Home Uncategorized ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಂದ ಶೇ. 57ರಷ್ಟು ಜನ, ಈ ಟ್ವಿಟ್ಟರ್ ಸಮೀಕ್ಷೆಯ ಒಳ...

ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಂದ ಶೇ. 57ರಷ್ಟು ಜನ, ಈ ಟ್ವಿಟ್ಟರ್ ಸಮೀಕ್ಷೆಯ ಒಳ ಮರ್ಮವೇನು?

9
0
Advertisement
bengaluru

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಖರೀದಿಸಿದ ಮೇಲೆ ಎಲಾನ್ ಮಸ್ಕ್ ಹೊಸ-ಹೊಸ ಫೀಚರ್​ಗಳನ್ನು ಪರಿಚಯಿಸುತ್ತಿದ್ದಾರೆ. ಅದರಲ್ಲೂ ಬ್ಲೂಟಿಕ್​ಗೆ ಶುಲ್ಕ ವಿಧಿಸಲು ಮುಂದಾಗಿರುವುದಕ್ಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಶೇಕಡ 57ರಷ್ಟು ಜನ ಟ್ವಿಟ್ಟರ್​ ಮುಖ್ಯಸ್ಥನ ಹುದ್ದೆಯಿಂದ ಎಲಾನ್ ಮಸ್ಕ್ ತೊರೆಯಬೇಕೆಂದು ಹೇಳಿದ್ದಾರೆ. ಈ ಮೂಲಕ ಎಲಾನ್ ಮಸ್ಕ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Twitter Gold Checkmark: ಟ್ವಿಟರ್​ನಲ್ಲಿ ಬ್ಲೂ ಜತೆಗೆ ಗ್ರೇ, ಗೋಲ್ಡ್ ಟಿಕ್; ಏನಿದರ ಒಳಮರ್ಮ? ಇಲ್ಲಿದೆ ನೋಡಿ

ನಾನು ಟ್ವಿಟ್ಟರ್​ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೆ? ಎಂದು ಎಲಾನ್​ ಮಸ್ಕ್ ಪೋಲ್​ ಹಾಕಿ ಸಮೀಕ್ಷೆ ನಡೆಸಿದ್ದರು. ಇದಕ್ಕೆ ಶೇಕಡ 57ರಷ್ಟು ಜನ ಹೌದು ನೀವು ಟ್ವಿಟ್ಟರ್​ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕು ಎಂದಿದ್ದಾರೆ. ಪೋಲ್ ಹಾಕುವಾಗ ಸಮೀಕ್ಷೆಯಿಂದ ಬರುವ ರಿಸಲ್ಟ್​ಗೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಇದೀಗ ಸಮೀಕ್ಷೆಯಲ್ಲಿ ಬಹಳಷ್ಟು ಜನ ಎಲಾನ್ ಮಸ್ಕ್​ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್​ ತಮ್ಮ ಮಾತಿಗೆ ಬದ್ಧರಾಗಿ ಟ್ವಿಟ್ಟರ್​ ಮುಖ್ಯಸ್ಥಾನ ತೊರೆಯುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.

Should I step down as head of Twitter? I will abide by the results of this poll.

bengaluru bengaluru

— Elon Musk (@elonmusk) December 18, 2022

ಇನ್ನು ಎಲಾನ್ ಮಸ್ಕ್ ಹಾಕಿದ್ದ ಪೋಲ್​ಗೆ ಇದುವರೆಗೆ 1.75 ಕೋಟಿ ಜನ ಪ್ರತಿಕ್ರಿಯಿಸಿ ತಮ್ಮ-ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. 1.75 ಕೋಟಿ ಜನರ ಪೈಕಿ ಅರ್ಧಕ್ಕಿಂತ ಹೆಚ್ಚು 57ರಷ್ಟು ಜನರು ಎಲಾನ್ ಮಸ್ಕ್​ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ಹೇಳಿದ್ದಾರೆ. ಹೀಗಾಗಿ ಎಲಾನ್ ಮಸ್ಕ್​ ಟ್ವಿಟ್ಟರ್​ ಮುಖ್ಯಸ್ಥನ ಹುದ್ದೆಯಿಂದ ಕೆಳಗಳಿಯುವವರೇ ಎನ್ನುವ ಪ್ರಶ್ನೆಗಳು ಮೂಡಿವೆ.  ಇನ್ನು ಹುದ್ದೆಯಿಂದ ತೊರೆಯಲು ಜನಾಭಿಪ್ರಾಯ ಸಂಗ್ರಹ ಮೂಲಕ ಸುಳಿವು ಕೊಟ್ಟರೆ? ಅಥವಾ ತಮ್ಮ ಜನಪ್ರಿಯತೆ ಎಷ್ಟಿದೆ ಎನ್ನುವುದನ್ನ ತಿಳಿಯಲು ಈ ರೀತಿ ಮಾಡಿದರೆ? ಎನ್ನುವ ಪ್ರಶ್ನೆಗಳು ಹುಟ್ಟು ಹಾಕಿವೆ.

ಒಟ್ಟಿನಲ್ಲಿ ಎಲಾನ್​ ಮಾಸ್ಕ್ ಅವರ ಪೋಲ್​ ಸಮೀಕ್ಷೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ


bengaluru

LEAVE A REPLY

Please enter your comment!
Please enter your name here