Home Uncategorized ಉಡುಪಿ: ನೀರಿನಲ್ಲಿ ಕೊಚ್ಚಿಹೋಗಿ 40 ಗಂಟೆಯಾದರೂ ಇನ್ನೂ ಸಿಗದ ಶರತ್ ಮೃತದೇಹ, ಮುಳುಗು ತಜ್ಞರಿಂದ ಹುಡುಕಾಟ

ಉಡುಪಿ: ನೀರಿನಲ್ಲಿ ಕೊಚ್ಚಿಹೋಗಿ 40 ಗಂಟೆಯಾದರೂ ಇನ್ನೂ ಸಿಗದ ಶರತ್ ಮೃತದೇಹ, ಮುಳುಗು ತಜ್ಞರಿಂದ ಹುಡುಕಾಟ

8
0

ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಅರಶಿನಗುಂಡಿ ಜಲಪಾತ ವೀಕ್ಷಣೆಗೆಂದು ಹೋಗಿ ಬಂಡೆಯ ಮೇಲೆ ನಿಂತುಕೊಂಡು ಇನ್ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದ ಭದ್ರಾವತಿಯ ಯುವಕ ಶರತ್​ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ಉಡುಪಿ : ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಅರಶಿನಗುಂಡಿ ಜಲಪಾತ ವೀಕ್ಷಣೆಗೆಂದು ಹೋಗಿ ಬಂಡೆಯ ಮೇಲೆ ನಿಂತುಕೊಂಡು ಇನ್ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದ ಭದ್ರಾವತಿಯ ಯುವಕ ಶರತ್​ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ.

ಭದ್ರಾವತಿ ಮೂಲದ ಶರತ್​ ಸ್ನೇಹಿತರೊಂದಿಗೆ ನಿನ್ನೆ ಅಂದರೆ ಜುಲೈ 24ರಂದು ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದು, ಈ ವೇಳೆ ಬಂಡೆಗಳ ಮೇಲೆ ನಿಂತು ರೀಲ್ಸ್​ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಕೊಲ್ಲೂರು ದೇವಾಲಯ ಮತ್ತು ಹೊಸಂಗಡಿಗೆ ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿ ಬಂದು ಮಳೆಗಾಲ ಜಲಪಾತ ವೀಕ್ಷಿಸಲು ಹೋಗೋಣವೆಂದು ಸ್ನೇಹಿತರೆಲ್ಲ ಸೇರಿ ಅರಿಶಿನಗುಂಡಿ ಜಲಪಾತಕ್ಕೆ ಬಂದಿದ್ದಾರೆ.

In a tragic incident, a 23 years old youth from Bhadravati, Shivamogga district drowned in Arasinagundi Falls in Kollur police station limits on Sunday evening. Sharath Kumar who was into business is the victim@XpressBengaluru @vinndz_TNIE pic.twitter.com/WwvlDgCYLe
— Prakash (@prakash_TNIE) July 24, 2023

ಓದು ಮುಗಿಸಿ ಹಿಟಾಚಿ ವ್ಯಾಪಾರ ಮತ್ತು ಕೃಷಿ ಕೆಲಸ ಮಾಡಿಕೊಂಡಿದ್ದ ಶರತ್​, ಈಗ ಮಳೆಗಾಲದಲ್ಲಿ ಕೃಷಿ ಕೆಲಸ ಕಡಿಮೆ ಇದ್ದುದರಿಂದ ದೇವಾಲಯಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿದ್ದರು. ಆದರೆ ದೇವಾಲಯಕ್ಕೆಂದು ಬಂದವರು ಈ ಜಲಪಾತಕ್ಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. 

40 ಗಂಟೆಯಾದರೂ ಸಿಗದ ಮೃತದೇಹ, ಕಾರ್ಯಾಚರಣೆ ಸ್ಥಗಿತ: ಶರತ್ ಬಿದ್ದ ಜಾಗದಲ್ಲಿ ಮತ್ತು ಸುತ್ತಮುತ್ತ ಸ್ಥಳಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಸತತ ಕಾರ್ಯಾಚರಣೆ ನಡೆಸಿದರೂ ಇನ್ನೂ ಯುವಕನ ಮೃತದೇಹ ಸಿಕ್ಕಿಲ್ಲ. ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಳುಗು ತಜ್ಞರು, ಪೊಲೀಸರು ವಾಪಸ್​ ಆಗಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರತ್ ಸ್ನೇಹಿತರು, ಸುಮಾರು 8 ಗಂಟೆಗಳ ಕಾರ್ಯಚರಣೆ ಮಾಡಿದರು ಶರತ್ ನ ದೇಹಲ ಸಿಕ್ಕಿಲ್ಲ. ಅರಿಶಿನಗುಂಡಿ ಜಲಪಾತಕ್ಕೆ ಹೋಗುವ ಮೊದಲು ಸಿಗುವ ತೊರೆಯನ್ನು ದಾಟಲು ಸಾಧ್ಯವಾಗಲಿಲ್ಲ. ಇದರಿಂದ ಕಾರ್ಯಚರಣೆ ನಡೆಸಲು ಸಾಧ್ಯವಾಗದೆ ವಾಪಸ್ಸು ಬಂದಿದ್ದಾರೆ ಎಂದರು. 

