ಬೆಂಗಳೂರು:
ಯುದ್ಧ ಕೌಶಲ್ಯಗಳು, ತಂತ್ರಜ್ಞಾನ ವಿಚಾರದಲ್ಲಿ ಜಗತ್ತಿನಾದ್ಯಂತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸಕಲ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಭೂಸೇನೆಯ ತರಬೇತಿ ಕಮಾಂಡೆಂಡ್ ಹಾಗು ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ರಾಜ್ ಶುಕ್ಲಾ ಹೇಳಿದ್ದಾರೆ.

ಬೆಂಗಳೂರಿನ ಮಿಲಿಟರಿ ಪೊಲೀಸ್ ಕೇಂದ್ರದ ತರಬೇತಿ ಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿನ ತರಬೇತಿ, ನೇಮಕಾತಿ ಮತ್ತಿತರ ವಿಭಾಗಗಳಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಶುಕ್ಲಾ, ಶಸ್ತ್ರಪಡೆಗಳ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ತರಬೇತಿ ಪಡೆಯಬೇಕು. ಜಗತ್ತಿನಾದ್ಯಂತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ವಾಂಗೀಣ ಕೌಶಲ್ಯ ಪಡೆದರೆ ಸಶಸ್ತ್ರ ಪಡೆಗಳಿಗೆ ನೀವು ಉತ್ತಮ ಸಂಪತ್ತು ಪಡೆಯಲು ಸಾಧ್ಯವಾಗಲಿದೆ ಎಂದರು.

ಬೆಂಗಳೂರಿನ ಇಎಸ್‌ಸಿ ಕೇಂದ್ರ ಮತ್ತು ಕಾಲೇಜು ದೇಶದ ಪ್ರಮುಖ ಸೇನಾ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದ್ದು, ಇಲ್ಲಿ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳನ್ನು ಸಹ ಅಳವಡಿಸಿಕೊಳ್ಳಲಾಗಿದೆ. ಇಲ್ಲಿನ ತರಬೇತಿ ಸೌಲಭ್ಯಗಳು, ಹಲವಾರು ನಾವೀನ್ಯತೆಯ ಕ್ರಮಗಳು 21ನೇ ಶತಮಾನಕ್ಕೆ ಅನುಗುಣವಾಗಿದೆ. ಅಗತ್ಯಕ್ಕೆ ತಕ್ಕಂತೆ ಸೇನಾ ಸಿಬ್ಬಂದಿಯನ್ನು ಸಜ್ಜುಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
Lt Gen Raj Shukla, GOC-in-C Army Training Cmnd & visited ASC Centre and college, Bengaluru & the Military Police Centre & School in Bluru . He witnessed the training being imparted at the Cat 'A' Establishment, incl recruits & other trainees at Centre@SpokespersonMoD @adgpi pic.twitter.com/FdcJWmL0by
— PRO Bengaluru, Ministry of Defence (@Prodef_blr) November 8, 2020
The Army Commander visited various facilities of the establishment & appreciated the efforts made in enhancing the std of trng, especially introduction of latest technologies. Army Commander was very appreciative of the upgradation of trng facilities, various innovations used.
— PRO Bengaluru, Ministry of Defence (@Prodef_blr) November 8, 2020