Home Uncategorized ಇನ್‌ಫ್ಲುಯೆಂಜಾ ಆತಂಕ: ಅಗತ್ಯ ಔಷಧಿಗಳ ಪಟ್ಟಿಗೆ 'ಒಸೆಲ್ಟಾಮಿವಿರ್' ಸೇರ್ಪಡೆ

ಇನ್‌ಫ್ಲುಯೆಂಜಾ ಆತಂಕ: ಅಗತ್ಯ ಔಷಧಿಗಳ ಪಟ್ಟಿಗೆ 'ಒಸೆಲ್ಟಾಮಿವಿರ್' ಸೇರ್ಪಡೆ

12
0
bengaluru

ರಾಜ್ಯದಲ್ಲಿ ಅಡೆನೊವೈರಸ್, ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಔಷಧಿಗಳ ಪಟ್ಟಿಗೆ ಒಸೆಲ್ಟಾಮಿವಿರ್’ನ್ನು ಸರ್ಕಾರ ಸೇರ್ಪಡೆಗೊಳಿಸಿದೆ. ಬೆಂಗಳೂರು: ರಾಜ್ಯದಲ್ಲಿ ಅಡೆನೊವೈರಸ್, ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಔಷಧಿಗಳ ಪಟ್ಟಿಗೆ ಒಸೆಲ್ಟಾಮಿವಿರ್’ನ್ನು ಸರ್ಕಾರ ಸೇರ್ಪಡೆಗೊಳಿಸಿದೆ.

ಸೋಂಕು ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಗತ್ಯ ಔಷಧಿಗಳ ಪಟ್ಟಿಗೆ ಒಸೆಲ್ಟಾಮಿವಿರ್’ನ್ನು ಸೇರ್ಪಡೆಗೊಳಿಸಿದೆ. ಈ ಔಷಧಿ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಾಗಲಿದೆ.

ಇನ್ಫ್ಲುಯೆಂಜಾ ಮತ್ತು ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಈ ಹಿಂದೆ ಕರ್ನಾಟಕ ಸೇರಿ ದೇಶದ ಆರು ರಾಜ್ಯಗಳಿಗೆ ಪತ್ರ ಬರೆದಿತ್ತು.

ಇನ್ಫ್ಲುಯೆಂಜಾ ವೈರಸ್ ನಿಂದ ಗುಣಮುಖವಾಗಲು ಸಾಮಾನ್ಯವಾಗಿ 5-7 ದಿನಗಳು ಬೇಕಾಗಲಿದ್ದು, ಮರಣ ಪ್ರಮಾಣ ಕಡಿಮೆ ಇರುತ್ತದೆ. ಆದರೆ, ನವಜಾತ ಶಿಶುಗಳು, ಗರ್ಭಿಣಿ ಮಹಿಳೆಯರು ಹಾಗೂ ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೆಚ್ಚೆಚ್ಚು ಜನರಿರುವ ಪ್ರದೇಶಗಳಲ್ಲಿ ಹೋಗುವುದನ್ನು ಜನರು ನಿಯಂತ್ರಿಸಬೇಕು, ಶುಚಿತ್ವ ಕಾಪಡಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here