Home Uncategorized ಉಡುಪಿ: ಇಂದಿನಿಂದ ನ್ಯಾಷನಲ್ ಡ್ರ್ಯಾಗನ್ ಬೋಟ್ ಸ್ಪರ್ಧೆ ಆರಂಭ

ಉಡುಪಿ: ಇಂದಿನಿಂದ ನ್ಯಾಷನಲ್ ಡ್ರ್ಯಾಗನ್ ಬೋಟ್ ಸ್ಪರ್ಧೆ ಆರಂಭ

10
0
bengaluru

ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಡ್ರ್ಯಾಗನ್ ಬೋಟ್ ಸ್ಪರ್ಧೆ ಗುರುವಾರದಿಂದ 4 ದಿನಗಳ ಕಾಲ ಉಡುಪಿಯ ಹೇರೂರು ಸೇತುವೆಯ ಬಳಿ ಸುವರ್ಣ ನದಿಯಲ್ಲಿ ನಡೆಯಲಿದೆ. ಉಡುಪಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಡ್ರ್ಯಾಗನ್ ಬೋಟ್ ಸ್ಪರ್ಧೆ ಗುರುವಾರದಿಂದ 4 ದಿನಗಳ ಕಾಲ ಉಡುಪಿಯ ಹೇರೂರು ಸೇತುವೆಯ ಬಳಿ ಸುವರ್ಣ ನದಿಯಲ್ಲಿ ನಡೆಯಲಿದೆ.

ಇಂಡಿಯನ್ ಕಯಾಕಿಂಗ್ ಆ್ಯಂಡ್ ಕನೋಯಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಉಡುಪಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಯೋಜನೆ ವತಿಯಿಂದ ನಡೆಯುತ್ತಿರುವ ಈ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ ಶಿಪ್ ನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕವೂ ಸೇರಿದಂತೆ 15 ರಾಜ್ಯಗಳ 700 ಕ್ರೀಡಾಪಡುಗಳು ಭಾಗವಹಿಸಲಿದ್ದಾರೆ.

ಈ ಚಾಂಪಿಯನ್ ಶಿಪ್ ನಲ್ಲಿ 200 ಮೀ, 500 ಮೀ, 2000 ಮೀ ಟ್ರ್ಯಾಕ್ ಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಿಕ್ಸ್ಡ್ ವಿಭಾಗಗಳ ಜ್ಯೂನಿಯರ್ ಮತ್ತು ಸೀನಿಯರ್ ಸ್ಪರ್ಧೆಗಳು ನಡೆಯಲಿವೆ.

12 ಮತ್ತು 22 ಮಂದಿ ಹುಟ್ಟು ಹಾಕುವ ಬೋಟುಗಳಿಗೆ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ. ಡ್ರ್ಯಾಗನ್ ಬೋಟ್ ಸ್ಪರ್ಧೆಯಲ್ಲಿ ಕರ್ನಾಟಕ ಕಳೆದ 4 ವರ್ಷಗಳಿಂದ ಚಾಂಪಿಯನ್ ಶಿಪ್ ಗೆದ್ದುಕೊಳ್ಳುತ್ತಿದೆ. ಈ ಚಾಂಪಿಯನ್ ಶಿಪ್ ನಲ್ಲಿ ಮುಂದಿನ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುವ ತಂಡವನ್ನೂ ಆಯ್ಕೆ ಮಾಡಲಾಗುತ್ತಿದೆ.

bengaluru
bengaluru

LEAVE A REPLY

Please enter your comment!
Please enter your name here