Home Uncategorized ಎಪಿಎಲ್ ಪಡಿತರ ಅಕ್ಕಿ ಅಸಮರ್ಪಕ ಪೂರೈಕೆ: ಕುಂಭಕರ್ಣ ನಿದ್ಧೆಯಲ್ಲಿ ರಾಜ್ಯ ಸರ್ಕಾರ- ಜೆಡಿಎಸ್ ಆಕ್ರೋಶ

ಎಪಿಎಲ್ ಪಡಿತರ ಅಕ್ಕಿ ಅಸಮರ್ಪಕ ಪೂರೈಕೆ: ಕುಂಭಕರ್ಣ ನಿದ್ಧೆಯಲ್ಲಿ ರಾಜ್ಯ ಸರ್ಕಾರ- ಜೆಡಿಎಸ್ ಆಕ್ರೋಶ

20
0

ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಎಪಿಎಲ್ ಕಾರ್ಡ್ ದಾರರಿಗೆ ರಿಯಾಯಿತಿ ದರದಲ್ಲಿ ನೀಡುವ ಅಕ್ಕಿ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ಆದರೆ, ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರು: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಎಪಿಎಲ್ ಕಾರ್ಡ್ ದಾರರಿಗೆ ರಿಯಾಯಿತಿ ದರದಲ್ಲಿ ನೀಡುವ ಅಕ್ಕಿ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ಆದರೆ, ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತ ವರದಿಯೊಂದನ್ನು ಸಾಮಾಜಿಕ ಜಾಲ ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಜೆಡಿಎಸ್,  ತಾಂತ್ರಿಕ ಸಮಸ್ಯೆಗಳಿಂದ ಬಿಪಿಎಲ್ ಕಾರ್ಡ್ ದಾರರೂ ಪಡಿತರ ಪಡೆಯಲು ಪರದಾಡುತ್ತಿರುವ ಸಂಗತಿಯೂ ವರದಿಯಾಗಿದೆ. ಹಸಿವಿನಿಂದ ಯಾರೂ ಮಲಗಬಾರದು ಎಂಬ ಧ್ಯೇಯೊದ್ದೇಶ ಹೊಂದಿರುವ ಈ ಪಡಿತರ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿರುವುದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದೆ. 

ಸಮಯ ಇನ್ನೂ ಮೀರಿಲ್ಲ. ಈಗಲಾದರೂ, ಅಗತ್ಯ ಕ್ರಮಗಳನ್ನು ಕೈಗೊಂಡು ಜನತೆಗೆ ಪಡಿತರ ಸಿಗುವ ಅನುಕೂಲ ಕಲ್ಪಿಸಬೇಕಿದೆ ಸರ್ಕಾರ. ಚುನಾವಣೆ ಸಮಯ ಎಂದು ಉಡಾಫೆ ಮಾಡಿದರೆ, ಜನತೆ ಹಸಿವಿನಿಂದ ನರಳಬೇಕಾಗುತ್ತದೆ. ಮಾನವೀಯತೆ ಇಲ್ಲದ ಆಡಳಿತ ವಿಕೃತಿಗೆ ಸಮ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತಾಂತ್ರಿಕ ಸಮಸ್ಯೆಗಳಿಂದ ಬಿಪಿಎಲ್ ಕಾರ್ಡ್ ದಾರರೂ ಪಡಿತರ ಪಡೆಯಲು ಪರದಾಡುತ್ತಿರುವ ಸಂಗತಿಯೂ ವರದಿಯಾಗಿದೆ. ಹಸಿವಿನಿಂದ ಯಾರೂ ಮಲಗಬಾರದು ಎಂಬ ಧ್ಯೇಯೊದ್ದೇಶ ಹೊಂದಿರುವ ಈ ಪಡಿತರ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿರುವುದಕ್ಕೆ ಸರ್ಕಾರವೇ ನೇರ ಹೊಣೆ.
3/4
— Janata Dal Secular (@JanataDal_S) January 25, 2023

LEAVE A REPLY

Please enter your comment!
Please enter your name here