Home Uncategorized ಉದ್ಘಾಟನೆಗೂ ಮುನ್ನವೇ ಪ್ರಯಾಣಿಕರಿಗೆ ಟೋಲ್ ಹೊರೆ; ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ನಾಳೆಯಿಂದ ಟೋಲ್ ಸಂಗ್ರಹ

ಉದ್ಘಾಟನೆಗೂ ಮುನ್ನವೇ ಪ್ರಯಾಣಿಕರಿಗೆ ಟೋಲ್ ಹೊರೆ; ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ನಾಳೆಯಿಂದ ಟೋಲ್ ಸಂಗ್ರಹ

9
0
bengaluru

ಬಹು ಉದ್ದೇಶಿತ ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಟೋಲ್‌ ಕೇಂದ್ರಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿದ್ದು, ನಾಳೆಯಿಂದಲೇ ಪ್ರಯಾಣಿಕರಿಗೆ ಭಾರಿ ಮೊತ್ತದ ಹೊರೆ ಬೀಳಲಿದೆ. ಬೆಂಗಳೂರು: ಬಹು ಉದ್ದೇಶಿತ ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಟೋಲ್‌ ಕೇಂದ್ರಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿದ್ದು, ನಾಳೆಯಿಂದಲೇ ಪ್ರಯಾಣಿಕರಿಗೆ ಭಾರಿ ಮೊತ್ತದ ಹೊರೆ ಬೀಳಲಿದೆ.

ಹೌದು.. 117 ಕಿ.ಮೀ ಉದ್ದದ ಹೆದ್ದಾರಿಯ ಬೆಂಗಳೂರು–ನಿಡಘಟ್ಟವರೆಗಿನ 56 ಕಿ.ಮೀ. ಉದ್ದದ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ ಹತ್ತುಪಥಗಳ ಹೆದ್ದಾರಿಯನ್ನು ಉದ್ಘಾಟಿಸಲಿದ್ದು, ಅದಕ್ಕೂ ಮುನ್ನವೇ ಪ್ರಯಾಣಿಕರು ಟೋಲ್ ಕಟ್ಟಬೇಕಿದೆ. 

ಇದನ್ನೂ ಓದಿ: ಬೆಂಗಳೂರು ಮೈಸೂರು ದಶಪಥ ರಸ್ತೆಗೆ ‘ಕಾವೇರಿ ಎಕ್ಸ್‌ಪ್ರೆಸ್‌ವೇ’ ಎಂದು ಹೆಸರಿಡಲು ​ಗಡ್ಕರಿಗೆ ಪ್ರತಾಪ್ ಸಿಂಹ ಮನವಿ

ಎರಡು ಪಥಗಳ ಸರ್ವೀಸ್ ರಸ್ತೆಗಿಲ್ಲ ಟೋಲ್
ಆರು ಪಥಗಳ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುವವರಿಗೆ ಈ ಟೋಲ್‌ ಅನ್ವಯ ಆಗಲಿದೆ. ತಲಾ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿನ ಸಂಚಾರಕ್ಕೆ ಯಾವುದೇ ಟೋಲ್‌ ಇಲ್ಲ.  ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ.

bengaluru

ಇದನ್ನೂ ಓದಿ: ರೈಲಿಗೆ ಒಡೆಯರ್ ಹೆಸರು; ಸ್ವಾಗತಿಸಿದ ಯದುವೀರ್

ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್‌ ನಿರ್ಮಿಸಲಾಗಿದ್ದು, ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಇಲ್ಲಿ ಟೋಲ್‌ ಶುಲ್ಕ ಕಟ್ಟಿ ಪ್ರಯಾಣಿಸಬೇಕು. ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್‌ನಲ್ಲಿ ಮೈಸೂರು ಕಡೆಯಿಂದ ಪ್ರಯಾಣಿಸುವವರು ಟೋಲ್‌ ಕಟ್ಟಿ ಬೆಂಗಳೂರಿನತ್ತ ಬರಬಹುದು. ಈ ಕೇಂದ್ರಗಳು ತಲಾ 11 ಗೇಟುಗಳನ್ನು ಒಳಗೊಂಡಿದ್ದು, ಫ್ಯಾಶ್‌ ಟ್ಯಾಗ್‌ ಸಹಿತ ವಿವಿಧ ಸೌಲಭ್ಯಗಳನ್ನು ಒಳಗೊಳ್ಳಲಿವೆ.

ಯಾವ ವಾಹನಕ್ಕೆ ಎಷ್ಟು ಟೋಲ್ ಇಲ್ಲಿದೆ ಮಾಹಿತಿ

ವಾಹನ ಮಾದರಿ
ಏಕಮುಖ ಸಂಚಾರ

ರಿಟರ್ನ್ ಜರ್ನಿ
(24 ಗಂಟೆ ಒಳಗೆ)

ಸ್ಥಳೀಯ ವಾಹನಗಳಿಗೆ
ತಿಂಗಳ ಪಾಸ್

ಕಾರ್‌/ಜೀಪ್‌/ವ್ಯಾನ್‌
135 ರೂ
205 ರೂ
70 ರೂ
4,425 ರೂ

ಎಲ್‌ಜಿವಿ, ಎಲ್‌ಸಿವಿ, ಮಿನಿ ಬಸ್‌
220 ರೂ
330 ರೂ
110 ರೂ
7,315 ರೂ

ಟ್ರಕ್‌/ಬಸ್‌
460 ರೂ
690 ರೂ
230 ರೂ
15,325 ರೂ

3 ಆಕ್ಸೆಲ್‌ ವಾಣಿಜ್ಯ ವಾಹನ
500 ರೂ
750 ರೂ
250 ರೂ
16,715 ರೂ

ಭಾರಿ ನಿರ್ಮಾಣ ಯಂತ್ರ/ ಬಹು ಆಕ್ಸೆಲ್‌ ವಾಹನಗಳು (4–6 ಆಕ್ಸೆಲ್‌)
720 ರೂ
1,080 ರೂ
360 ರೂ
24,030 ರೂ

ಅತಿ ಭಾರದ ವಾಹನಗಳು (7ಕ್ಕಿಂತ ಹೆಚ್ಚು ಆಕ್ಸೆಲ್‌)
 880 ರೂ
1,315 ರೂ
440 ರೂ
29,255 ರೂ

 

bengaluru

LEAVE A REPLY

Please enter your comment!
Please enter your name here