು ಎನ್ನಲಾಗಿದೆ.

ನಾಗೇಶ್ ಮತ್ತು ಮುತ್ಯಾಲಪ್ಪ ನಡುವಿನ ಹಳೆ ವೈಷಮ್ಯವೇ ಕೊಲೆಗೆ ಕಾರಣ. ಸಂತ್ರಸ್ತರನ್ನು ಪ್ರತ್ಯೇಕ ಸ್ಥಳಕ್ಕೆ ಕರೆತರಲು ಅವರು ತಮ್ಮ ಸ್ನೇಹಿತ ಸೋಮಶೇಖರ್ ಅವರ ಸಹಾಯವನ್ನು ಪಡೆದಿದ್ದಾರೆ. ಸಂತ್ರಸ್ತನನ್ನು ಮದ್ಯ ಸೇವಿಸುವಂತೆ ಮಾಡಿದ ಬಳಿಕ ಆರೋಪಿಗಳು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಕರ್ನಾಟಕಕ್ಕೆ ತಂದು ಜಮೀನೊಂದರಲ್ಲಿ ಎಸೆದಿದ್ದಾರೆ. ಮೃತದೇಹ ಸಾಗಿಸಲು ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುತ್ಯಾಲಪ್ಪ ವೃತ್ತಿಪರ ಕಳ್ಳರಾಗಿದ್ದು, ಅವರ ವಿರುದ್ಧ ಆಂಧ್ರಪ್ರದೇಶದಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳಿವೆ. ಅವರು ಕಳೆದ 10 ವರ್ಷಗಳಿಂದ ವಕೀಲರೊಂದಿಗೆ ಬಿನ್ನಾಭಿಪ್ರಾಯವನ್ನು ಹೊಂದಿದ್ದರು. ನಾಗೇಶ್ ತನಗಿರುವ ಕಾನೂನಿನ ಜ್ಞಾನವನ್ನು ಬಳಸಿಕೊಂಡು ಅಪ್ರಾಪ್ತನಿಗೆ  2,500 ರೂಪಾಯಿ ಸುಫಾರಿ ನೀಡಿ ಕೊಲೆ ಮಾಡಿಸಿದ್ದಾನೆ. ಸಂತ್ರಸ್ತನ ಬೆರಳುಗಳನ್ನು ಕತ್ತರಿಸುವಂತೆ ಅವರು ಆರೋಪಿಗಳಿಗೆ ನಿರ್ದೇಶಿಸಿದ್ದಾರೆ. ಹೀಗಾದರೆ, ಬೆರಳಚ್ಚುಗಳ ಆಧಾರದ ಮೇಲೆ ದೇಹವನ್ನು ಗುರುತಿಸಲು ಪೊಲೀಸರಿಗೆ ಕಠಿಣ ಸಮಯ ಹಿಡಿಯುತ್ತದೆ. ಆದರೆ, ಪೊಲೀಸರಿಗೆ ಅವರಾಧದ ಸ್ಥಳದಲ್ಲಿ ಒಂದು ಬೆರಳು ಪತ್ತೆಯಾಗಿದೆ. ಈ ಮೂಲಕ ಅವರು ಮೃತದೇಹವನ್ನು ಗುರುತಿಸಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here