ಕಲಬುರಗಿ ಅಥವಾ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಭಾಗದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಹೇಳಿದರು. ಕಲಬುರಗಿ: ಕಲಬುರಗಿ ಅಥವಾ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಭಾಗದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಹೇಳಿದರು.
ಡಿ.ಸಿ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಅಥವಾ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕೆಂಬುದು ಬಹಳ ದಿನದಿಂದ ಇಲ್ಲಿನ ಜನರ ಕೂಗಿದೆ. ಈ ನಿಟ್ಟಿನಲ್ಲಿ ಪ್ರದೇಶದ ಚುನಾಯಿತ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಹೇಳಿದರು.
ಇದನ್ನೂ ಓದಿ: ಬಡವರ ಅಕ್ಕಿ ಕಿತ್ತುಕೊಂಡಿದ್ದಕ್ಕೆ ಶಾಪ ತಟ್ಟಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ: ಸಚಿವ ಪ್ರಿಯಾಂಕ್ ಖರ್ಗೆ
ರಾಯಚೂರು ಜಿಲ್ಲೆ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ಒಂದಾಗಿದೆ. ಕಲಬುರಗಿಯಲ್ಲಿನ ಇ.ಎಸ್.ಐ.ಸಿ. ಆಸ್ಪತ್ರೆ, ರಾಯಚೂರಿನ ಓಪೆಕ್ಸ್ ಆಸ್ಪತ್ರೆ ಕಟ್ಟಡದಜಿತೆ ಸಕಲ ಮೂಲಸೌಕರ್ಯವಿದ್ದು, ಇದನ್ನೇ ಏಮ್ಸ್ ಗೆ ಮೇಲ್ದರ್ಜೇಗೇರಿಸಬಹುದು. ಈ ಭಾಗದ ಒಳಿತಿಗೆ ಮತ್ತು ಪ್ರಗತಿಗೆ ಸಂಸದರು ಮುಂದಾಗಬೇಕು ಎಂದು ತಿಳಿಸಿದರು.
ಕೆ.ಕೆ.ಅರ್.ಡಿ.ಬಿ. ಮಂಡಳಿಗೆ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರನ್ನು ನೇಮಿಸಿದಲ್ಲದೆ, ಇತರೆ 10 ಜನ ಜನಪ್ರತಿನಿಧಿಗಳನ್ನು ನೇಮಿಸಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ತಂದಿರುವುದು ಸಂತಸವಾಗಿದೆ. ಡಾ.ಅಜಯ್ ಸಿಂಗ್ ಅವರು, ಮಂಡಳಿ ಮತ್ತು ಪ್ರದೇಶದವನ್ನು ಅಭಿವೃದ್ದಿಯತ್ತ ಮುನ್ನೆಡೆಸಲು ಸಮರ್ಥರಿದ್ದಾರೆ. ಇತ್ತೀಚೆಗೆ ಯೋಜನಾ ಸಚಿವ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದಿನ ಸರ್ಕಾರ ಮಂಡಳಿಯ ವಿವೇಚನೆಗೆ ಶೇ.26 ರಷ್ಟು ಅನುದಾನ ನೀಡುತ್ತಿತ್ತು. ಅದನ್ನು ನಮ್ಮ ಸರ್ಕಾರ ಶೇ.96ಕ್ಕೆ ಹೆಚ್ಚಿಸಿದೆ. ಈ ಮೂಲಕ ಮಂಡಳಿ ಬಲವರ್ಧನೆಯೂ ಮಾಡಲಾಗಿದೆ ಎಂದರು.
ಕಲುಷಿತ ನೀರು ಸೇವನೆ ಪ್ರಕರಣ: ವಾಟರ್ ಆಡಿಟ್ ಕಮಿಟಿ ರಚನೆ
ಇತ್ತೇಚೆಗೆ ಚಿತ್ರದುರ್ಗ, ಮೊನ್ನೆ ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆರ್.ಡಿ.ಪಿ.ಆರ್. ಇಲಾಖೆಯಿಂದ ಆರ್.ಓ.ಪ್ಲ್ಯಾಂಟ್ ಸೇರಿದಂತೆ ಇತರೆ ನೀರು ಕುಡಿಯಲು ಯೋಗ್ಯ ಇರುವ ಕುರಿತು ಅಧ್ಯಯನಕ್ಕೆ “ವಾಟರ್ ಆಡಿಟ್ ಕಮಿಟಿ” ರಚಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಆಯ್ಕೆ ಅಸಿಂಧು ಕೋರಿ ಅರ್ಜಿ: ಸಚಿವರಿಗೆ ಹೈಕೋರ್ಟ್ ಸಮನ್ಸ್
ಈ ಸಮಿತಿಯು ಆರ್‌ಒ ಪ್ಲಾಂಟ್‌ಗಳು ಮತ್ತು ಇತರ ಜಲಮೂಲಗಳ ಮೂಲಕ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರನ್ನು ಪರಿಶೀಲಿಸುತ್ತದೆ ಮತ್ತು ಒಂದು ತಿಂಗಳೊಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಜಲ ಜೀವನ್ ಮಿಷನ್ ಅಡಿಯಲ್ಲಿ ತೆಗೆದುಕೊಳ್ಳಲಾದ ಎಲ್ಲಾ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಆರೋಪವನ್ನು ಸಚಿವರು ನಿರಾಕರಿಸಿದರು. ಕೆಲವೆಡೆ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿರುವ ಬಗ್ಗೆ ವರದಿಗಳಿದ್ದು, ಸರ್ಕಾರ ಆ ಸ್ಥಳಗಳಲ್ಲಿ ಥರ್ಡ್ ಪಾರ್ಟಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.