Home Uncategorized ಉಕ್ರೇನ್ ಎಂದೂ ಒಂಟಿಯಲ್ಲ ನಿಮ್ಮ ಜತೆ ನಾವಿದ್ದೇವೆ ಎಂದು ಅಭಯ ನೀಡಿದ ಅಮೆರಿಕ ಅಧ್ಯಕ್ಷ ಜೋ...

ಉಕ್ರೇನ್ ಎಂದೂ ಒಂಟಿಯಲ್ಲ ನಿಮ್ಮ ಜತೆ ನಾವಿದ್ದೇವೆ ಎಂದು ಅಭಯ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

11
0

ಉಕ್ರೇನ್ (Ukraine)ಎಂದೂ ಒಂಟಿಯಲ್ಲ, ನಿಮ್ಮ ಜತೆ ನಾವಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್( Joe Biden) ಭರವಸೆ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಜತೆ ವೈಟ್​ ಹೌಸ್​ನಲ್ಲಿ ಮಾತನಾಡಿದ ಬೈಡನ್, ಉಕ್ರೇನ್ ಎಂದೂ ಏಕಾಂಗಿಯಲ್ಲ, ಅಮೆರಿಕ ಅದರ ಜತೆಗಿದೆ ಎಂದು ಅಭಯ ನೀಡಿದರು. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ತಲುಪಿದ್ದು, ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾ-ಉಕ್ರೇನ್‌ ಸಂಘರ್ಷ, ಉಕ್ರೇನ್‌ಗೆ ಅಮೆರಿಕದ ಸಾಮರಿಕ ನೆರವು ಮುಂದುವರಿಕೆ, ಹೀಗೆ ಹಲವು ವಿಷಯಗಳ ಕುರಿತು ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ.

ಅಲ್ಲದೇ ಉಕ್ರೇನ್‌ಗೆ ಸಾಮರಿಕ ಬೆಂಬಲವನ್ನು ಅಮೆರಿಕ ಮುಂದುವರೆಸಲಿದೆ ಎಂದು ಬೈಡನ್‌ ಇದೇ ವೇಳೆ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಭರವಸೆ ನೀಡಿದ್ದಾರೆ. ಅಮೆರಿಕವು ಉಕ್ರೇನ್​ನ ಪ್ರತಿ ಹೆಜ್ಜೆಯಲ್ಲೂ ಜತೆಯಾಗಿ ನಿಲ್ಲುತ್ತದೆ, ಉಕ್ರೇನ್​ನ ಹೋರಾಟ ಎಷ್ಟು ದೊಡ್ಡದಿದೆ ಎಂದು ಅಮೆರಿಕವು ಅರ್ಥಮಾಡಿಕೊಳ್ಳಬಲ್ಲದು ಎಂದರು.

ಮತ್ತಷ್ಟು ಓದಿ:ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​ಗೆ ದೂರವಾಣಿ ಕರೆ ಮಾಡಿದ ಮೋದಿ; ದ್ವಿಪಕ್ಷೀಯ ಸಂಬಂಧ ಬಗ್ಗೆ ಚರ್ಚೆ

ಇನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಭೇಟಿಯ ಭಾಗವಾಗಿ,‌ ಅಮೆರಿಕದ ರಕ್ಷಣಾ ಇಲಾಖೆಯು ಉಕ್ರೇನ್‌ಗೆ 1.85 ಬಿಲಿಯನ್ ಅಮೆರಿಕನ್‌ ಡಾಲರ್‌ ಮೊತ್ತದ ಹೆಚ್ಚುವರಿ ಭದ್ರತಾ ನೆರವನ್ನು ಘೋಷಿಸಿದೆ

ಇದೇ ಸಂದರ್ಭದಲ್ಲಿ ಇಬ್ಬರೂ ನಾಯಕರು, ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅತ್ತ ಝೆಲೆನ್ಸ್ಕಿ ಅತ್ಯಂತ ಗುಪ್ತವಾಗಿ ಅಮೆರಿಕ ತಲುಪಿರುವುದನ್ನು ಕೇಳಿ, ರಷ್ಯಾ ಅಧ್ಯಕ್ಷ ಪುಟಿನ್‌ ಕೆಂಡಾಮಂಡಲರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

LEAVE A REPLY

Please enter your comment!
Please enter your name here