Home Uncategorized ಎಲ್ಲಾ ಸಚಿವರಿಗೆ ಹೊಸ ಕಾರು ಭಾಗ್ಯ: ಸುಮಾರು 10 ಕೋಟಿ ರೂ. ವೆಚ್ಚದಲ್ಲಿ 33 ಇನ್ನೋವಾ...

ಎಲ್ಲಾ ಸಚಿವರಿಗೆ ಹೊಸ ಕಾರು ಭಾಗ್ಯ: ಸುಮಾರು 10 ಕೋಟಿ ರೂ. ವೆಚ್ಚದಲ್ಲಿ 33 ಇನ್ನೋವಾ ಖರೀದಿ

5
0
Advertisement
bengaluru

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 100 ದಿನಗಳಲ್ಲಿ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಡೇರಿಸಿದ್ದು, ಈಗ ಎಲ್ಲ ಸಚಿವರಿಗೆ ಹೊಸ ಕಾರುಗಳ ಭಾಗ್ಯ ನೀಡಲಾಗಿದೆ. ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 100 ದಿನಗಳಲ್ಲಿ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಡೇರಿಸಿದ್ದು, ಈಗ ಎಲ್ಲ ಸಚಿವರಿಗೆ ಹೊಸ ಕಾರುಗಳ ಭಾಗ್ಯ ನೀಡಲಾಗಿದೆ.

ರಾಜ್ಯ ಸರ್ಕಾರ 9.9 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಎಲ್ಲಾ 33 ಸಚಿವರಿಗೆ ಶೀಘ್ರದಲ್ಲೇ ಇತ್ತೀಚೆಗೆ ಬಿಡುಗಡೆಯಾದ ಟೊಯೊಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್​ ಮಾಡೆಲ್​ನ 33 ಕಾರುಗಳನ್ನು ಖರೀದಿಸಲು ಮುಂದಾಗಿದೆ.

ಸಿದ್ದರಾಮಯ್ಯ ಸಂಪುಟದ ಎಲ್ಲ ಸಚಿವರಿಗೂ ತಲಾ 30 ಲಕ್ಷ ರೂ. ಬೆಲೆಯ ಹೊಸ ಇನ್ನೋವಾ ಹೈಕ್ರಾಸ್‌-ಹೈಬ್ರಿಡ್‌ ಕಾರುಗಳ ಖರೀದಿಗೆ ಸರ್ಕಾರ ಅನುಮತಿ ನೀಡಿದ್ದು, ಇದಕ್ಕೆ 4ಜಿ ವಿನಾಯಿತಿ ನೀಡಿ 9.90 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ: ಲೋಕಸಭೆ ಚುನಾವಣೆ ಹಿನ್ನೆಲೆ: ಸೆಪ್ಟಂಬರ್ ನಲ್ಲಿ ಕೆಪಿಸಿಸಿ ಪುನಾರಚನೆ; ಸಚಿವರು, ಶಾಸಕರಿಗೆ ಕೊಕ್?​

bengaluru bengaluru

ರಾಜ್ಯ ಸರ್ಕಾರ ನೇರವಾಗಿ ಟೊಯೊಟಾ ಕಿರ್ಲೋಸ್ಕರ್ ಬೆಂಗಳೂರು ಘಟಕದಿಂದ ಕಾರುಗಳನ್ನು ಖರೀದಿಸುತ್ತಿದ್ದು. ಈ ಕಾರುಗಳು ಆಗಸ್ಟ್ 29 ರಂದು ಬಿಡುಗಡೆಯಾದ ವಿಶ್ವದ ಮೊದಲ ಸಂಪೂರ್ಣ ಎಥೆನಾಲ್ ಚಾಲಿತ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿವೆ.

ಇನ್ನು ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸುವ ಸರ್ಕಾರದ ಕ್ರಮವನ್ನು ಟೀಕಿಸಿದ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು, ರಾಜ್ಯ ಸರ್ಕಾರ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಹೆಚ್ಚುವರಿ ಖರ್ಚು ಮಾಡುವಾಗ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಸರ್ಕಾರ 100 ದಿನಗಳನ್ನು ಪೂರೈಸಿದೆ. ಆದರೆ ಇನ್ನೂ ಜನರ ಆರೈಕೆಗಾಗಿ ಹಣದ ವ್ಯವಸ್ಥೆ ಮಾಡಲು ಹೆಣಗಾಡುತ್ತಿದೆ ಎಂದು ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here