Home Uncategorized ಆ್ಯಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡಲು ಬಂತು 'ಬೈಕ್ ಎಸ್ಕಾರ್ಟ್': ಜನರ ಜೀವ ಉಳಿಸಲು ಹೊಸ ಸೇವೆ...

ಆ್ಯಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡಲು ಬಂತು 'ಬೈಕ್ ಎಸ್ಕಾರ್ಟ್': ಜನರ ಜೀವ ಉಳಿಸಲು ಹೊಸ ಸೇವೆ ಆರಂಭಿಸಿದ ಯುವಕ!

19
0

ನಮ್ಮ ಬೆಂಗಳೂರು ದಿನದಿಂದ ದಿನಕ್ಕೆ ಅಗಾಧವಾಗಿ ಬೆಳೆಯ ತೊಡಗಿದ್ದು, ಇಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದರಲ್ಲಿ ಪ್ರಮುಖ ಸಮಸ್ಯೆ ಸಂಚಾರ ದಟ್ಟಣೆ. ಈ ಸಂಚಾರ ದಟ್ಟಣೆಯಿಂದಾಗಿ ಸಕಾಲಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಅಗಾಗ್ಗೆ ಸಾವುನೋವು ಸಂಭವಿಸುವುದನ್ನು ನಾವು ನೋಡುತ್ತಿರುತ್ತೇವೆ. ಬೆಂಗಳೂರು: ನಮ್ಮ ಬೆಂಗಳೂರು ದಿನದಿಂದ ದಿನಕ್ಕೆ ಅಗಾಧವಾಗಿ ಬೆಳೆಯ ತೊಡಗಿದ್ದು, ಇಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದರಲ್ಲಿ ಪ್ರಮುಖ ಸಮಸ್ಯೆ ಸಂಚಾರ ದಟ್ಟಣೆ. ಈ ಸಂಚಾರ ದಟ್ಟಣೆಯಿಂದಾಗಿ ಸಕಾಲಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಅಗಾಗ್ಗೆ ಸಾವುನೋವು ಸಂಭವಿಸುವುದನ್ನು ನಾವು ನೋಡುತ್ತಿರುತ್ತೇವೆ.

ಅಂತಹ ರೋಗಿಗಳಿಗೆ ಸಹಾಯ ಮಾಡಲು, ಬೆಂಗಳೂರಿನ ಈಶಾನ್ಯ ವಲಯದಲ್ಲಿ ಟ್ರಾಫಿಕ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾಮ್ ಬಿಷ್ಣೋಯ್ (27) ಅವರು ಆಂಬ್ಯುಲೆನ್ಸ್‌ಗಳಿಗೆ ಬೆಂಗಾವಲು (ಎಸ್ಕಾರ್ಟ್) ವ್ಯವಸ್ಥೆ ಕಲ್ಪಿಸುವ ಉಪಕ್ರಮವನ್ನು ಆರಂಭಿಸಿದ್ದಾರೆ.

ಬೈಕ್ ಎಸ್ಕಾರ್ಟ್ ಸೇವೆಂಗಳನ್ನು ಶ್ರೀರಾಮ್ ಅವರು ಆರಂಭಿಸಿದ್ದು, ಶೀಘ್ರದಲ್ಲೇ ಸರ್ಕಾರೇತರ ಸಂಸ್ಥೆಯೊಂದನ್ನು (ಎನ್‌ಜಿಒ) ಸ್ಥಾಪಿಸಲು ಚಿಂತನೆ ನಡೆಸುತ್ತಿದ್ದಾರೆ.

ಆ್ಯಂಬುಲೆನ್ಸ್ ಹೋಗುವಾಗ ಸಂಚಾರ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ಸ್ವಯಂ ಸೇವಕರನ್ನು ನಿಯೋಜಿಸಲು ಬಯಸುತ್ತಿದ್ದೇನೆ. ಈ ಸ್ವಯಂ ಸೇವಕರು ದೂರವಾಣಿ ಕರೆ ಮಾಡುತ್ತಿದ್ದಂತೆಯೇ ಸ್ಥಳಕ್ಕೆ ಬಂದು ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಡುತ್ತಾರೆ. ರೋಗಿ ಆಸ್ಪತ್ರೆ ತಲುಪುವವರೆಗೆ ಇವರು ಆ್ಯಂಬುಲೆನ್ಸ್ ಹಿಂದೆಯೇ ಇರುತ್ತಾರೆ.

ರಸ್ತೆಗಳಲ್ಲಿ ಸಾಕಷ್ಟು ಜನರು ಆ್ಯಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡುವುದಿಲ್ಲ. ಶಬ್ಧ ಬರುತ್ತಿದ್ದರೂ ಮೊದಲು ತಾವೇ ಮುಂದೆ ಹೋಗಬೇಕೆಂದು ಬಯಸುತ್ತಾರೆ. ಇರದಿಂದ ಆ್ಯಂಬುಲೆನ್ಸ್ ಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಬೈಕ್ ಎಸ್ಕಾರ್ಟ್ ಗಳು ದೂರಾಗಿಸುತ್ತಾರೆಂದು ಶ್ರೀರಾಮ್ ಅವರು ಹೇಳಿದ್ದಾರೆ.

ಸರ್ಕಾರಿ ಹಾಗೂ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಆ್ಯಂಬುಲೆನ್ಸ್ ಸೇವೆಗಳೊಂದಿಗೆ ಬೈಕ್ ಎಸ್ಕಾರ್ಟ್ ಗಳ ಸೇವೆಯನ್ನು ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜಸ್ಥಾನ ಮೂಲಕ ಶ್ರೀರಾಮ್ ಬಿಷ್ಟೋಣ್ ಅವರು 7 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ದೆಹಲಿಯಲ್ಲಿ ಕೆಲ ಗುಂಪುಗಳು ಈ ಸೇವೆಯನ್ನು ಆರಂಭಿಸಿವೆ. ಇದರಿಂದ ಶ್ರೀರಾಮ್ ಅವರು ಪ್ರೇರಿತರಾಗಿದ್ದು, ಬೆಂಗಳೂರಿನಲ್ಲೂ ಈ ಸೇವೆ ಆರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ಹಲವು ಯುವಕರು ನನ್ನ ಎನ್’ಜಿಒ ಸಂಸ್ಥೆ ಜೊತೆಗೆ ಕಾರ್ಯನಿರ್ವಹಿಸಲು ಆಸಕ್ತಿ ತೋರಿದ್ದಾರೆಂದು ಶ್ರೀರಾಮ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here