ಹೊಸ ದಿಲ್ಲಿ: ಇತ್ತೀಚೆಗೆ ನಡೆದ ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ನಾಸಾದ ಸದ್ದು ಮಾಡುವ ರಾಕೆಟ್ ಗಳ ಉಡಾವಣಾ ಯೋಜನೆಯ ನೇತೃತ್ವ ವಹಿಸಿದ್ದ ಆರೋಹ್ ಬರ್ಜಾತ್ಯ ಭಾರತೀಯ ಸಂಜಾತ ಸಂಶೋಧಕರಾಗಿದ್ದಾರೆ.
ಭೂಮಿಯ ಮೇಲಿನ ಒಂದು ಭಾಗದ ಮೇಲೆ ಸೂರ್ಯನ ಬೆಳಕು ಮಂಕಾದಾಗ ಭೂಮಿಯ ಹೊರ ವಾತಾವರಣದ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬ ಕುರಿತು ಅಧ್ಯಯನ ನಡೆಸಲು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯು ಎಪ್ರಿಲ್ 8ರಂದು ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣದಂದು ಮೂರು ಸದ್ದು ಮಾಡುವ ರಾಕೆಟ್ ಗಳನ್ನು ಉಡಾಯಿಸಿತು.
ಆರೋಹ್ ಬರ್ಜಾತ್ಯ ಯಾರು?
ಎಂಜಿನಿಯರಿಂಗ್ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿರುವ ಆರೋಹ್ ಬರ್ಜಾತ್ಯ ಫ್ಲೋರಿಡಾದ ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯದಲ್ಲಿನ ಸ್ಪೇಸ್ ಆ್ಯಂಡ್ ಅಟ್ಮಾಸ್ಫಿಯರಿಕ್ ಇನ್ಸ್ಟ್ರುಮೆಂಟೇಶನ್ ಲ್ಯಾಬ್ ನ ನಿರ್ದೇಶಕರಾಗಿದ್ದಾರೆ.
ಕೆಮಿಕಲ್ ಎಂಜಿನಿಯರ್ ಆದ ಅಶೋಕ್ ಕುಮಾರ್ ಬರ್ಜಾತ್ಯ ಹಾಗೂ ಅವರ ಪತ್ನಿ ರಾಜೇಶ್ವರಿಯವರ ಪುತ್ರರಾದ ಆರೋಹ್ ಬರ್ಜಾತ್ಯ, ಮುಂಬೈ ಬಳಿ ಇರುವ ಪಾತಾಳಗಂಗಾ, ಹೈದರಾಬಾದ್, ಜೈಪುರ, ಪಿಲನಿ ಹಾಗೂ ಸೋಲಾಪುರ ಸೇರಿದಂತೆ ಭಾರತದಾದ್ಯಂತ ಇರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರು.
ನಂತರ ಅವರು ಸೋಲಾಪುರದ ವಾಲ್ಚಂದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ತಮ್ಮ ಪದವಿ ಪೂರೈಸಿದರು.
2021ರಲ್ಲಿ ಉಟಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಾಗೆ ತಮ್ಮ ವಾಸ್ತವ್ಯ ಬದಲಿಸಿದರು. ನಂತರ ಅವರು ಅದೇ ವಿಶ್ವವಿದ್ಯಾಲಯದಲ್ಲಿ ಸ್ಪೇಸ್ ಕ್ರಾಫ್ಟ್ ಇನ್ಸ್ಟ್ರುಮೆಂಟೇಶನ್ ನಲ್ಲಿ ಪಿಎಚ್ಡಿ ಪದವಿ ವ್ಯಾಸಂಗ ಮಾಡಿದರು.
ಈ ಕುರಿತು ಅವರು ತಮ್ಮ ಲಿಂಕ್ಡ್ ಇನ್ ಸ್ವವಿವರದಲ್ಲಿ, “ಬಾಹ್ಯ ಹೂಡಿಕೆ ಹೊಂದಿರುವ ಸಂಶೋಧನಾ ಸಂಸ್ಥೆಯನ್ನು ಮುನ್ನಡೆಸುವುದರೊಂದಿಗೆ, ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯದಲ್ಲಿ ಕಾಲಮಿತಿ ಸಿಬ್ಬಂದಿಯಾಗಿ ಯುವ ಮನಸ್ಸುಗಳನ್ನು ರೂಪಿಸುತ್ತಾ, ಅವರಿಗೆ ವಿಚಾರಣೆ ಆಧಾರಿತ ಕಲಿಕಾ ತಂತ್ರಗಳನ್ನು ಕಲಿಸುವುದರಲ್ಲಿ ಮಗ್ನನಾಗಿದ್ದೇನೆ. ಇದರೊಂದಿಗೆ ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಫಿಸಿಕ್ಸ್ ಪ್ರೋಗ್ರಾಮ್ ನಲ್ಲಿ ಏಕಾಗ್ರತೆಯ ಹೊಸ ಸ್ಥಳವನ್ನು ನಿರ್ಮಿಸಿದ್ದೇನೆ. ಬಾಹ್ಯಾಕಾಶ ಸಂಶೋಧನೆ ಹಾಗೂ ಶಿಕ್ಷಣದಲ್ಲಿ ಅತ್ಯಾಧುನೀಕರಣವನ್ನು ಸುಧಾರಿಸುವುದು ಹಾಗೂ ಮುಂದಿನ ಪೀಳಿಗೆಯ ಎಂಜಿನಿಯರ್ ಗಳು ಹಾಗೂ ವಿಜ್ಞಾನಿಗಳಿಗೆ ಸ್ಫೂರ್ತಿ ತುಂಬುವುದು ನನ್ನ ಗುರಿಯಾಗಿದೆ”, ಎಂದು ಬರೆದುಕೊಂಡಿದ್ದಾರೆ.