Home Uncategorized ಇಂದು ಸಿಎಂ ಬೊಮ್ಮಾಯಿಗೆ 63ನೇ ವರ್ಷದ ಹುಟ್ಟುಹಬ್ಬ: ಪೋಷಕರ ಸಮಾಧಿಗೆ ತೆರಳಿ ನಮನ, ಗಣ್ಯರಿಂದ ಶುಭಹಾರೈಕೆ

ಇಂದು ಸಿಎಂ ಬೊಮ್ಮಾಯಿಗೆ 63ನೇ ವರ್ಷದ ಹುಟ್ಟುಹಬ್ಬ: ಪೋಷಕರ ಸಮಾಧಿಗೆ ತೆರಳಿ ನಮನ, ಗಣ್ಯರಿಂದ ಶುಭಹಾರೈಕೆ

7
0
bengaluru

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಜನವರಿ 28ಕ್ಕೆ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಜನವರಿ 28ಕ್ಕೆ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

ಹಾವೇರಿ ಜಿಲ್ಲೆಯ ಶಿಗ್ಗಾವಿ ಮೂಲದವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ-ಧಾರವಾಡ ಪ್ರವಾಸದಲ್ಲಿದ್ದಾರೆ.

ಇಂದು ಬೆಳಗ್ಗೆಯೇ ಅವರು ತಮ್ಮ ಹುಟ್ಟುಹಬ್ಬ ಸಂಬಂಧ ಹುಬ್ಬಳ್ಳಿಯಲ್ಲಿರುವ ತಮ್ಮ ತಂದೆ-ತಾಯಿ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು ಜನತಾ ದಳ (ಯು)ದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2008ರಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿಕೊಂಡರು. ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿಯೂ ಗುರುತಿಸಿಕೊಂಡಿದ್ದರು. ಬಳಿಕ ವಿವಿಧ ಇಲಾಖೆಗಳ ಖಾತೆಯನ್ನು ನಿಭಾಯಿಸಿದ ಇವರು 2021ರಲ್ಲಿ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ರಾಜ್ಯದ 23ನೇ ಮುಖ್ಯಮಂತ್ರಿಯಾದರು. 

ಬೊಮ್ಮಾಯಿಯವರ ಹುಟ್ಟುಹಬ್ಬ ಅಂಗವಾಗಿ ಅವರಿಗೆ ಇಂದು ಅನೇಕ ಗಣ್ಯರು, ರಾಜಕೀಯ ನಾಯಕರು, ಸಂಪುಟ ಸಹೋದ್ಯೋಗಿಗಳು ಶುಭಾಶಯ ಕೋರುತ್ತಿದ್ದಾರೆ.

bengaluru

ಜನಪ್ರಿಯ ಮುಖ್ಯಮಂತ್ರಿಗಳು, ಆತ್ಮೀಯರೂ ಆಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.@BSBommai pic.twitter.com/YxWur5CMcV
— B.S.Yediyurappa (@BSYBJP) January 28, 2023

bengaluru

LEAVE A REPLY

Please enter your comment!
Please enter your name here