Home Uncategorized ಎಸಿ ಮತ್ತು ಡೀಸೆಲ್ ಲೊಕೊಗಳೆರಡರ ದೋಷನಿವಾರಣೆ ಮಾಡಿದ ಮೊದಲ ಮಹಿಳಾ ಲೋಕೋ ಪೈಲಟ್ 

ಎಸಿ ಮತ್ತು ಡೀಸೆಲ್ ಲೊಕೊಗಳೆರಡರ ದೋಷನಿವಾರಣೆ ಮಾಡಿದ ಮೊದಲ ಮಹಿಳಾ ಲೋಕೋ ಪೈಲಟ್ 

11
0

ಕೃಷ್ಣರಾಜಪುರಮ್ ನಲ್ಲಿರುವ ಡೀಸೆಲ್ ಲೋಕೊ ಶೆಡ್ ಪ್ರದೇಶ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ್ದು, ರೈಲುಗಳ ಇಂಜಿನ್ ಗಳ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿರುತ್ತಾರೆ ಆಸಿಯಾ ಬೇಗಮ್.  ಬೆಂಗಳೂರು: ಕೃಷ್ಣರಾಜಪುರಮ್ ನಲ್ಲಿರುವ ಡೀಸೆಲ್ ಲೋಕೊ ಶೆಡ್ ಪ್ರದೇಶ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ್ದು, ರೈಲುಗಳ ಇಂಜಿನ್ ಗಳ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿರುತ್ತಾರೆ ಆಸಿಯಾ ಬೇಗಮ್. 

ರೈಲಿಗೆ ಲೋಕೋವನ್ನು ಅಳವಡಿಸುವುದಕ್ಕೂ ಮುನ್ನ ಪ್ರಮಾಣೀಕರಿಸಿ, ಅನುಮೋದನೆಗೆ ಆಕೆಯ ಸಹಿ ಅತ್ಯಗತ್ಯವಾಗಿರುವುದರಿಂದ ಲೋಕೋ ಮೇಲ್ವಿಚಾರಕರಾಗಿರುವ ಆಸಿಯಾ ಬೇಗಮ್ ಅವರ ಕೆಲಸದಲ್ಲಿ ಗಮನ ಮತ್ತು ಜಾಗರೂಕತೆ ಅತಿ ಹೆಚ್ಚು ಇರಬೇಕಾಗುತ್ತದೆ. 

ಬೇಗಮ್ ಆಂಧ್ರ ಮೂಲದ ಗುಂತಕಲ್ ನವರಾಗಿದ್ದು,  ನೈಋತ್ಯ ರೈಲ್ವೆ ವಲಯದಲ್ಲಿ ಎಸಿ ಮತ್ತು ಡೀಸೆಲ್ ಲೊಕೊಗಳೆರಡರ ದೋಷನಿವಾರಣೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದು ವರ್ಷದ ಹಿಂದೆ ಆಸಿಯಾ ಜೊತೆಗೆ ಇನ್ನೊಬ್ಬ ಮಹಿಳಾ ಸಹೋದ್ಯೋಗಿ ಸೇರಿಕೊಂಡಿದ್ದಾರೆ. 

ನನ್ನ ಅಜ್ಜ (ಕೆ ಪೀರನ್ ಸಾಹೇಬ್) ಅವರೂ ರೈಲ್ವೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. ನಾನೂ ರೈಲ್ವೆ ಸೇರಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಇಂಜಿನಿಯರಿಂಗ್ ಪೂರ್ಣಗೊಳಿಸುತ್ತಿದ್ದಂತೆಯೇ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆ ಬರೆದೆ ಮತ್ತು ತಕ್ಷಣವೇ ಆಯ್ಕೆಯಾದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ನವೆಂಬರ್ 2013 ರಲ್ಲಿ ಆಕೆ ರೈಲ್ವೆಗೆ ಸೇರ್ಪಡೆಯಾದರು. ಆದರೆ ಆಕೆ ರೈಲು ಇಂಜಿನ್‌ಗಳ ಟ್ರಬಲ್‌ಶೂಟಿಂಗ್ ಮಾಡುತ್ತೇನೆಂದು ಕನಸು ಕಂಡಿರಲಿಲ್ಲ. “ನಾನು ಯಾವುದಾದರೂ ಟೇಬಲ್‌ನಲ್ಲಿ ಕುಳಿತು ರೈಲ್ವೇಗಾಗಿ ಕೆಲಸ ಮಾಡುತ್ತೇನೆ ಎಂದು ನಾನು ಊಹಿಸಿದೆ. ಈ ಕೆಲಸವು ನಿಜವಾಗಿಯೂ ವಿಭಿನ್ನವಾಗಿದೆ ಮತ್ತು ನಾನು ಅದನ್ನು ಮಾಡಲು ಇಷ್ಟಪಡುತ್ತೇನೆ. ನನ್ನ ಕೆಲಸದ ಸ್ಥಳದಲ್ಲಿ ನಾನು ಏನು ಮಾಡುತ್ತೇನೆ ಎಂಬುದನ್ನು ಸಂಬಂಧಿಕರು ಅಥವಾ ಸ್ನೇಹಿತರು ಕೇಳಿದಾಗಲೆಲ್ಲಾ ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ ಎನ್ನುತ್ತಾರೆ ಆಸಿಯಾ ಬೇಗಮ್

ಪ್ರಗತಿ, ಯೋಜನೆ ಮತ್ತು ತನಿಖೆಯ ವಿಭಾಗದಲ್ಲಿ ಬೇಗಮ್ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿರುವ ಕಚೇರಿ ಪುರುಷ ಪ್ರಧಾನವಾಗಿದ್ದು, ಆಕೆಯ ಕೆಲಸ ಕಿರಿಯ ಸಹೋದ್ಯೋಗಿಗಳಿಗೂ ಪ್ರೇರಣಾದಾಯಿಯಾಗಿದೆ. 

“ನಾನು ಈಗ ಇದೇ ರೀತಿಯ ಕೆಲಸ ಮಾಡಲು ಇನ್ನೂ ನಾಲ್ಕು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇನೆ” ಎಂದು 6 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳ ತಾಯಿ ಆಗಿರುವ ಆಸಿಯಾ ಬೇಗಮ್ ಹೇಳುತ್ತಾರೆ. ಆಕ್ಸೆಂಚರ್‌ನಲ್ಲಿ ಉದ್ಯೋಗಿಯಾಗಿರುವ ಅವರ ಪತಿ ಜಾಕಿರ್ ಹುಸೇನ್ ಮನೆಕೆಲಸಗಳಲ್ಲಿ ಬೆಂಬಲಿಗರಾಗಿದ್ದಾರೆ ಎಂದು ಬೇಗಮ್  ಹೇಳುತ್ತಾರೆ.

LEAVE A REPLY

Please enter your comment!
Please enter your name here