Home Uncategorized ಇಬ್ಬರು ಅಧಿಕಾರಿಗಳ ಸೇವಾ ರಿಜಿಸ್ಟರ್ ನಾಪತ್ತೆ: ಮಧುಗಿರಿ ಪಿಡಬ್ಲ್ಯುಡಿ ವ್ಯವಸ್ಥಾಪಕ ಆತ್ಮಹತ್ಯೆ

ಇಬ್ಬರು ಅಧಿಕಾರಿಗಳ ಸೇವಾ ರಿಜಿಸ್ಟರ್ ನಾಪತ್ತೆ: ಮಧುಗಿರಿ ಪಿಡಬ್ಲ್ಯುಡಿ ವ್ಯವಸ್ಥಾಪಕ ಆತ್ಮಹತ್ಯೆ

10
0
Advertisement
bengaluru

ಲಕ್ಷ್ಮೀನರಸಿಂಹಯ್ಯ (56) ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧುಗಿರಿ: ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳ ಸೇವಾ ಪುಸ್ತಕ (ಸರ್ವೀಸ್ ರಿಜಿಸ್ಟರ್) ಕಳೆದು ಹೋಗಿದ್ದು ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿಲ್ಲವೆಂದು ಮನ ನೊಂದ  ಮಧುಗಿರಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ವಿಭಾಗ ಕಚೇರಿಯ ವ್ಯವಸ್ಥಾಪಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಕ್ಷ್ಮೀನರಸಿಂಹಯ್ಯ (56) ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕೆಲಸ ಮಾಡುತ್ತಿದ್ದರು.
 
ಗುರುವಾರ ರಾತ್ರಿ ಶಿವಗಂಗೆ ಪ್ರವಾಸಿ ಮಂದಿರಕ್ಕೆ ತೆರಳಿದ್ದ ಲಕ್ಷ್ಮೀನರಸಿಂಹಯ್ಯ ಶುಕ್ರವಾರ ಮುಂಜಾನೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.

ಕಳೆದ ಎಂಟು ವರ್ಷಗಳಿಂದ ಮಧುಗಿರಿಯ ಪಿಡಬ್ಲ್ಯುಡಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಧುಗಿರಿ ಪಟ್ಟಣದ ಸಿರಾ ಗೇಟ್‌ನಲ್ಲಿರುವ ಪಿಡಬ್ಲ್ಯುಡಿ ಕ್ವಾರ್ಟರ್ಸ್‌ನಲ್ಲಿ ಕುಟುಂಬ ಸಮೇತ ವಾಸವಿದ್ದರು.

ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ಪಿಡಬ್ಲ್ಯುಡಿ ಕೇಂದ್ರ ಕಚೇರಿಗೆ ಆಟೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಸೇವಾ ಪುಸ್ತಕ ಕಳೆದುಕೊಂಡಿದ್ದರು ಎನ್ನಲಾಗಿದೆ. ಅವುಗಳನ್ನು ಯಾರಾದರೂ ಕದ್ದಿದ್ದಾರೆಯೇ ಅಥವಾ ಆಟೋದಲ್ಲಿ ಮರೆತಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.  ತಮ್ಮ ಮೇಲೆ ಶಿಸ್ತು ಕ್ರಮ  ಹಾಗೂ ಮುಂದೆ ಎದುರಾಗುವ ಸಮಸ್ಯೆಗಳಿಗೆ ಹೆದರಿ  ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ಶಂಕಿಸಲಾಗಿದೆ.

bengaluru bengaluru

ಸೇವಾಪುಸ್ತಕ ಕಳೆದು ಹೋಗಿದ್ದರಿಂದ ಮನನೊಂದಿದ್ದ ಲಕ್ಷ್ಮೀ ನರಸಿಂಹಯ್ಯ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ್ದರು. ಶುಕ್ರವಾರ ನಸುಕಿನ 1.30ರವರೆಗೂ ಅವರ ಫೋನ್ ಆನ್ ಆಗಿದ್ದು, ನಂತರ ಆತ್ಮಹತ್ಯೆ ಮಾಡಿಕೊಂಡಿರಬೇಕು. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

 


bengaluru

LEAVE A REPLY

Please enter your comment!
Please enter your name here