Home Uncategorized ಏರೋ ಇಂಡಿಯಾ 2023: ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಸಾವಿರಾರು ಜನರು

ಏರೋ ಇಂಡಿಯಾ 2023: ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಸಾವಿರಾರು ಜನರು

19
0

ದ್ವೈವಾರ್ಷಿಕ ಏರೋ ಇಂಡಿಯಾ 2023ರ ಪೂರ್ವಾಭ್ಯಾಸದಿಂದಾಗಿ ಶನಿವಾರ ಬೆಳಗ್ಗೆ ಬಳ್ಳಾರಿ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಬೆಂಗಳೂರಿಗೆ ಸಂಕಟ ಎದುರಾಯಿತು. ಇದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಯೋಜಿಸುವವರ ಮತ್ತು ಇತರೆ ಕಾರ್ಯಗಳಿಗೆ ತೆರಳುತ್ತಿದ್ದವರ ಯೋಜನೆಗಳನ್ನೆಲ್ಲ ಧ್ವಂಸಗೊಳಿಸಿತು.  ಬೆಂಗಳೂರು: ದ್ವೈವಾರ್ಷಿಕ ಏರೋ ಇಂಡಿಯಾ 2023ರ ಪೂರ್ವಾಭ್ಯಾಸದಿಂದಾಗಿ ಶನಿವಾರ ಬೆಳಗ್ಗೆ ಬಳ್ಳಾರಿ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಬೆಂಗಳೂರಿಗೆ ಸಂಕಟ ಎದುರಾಯಿತು. ಇದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಯೋಜಿಸುವವರ ಮತ್ತು ಇತರೆ ಕಾರ್ಯಗಳಿಗೆ ತೆರಳುತ್ತಿದ್ದವರ ಯೋಜನೆಗಳನ್ನೆಲ್ಲ ಧ್ವಂಸಗೊಳಿಸಿತು. ಜೊತೆಗೆ ಗಂಭೀರ ರೋಗಿಗಳೊಂದಿಗೆ ಹಲವಾರು ಆಂಬ್ಯುಲೆನ್ಸ್‌ಗಳನ್ನು ಆಸ್ಪತ್ರೆಗಳಿಗೆ ತಲುಪಲು ವಿಳಂಬಗೊಳಿಸಿತು.

ರಕ್ಷಣಾ ಸಚಿವಾಲಯದ ಅಡಿಯಲ್ಲಿ ರಕ್ಷಣಾ ಉತ್ಪಾದನಾ ಇಲಾಖೆ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರ ನಡುವಿನ ಸಮನ್ವಯದ ಕೊರತೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. 

ಐದು ದಿನಗಳ ದ್ವೈವಾರ್ಷಿಕ ಏರೋ ಇಂಡಿಯಾ 2023 ರ ಸ್ಥಳವಾದ ಏರ್ ಫೋರ್ಸ್ ಸ್ಟೇಷನ್ ಯಲಹಂಕದಲ್ಲಿ (ಎಎಫ್‌ಎಸ್‌ವೈ) ಶನಿವಾರ ಬೆಳಿಗ್ಗೆ ಸಂಪೂರ್ಣ ಪೂರ್ವಾಭ್ಯಾಸಕ್ಕಾಗಿ ನಿರೀಕ್ಷಿತ ಜನಸಂದಣಿಯ ನಿಖರವಾದ ಅಂದಾಜನ್ನು ಹಿರಿಯ ಟ್ರಾಫಿಕ್ ಪೊಲೀಸರಿಗೆ ತಿಳಿಸಿಲ್ಲ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಈ ಕಾರ್ಯಕ್ರಮದಲ್ಲಿ ತಮ್ಮ ಸರಕುಗಳನ್ನು ಪ್ರದರ್ಶಿಸುವ ಹಲವಾರು ಜಾಗತಿಕ ಮತ್ತು ದೇಶೀಯ ರಕ್ಷಣಾ ಮಾರಾಟಗಾರರು ಫೆಬ್ರುವರಿ 13 ರಂದು ಪ್ರಾರಂಭವಾಗುವ ಏರ್ ಶೋಗೆ ಸಮಯಕ್ಕೆ ಸರಿಯಾಗಿ ತಯಾರಾಗಲು ಬಯಸಿದ್ದವರಿಗೆ ಟ್ರಾಫಿಕ್ ಜಾಮ್ ಅಡ್ಡಿಯುಂಟು ಮಾಡಿದೆ. 

ಡಿಸಿಪಿ (ಸಂಚಾರ-ಉತ್ತರ) ಸಚಿನ್ ಘೋರ್ಪಡೆ ಮಾತನಾಡಿ, ಪೂರ್ವಾಭ್ಯಾಸವನ್ನು ವೀಕ್ಷಿಸಲು ಸುಮಾರು 3,000 ಜನರು ಬರುತ್ತಿರುವ ಬಗ್ಗೆ ಸಂಚಾರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ, ಸುಮಾರು 50,000 ಜನರು ಆಗಮಿಸಿದರು.

ಸಾಮಾನ್ಯ ಸಂಚಾರಕ್ಕಿಂತ ಹೆಚ್ಚಾಗಿದ್ದ ಸುಮಾರು 11,000 ವಾಹನಗಳು ಸಮಸ್ಯೆಗೆ ಕಾರಣವಾಗಿವೆ. ಸಾಮಾನ್ಯವಾಗಿ ಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ವಿವಿಧೆಡೆ 12-13 ಗೇಟ್‌ಗಳ ಮೂಲಕ ಪ್ರವೇಶ ನೀಡಲಾಗುತ್ತದೆ. ಆದರೆ ಶನಿವಾರ ಒಂದೇ ರಸ್ತೆಯಲ್ಲಿ ಕೇವಲ 3-4 ಗೇಟ್‌ಗಳ ಮೂಲಕ ಎಲ್ಲರಿಗೂ ಪ್ರವೇಶ ನೀಡಲಾಯಿತು. ಸ್ಥಳದಲ್ಲಿ ಯಾವುದೇ ನಿರ್ಬಂಧ ಅಥವಾ ಬೇರೆ ಮಾರ್ಗಗಳನ್ನು ಸೂಚಿಸಲಾಗಿಲ್ಲ ಎಂದು ಅವರು ಹೇಳಿದರು.

ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ಸಲೀಂ ಮಾತನಾಡಿ, ಸೋಮವಾರದಂದು ಕಾರ್ಯಕ್ರಮ ಪ್ರಾರಂಭವಾಗುವ ಸಂದರ್ಭದಲ್ಲಿ ಇಂತಹ ಟ್ರಾಫಿಕ್ ಉಂಟಾಗುವುದನ್ನು ತಡೆಯುವ ಯೋಜನೆಯನ್ನು ಜಾರಿಗೆ ತರಲು ಭಾನುವಾರ ಟ್ರಾಫಿಕ್ ಗ್ರಿಡ್ ಲಾಕ್‌ಗಳನ್ನು ನಡೆಸಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here