Diving Expert Eshwar Malpe at Arasinagundi waterfalls near Kollur trying to search Prashant Kumar who went missing while being videographed by his friend on Sunday@XpressBengaluru @vinndz_TNIE pic.twitter.com/PxjcedX8vm
— Prakash (@prakash_TNIE) July 25, 2023

ಇಂದು ಮಂಗಳವಾರವೂ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಯಶ್ರೀ ಹೊನ್ನೂರು ತಿಳಿಸಿದ್ದಾರೆ.

ಜಲಪಾತಕ್ಕೆ ಪ್ರವೇಶ ನಿಷೇಧ: ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಚಾರಣಕ್ಕೆ ನಿಷೇಧವಿದ್ದರೂ, ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿಧಾಮದಲ್ಲಿರುವ ಜಲಪಾತವನ್ನು ತಲುಪುವ ಮುನ್ನ ಶರತ್ ಮತ್ತು ಆತನ ಸ್ನೇಹಿತ ಗುರುರಾಜ್ 6 ಕಿಲೋ ಮೀಟರ್ ನಡೆದುಕೊಂಡೇ ಹೋಗಿದ್ದಾರೆ. 

ಜಲಪಾತಕ್ಕೆ ಹೋಗಲು ಅನುಮತಿ ಇರಲಿಲ್ಲ. ಅಪಾಯದಲ್ಲಿ ಅವರಾಗಿಯೇ ಹೋಗಿದ್ದಾರೆ. ಎಲ್ಲಾ ಪ್ರವಾಸೋದ್ಯಮ ಇಲಾಖೆ ಗೊತ್ತುಪಡಿಸಿದ ಜಲಪಾತಗಳಲ್ಲಿ ಪ್ರವಾಸಿಗರು ಜಲಪಾತಗಳಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತವು ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಉಡುಪಿ ಎಸ್ಪಿ ಅಕ್ಷಯ್ ಎಂ ಹಕೆ ಹೇಳಿದರು. ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ಗಣಪತಿ ಕೆ, ಮಳೆಗಾಲದಲ್ಲಿ ಎಲ್ಲಾ ಟ್ರೆಕ್ಕಿಂಗ್ ಮಾರ್ಗಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿಸಿದರು. 

ಕೊಲ್ಲೂರಿನ ದಲಿ ಪ್ರದೇಶದಲ್ಲಿ ಗ್ರಾಮ ಅರಣ್ಯ ಸಮಿತಿಯ ಗಮನಕ್ಕೆ ಬಾರದೆ ಮೃತ ವ್ಯಕ್ತಿ ಹಾಗೂ ಆತನ ಸ್ನೇಹಿತರು ಜಲಪಾತಕ್ಕೆ ತೆರಳಿರಬಹುದು. ಇಂತಹ ದುಸ್ಸಾಹಸಕ್ಕೆ ಜನರು ಮುಂದಾಗಬಾರದು ಎಂದರು. 

ಹೊಳೆಯಲ್ಲಿ ಕೊಚ್ಚಿ ಹೋದ ಬಾಲಕಿ: ಉಡುಪಿ ಜಿಲ್ಲೆಯ ಮುಂಡುಬೈಲು ಎಂಬಲ್ಲಿ 13 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ರಚನಾ ಹೊಳೆಯಲ್ಲಿ ಕೊಚ್ಚಿ ಹೋದ ಘಟನೆ ಮೊನ್ನೆ ಭಾನುವಾರ ನಡೆದಿದೆ.

ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹಸುಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ ಅಜ್ಜಿ ಸದಾಮ್ಮ ಶೆಡ್ತಿ ಅವರ ಜೊತೆಯಲ್ಲಿ ಬಾಲಕಿ ಹೋಗಿದ್ದಾಗ ಈ ಘಟನೆ ನಡೆದಿದೆ. ಮಧ್ಯಾಹ್ನ 2 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here