Home Uncategorized ಒಂದೇ ಕುಟುಂಬದ ನಾಲ್ವರ ಹತ್ಯೆ: ಕೊಲೆ ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸಿದ ಉತ್ತರ ಕನ್ನಡ...

ಒಂದೇ ಕುಟುಂಬದ ನಾಲ್ವರ ಹತ್ಯೆ: ಕೊಲೆ ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸಿದ ಉತ್ತರ ಕನ್ನಡ ಪೊಲೀಸರು

9
0
bengaluru

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಭಟ್ಕಳ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಗುರುವಾರ ಎಪ್ಪತ್ತು ವರ್ಷದ ಶಂಭು ಭಟ್, ಅವರ ಪತ್ನಿ ಮಾದೇವಿ (60), ಮಗ ರಾಜೀವ್ (40) ಮತ್ತು ಸೊಸೆ ಕುಸುಮಾ (35) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ.

ಕೊಲೆಯ ಹಿಂದೆ ಹಿರಿಯ ಸೊಸೆಯ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಭಟ್ಕಳ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ: ಆಸ್ತಿ ವಿವಾದ: ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

bengaluru

ಪೊಲೀಸರ ಪ್ರಕಾರ, ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ್ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದಾರೆ ಮತ್ತು ಅವರ ಪತ್ನಿ ವಿದ್ಯಾ ತಮಗೆ ಪರಿಹಾರ ಮತ್ತು ಆಸ್ತಿ ಹಂಚಿಕೆಗೆ ಒತ್ತಾಯಿಸಿದ್ದರು.

ಶಂಭು ಭಟ್ ಮೂರು ಎಕರೆ ಜಮೀನು ಹೊಂದಿದ್ದರು. ವಿದ್ಯಾ ಭಟ್ ಅವರಿಗೆ 1.9 ಎಕರೆ ಜಮೀನು ನೀಡಿದ್ದರೂ, ಅವರು ಮೂರು ಎಕರೆಯನ್ನು ತಮಗೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ವಿಷಯ ವಿವಾದಕ್ಕೆ ತಿರುಗಿತ್ತು.

bengaluru

LEAVE A REPLY

Please enter your comment!
Please enter your name here