ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಟರ್ಮಿನಲ್ 2ರಲ್ಲಿ ನಿಂತಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಏರ್ ಬಸ್ ಎ320 ವಿಮಾನಕ್ಕೆ ಏರೊ ಬ್ರಿಡ್ಜ್ (ಮೆಟ್ಟಿಲು) ಅಳವಡಿಸುವ ವೇಳೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಈ ಬೆಳವಣಿಗೆ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು. ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಟರ್ಮಿನಲ್ 2ರಲ್ಲಿ ನಿಂತಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಏರ್ ಬಸ್ ಎ320 ವಿಮಾನಕ್ಕೆ ಏರೊ ಬ್ರಿಡ್ಜ್ (ಮೆಟ್ಟಿಲು) ಅಳವಡಿಸುವ ವೇಳೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಈ ಬೆಳವಣಿಗೆ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.
ಕೂಡೇ ಎಚ್ಚೆತ್ತುಕೊಂಡ ವಿಮಾನ ನಿಲ್ದಾಣದ ಅಗ್ನಿ ಶಾಮಕ ದಳದ ಸಿಬ್ಬಂದಿ ವಾಟರ್‌ಜೆಟ್ ಮೂಲಕ ಬೆಂಕಿ ನಂದಿಸಿದರು. ಬಳಿಕ ವಿಮಾನವನ್ನು ತಾಂತ್ರಿಕ ಪರಿಶೀಲನೆಗಾಗಿ ಕಳುಹಿಸಿ, ಸಮಸ್ಯೆ ಸರಿಪಡಿಸಲಾಯಿತು.
ಎಂಜಿನ್ ಚಾಲ್ತಿಯಲ್ಲಿದ್ದ ಕಾರಣ ಫ್ಯಾನ್ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ಹೊಗೆ ಆವರಿಸಿಕೊಂಡಿದೆ. ಹತ್ತಿರದಲ್ಲಿಯೇ ಇದ್ದ ವಿಮಾನ ಸಿಬ್ಬಂದಿ ಮತ್ತು ರನ್‌ವೇ ತಾಂತ್ರಿಕ ವರ್ಗದ ಸಿಬ್ಬಂದಿಯನ್ನು ಅಲ್ಲಿಂದ ದೂರ ಕಳಿಸಲಾಯಿತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದುಬಂದಿದೆ.