Home ಅಪರಾಧ ಆನೆ ದಂತ ಮಾರಾಟ: ತಮಿಳುನಾಡು ಮೂಲದ ಐವರ ಬಂಧನ

ಆನೆ ದಂತ ಮಾರಾಟ: ತಮಿಳುನಾಡು ಮೂಲದ ಐವರ ಬಂಧನ

43
0

ಬೆಂಗಳೂರು:

ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ಐವರು ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ನಗರ ವಿವಿ ಪುರಂ ಪೊಲೀಸರು ದುಬಾರಿ ಬೆಲೆಯ ಎರಡು ದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಕಿಲಾನೂರು ಗ್ರಾಮದ ನಿವಾಸಿ ಗೋವಿಂದರಾಜು (24), ವೆಲ್ಲೂರು ಜಿಲ್ಲೆಯ ಕಡ್ಪಾಡಿ ತಾಲೂಕಿನ ಸೆನ್ನೂರು ಗ್ರಾಮದ ರಾಜೇಶ್ (28), ತಿರುಪತ್ತೂರು ಜಿಲ್ಲೆಯ ಜೋಲಾರ್ ಪೇಟೆ ನ್ಯೂ ಹೋಟೆಲ್ ಸ್ಟ್ರೀಟ್ ನಿವಾಸಿ ಪ್ರಭಾಕರನ್ (34), ವೆಲ್ಲೂರು ಜಿಲ್ಲೆ ಕಾಟ್ಪಾಡಿ ತಾಲೂಕು ಕುಮಾರಕೃಪ ನಗರದ ನವೀನ್ (29), ತಿರುಪತ್ತೂರು ಜಿಲ್ಲೆಯ ಆಂಬೂರು ತಾಲೂಕಿನ ಕಸಬಾ ಹೋಬಳಿಯ ವೆಪಮರ ಸ್ಟ್ರೀಟ್ ನಿವಾಸಿ ತಮಿಳುಸೆಲ್ವನ್ (25) ಬಂಧಿತ ಆರೋಪಿಗಳು.

ವಿವಿಪುರಂ ಪೊಲೀಸ್ ಠಾಣೆಯ ಸಜ್ಜನ್ ರಾವ್ ಸರ್ಕಲ್ ನ ಫುಡ್ ಸ್ಟ್ರೀಟ್ ನಲ್ಲಿ ಅಕ್ರಮವಾಗಿ ಆನೆ ದಂತಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಐವರು ತಮಿಳುನಾಡು ಮೂಲದವರಾಗಿದ್ದು, ಆನೆ ದಂತಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಬಂದಿರುವುದಾಗಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.

ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ವಿವಿಪುರಂ ಉಪ ವಿಭಾಗದ ಎಸಿಪಿ ಶ್ರೀನಿವಾಸ ಮೂರ್ತಿ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಶಂಕರ್, ಪಿಎಸ್ ಐಗಳಾದ ಸಂತೋಷ್ ಉಡಚಾಣ, ಸಚಿನ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here